ಗೋವಾ: ಪಂಚರಾಜ್ಯ ಚುನಾವಣೆಗಳಲ್ಲಿ ಬಿಜೆಪಿ ಫುಲ್ ಬ್ಯುಸಿಯಾಗಿದೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ ಟಿ ರವಿ ಅವರಿಗೆ ಗೋವಾ ಉಸ್ತುವಾರಿ ವಹಿಸಿಕೊಟ್ಟಿದ್ದು, ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿದ್ದಾರೆ. ರಾಹುಲ್ ಗಾಂಧಿ ಸೀರಿಯಸ್ ರಾಜಕಾರಣಿ ಅಲ್ಲ. ಅವರ ಪಕ್ಷದವರೇ ಅವರನ್ನ ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.
ಪಂಚರಾಜ್ಯ ಚುನಾವಣೆ ಅನೌನ್ಸ್ ಆಗಿದೆ. ಇಂಥ ಸಮಯದಲ್ಲಿ ಯಾರಾದ್ರೂ ಹೋಗಿ ತಿಂಗಳುಗಟ್ಟಲೆ ರಜೆನಲ್ಲಿ ಕುಳಿತುಕೊಳ್ತಾರಾ..? ಒಂದಾದ ಮೇಲೆ ಒಂದರಂತೆ ಹತ್ತು ಪ್ರಯತ್ನಗಳು ಸೋತವು ಅಂತ ಯಾರಾದ್ರೂ ಸರ್ಟಿಫಿಕೇಟ್ ಕೊಡ್ತಾರಾ..? ಅಷ್ಟೆ ಅಲ್ಲ ಹತ್ತು ಚುನಾವಣೆ ಸೋತರು ಪರ್ಫೆಕ್ಟ್ ಲೀಡರ್ ಅಂತ ಹೇಳೋಕ್ ಆಗುತ್ತಾ..?.
ರಾಹುಲ್ ಗಾಂಧಿ ಜನರ ಲೀಡರ್ ಅಲ್ವೇ ಅಲ್ಲ. ಜನರ ಲೀಡರ್ ಎಂದರೆ ಅದು ಪ್ರಧಾನಿ ಮೋದಿಯಂತಹವರು. ಅವರ ಪಕ್ಷದ ಹಿರಿಯ ನಾಯಕರು ಏನು ಮಾಡಿದ್ದಾರೆ ಅಂತ ಗೊತ್ತಲ್ಲ. ಅವರ ಹೆಸರಿನ ಮೇಲೆ ಇನ್ನೆಷ್ಟು ವೋಟ್ ಬೀಳ್ತಾವೆ. ಸ್ವಂತ ಕ್ಷೇತ್ರ ಅಮೇಥಿಯಲ್ಲೇ ಅವರ ಹೆಸರಿನ ಮೇಲೆ ಗೆಲ್ಲೋಕೆ ಆಗಲಿಲ್ಲ. ಇನ್ನು ರಾಹುಲ್ ಗಾಂಧಿ ನೇತೃತ್ವದಲ್ಲಿ ಯಾವ ಚುನಾವಣೆ ಗೆದ್ದಿದೆ ಹೇಳಿ ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.