Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕುತೂಹಲ ಕೆರಳಿಸಿದ ಡಿಕೆಶಿ – ಪ್ರಿಯಾಂಕ ಗಾಂಧಿ ಭೇಟಿ : ಅಧಿಕಾರದ ಅಭಯ ಕೊಡ್ತಾರಾ..?

---Advertisement---

 

ದೆಹಲಿ: ನಿನ್ನೆಯಷ್ಟೇ ಡಿಕೆ ಶಿವಕುಮಾರ್ ತಾತನಾದ ಖುಷಿಯಲ್ಲಿದ್ದಾರೆ. ಮನೆಗೆ ಮಹಾಲಕ್ಷ್ಮಿಯ ಆಗಮನವಾಗಿದೆ. ಸಿಎಂ ಆಕಾಂಕ್ಷಿಯ ಹಂಬಲದಲ್ಲಿರುವ ಡಿಕೆಶಿ ಇದೀಗ ಪ್ರಿಯಾಂಕ ಗಾಂಧಿ ಭೇಟಿ ಮಾಡಲು ಹೊರಟಿದ್ದಾರೆ. ಬಹಳ ತಿಂಗಳಿನಿಂದಲೂ ಸಿಎಂ ಬದಲಾವಣೆಯ ಚರ್ಚೆ ನಡೆಯುತ್ತಲೆ ಇದೆ. ಈ ಸಂಬಂಧ ಪ್ರಿಯಾಂಕ ಗಾಂಧಿ ವಾದ್ರಾ ಹಾಗೂ ಡಿಕೆ ಶಿವಕುಮಾರ್ ಭೇಟಿ ಕುತೂಹಲ ಕೆರಳಿಸಿದೆ.

ಅಸ್ಸಾಂಗೆ ಡಿಕೆ ಶಿವಕುಮಾರ್ ಹೋಗಿದ್ದು, ಪ್ರಿಯಾಂಕ ಅವರನ್ನು ಭೇಟಿ ಮಾಡಲಿದ್ದಾರೆ. ಈಗಾಗಲೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ತಮ್ಮ ನಿರೀಕ್ಷೆಯನ್ನು ತಿಳಿಸಿದ್ದಾರೆ. ಒಮ್ಮೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ, ಆಗಲೂ ಸಿಎಂ ಬದಲಾವಣೆಯ ವಿಚಾರ ಚರ್ಚೆಯಾಗಿದೆ. ಆದರೆ ಯಾವುದು ಕಾರ್ಯರೂಪಕ್ಕೆ ಬರ್ತಾ ಇಲ್ಲ. ಡಿಕೆ ಶಿವಕುಮಾರ್ ಅವರ ಪರವಾಗಿ ಹೈಕಮಾಂಡ್ ನಲ್ಲಿ ಹೆಚ್ಚು ಅನುಕಂಪ ಇರುವುದು ಪ್ರಿಯಾಂಕ ವಾದ್ರಾ ಅವರಿಗೆ. ಅವರ ಮೂಲಕ ಏನಾದ್ರೂ ಡಿಕೆ ಶಿವಕುಮಾರ್ ಅವರ ಆಸೆ ಈಡೇರುತ್ತದಾ ಎಂಬುದನ್ನು ನೋಡಬೇಕಾಗಿದೆ.

ಯಾಕಂದ್ರೆ ಪಂಚ ರಾಜ್ಯ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಅವರಿಗೆ ಅಸ್ಸಾಂ ಜವಬ್ದಾರಿಯನ್ನ ನೀಡಲಾಗಿತ್ತು. ಪ್ರಿಯಾಂಕ್ ಗಾಂಧಿ ವಾದ್ರಾ ಅವರು ಕೂಡ ಅಲ್ಲಿನ ಉಸ್ತುವಾರಿಯಾಗಿದ್ದರು. ಹೀಗಾಗಿ ಪದೇ ಪದೇ ಭೇಟಿಯಾಗ್ತಾ ಇತ್ತು. ಅಸ್ಸಾಂ ನಲ್ಲಿ ಚುನಾವಣೆ ಎದುರಿಸಿರುವ ಅಭ್ಯರ್ಥಿಗಳ ಜೊತೆಗೆ ಇಂದು ಒಂದು ಭೋಜನಕೂಟದ ವ್ಯವಸ್ಥೆ ಮಾಡಲಾಗಿದೆ. ಆ ಭೋಜನಕೂಟದಲ್ಲಿ ಪ್ರಿಯಾಂಕ ಜೊತೆಗೆ ಡಿಕೆಶಿ ಕೂಡ ಭಾಗಿಯಾಗ್ತಾ ಇದ್ದಾರೆ. ಇದೊಂದು ಒಳ್ಳೆಯ ವೇದಿಕೆಯಾಗಲಿದ್ದು, ಪ್ರಿಯಾಂಕ ಕಡೆಯಿಂದ ಸಿಎಂ ಕುರ್ಚಿಯ ಬೇಡಿಕೆಯನ್ನ ಇಡುತ್ತಾರಾ..? ಡಿಕೆ ಶಿವಕುಮಾರ್ ಕನಸಿಗೆ ಪ್ರಿಯಾಂಕ ಗಾಂಧಿ ಅವರು ಅಸ್ತು ಅಂತಾರಾ ಎಂಬ ಕುತೂಹಲ ರಾಜ್ಯದ ಜನತೆಯಲ್ಲಿ ಇದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now