ಬೆಂಗಳೂರು: ಸಚಿವ ಸುಧಾಕರ್ ಅವರು ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪ್ರಜ್ಞೆ ಇಲ್ಲದ ಕಾರಣ ವೆಂಟಿಲೇಟರ್ ನಲ್ಲಿಯೇ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಹಲವು ದಿನಗಳಿಂದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎನ್ನಲಾಗಿದೆ. ಕಣ್ಣು ಬಿಟ್ಟು ನೋಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಸುಧಾಕರ್ ಅವರ ಸಹೋದರ ಕುಮಾರ್ ಅವರು ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಸುಧಾಕರ್ ಅವರಿಗೆ ಪ್ರಜ್ಞೆ ಬಂದಿದ್ದು, ಕಣ್ಣುಬಿಟ್ಟು ನೋಡ್ತಾ ಇದ್ದಾರೆ. ಪ್ರಜ್ಞೆ ಬಂದಿದೆ ಅವರಿಗೆ. ನೂರಕ್ಕೆ ನೂರರಷ್ಟು ಅವರು ಗುಣಮುಖರಾಗುವ ವಿಶ್ವಾಸ ಇದೆ. ಹಿರಿಯೂರಿಗೆ ಬಂದು ಮತ್ತೆ ಜನಸೇವೆಯನ್ನ ಮಾಡಿಯೇ ಮಾಡ್ತಾರೆ ಎಂಬ ವಿಶ್ವಾಸವನ್ನು ವ್ಯಕ್ಯಪಡಿಸಿದ್ದಾರೆ.
ಶ್ವಾಸಕೋಶದ ಸಮಸ್ಯೆ ಉಲ್ಭಣಗೊಂಡು ಸಚಿವ ಸುಧಾಕರ್ ಅವರ ಸ್ಥಿತಿ ಗಂಭೀರವಾಗಿತ್ತು. ಎಷ್ಟೇ ಚಿಕಿತ್ಸೆಗೆ ನೀಡಿದರು ಪ್ರಜ್ಞೆ ಬಂದಿಲ್ಲ ಎಂಬ ವಿಚಾರವನ್ನು ತಿಳಿದ ಕಾರ್ಯಕರ್ತರು ಆತಂಕದಲ್ಲಿದ್ದರು. ಬೇಸರದಲ್ಲಿದ್ದರು. ಯಾಕಂದ್ರೆ ಸುಧಾಕರ್ ಅವರು ತುಂಬಾ ಸರಳ ಸ್ಚಭಾವದ, ಸ್ನೇಹ ಜೀವಿ. ಒಂದು ಇರುವೆಗೂ ನೋವಾಗದಂತೆ ನೋಡಿಕೊಳ್ಳುವ ಗುಣ ಅವರಲ್ಲಿದೆ. ಹೀಗಾಗಿ ಕಾರ್ಯಕರ್ತರು ಸಹಜವಾಗಿಯೇ ನೋವಲ್ಲಿದ್ದರು. ಅವರಿಗೂ ಕುಮಾರ್ ಅವರು ಧೈರ್ಯ ತುಂಬಿದ್ದಾರೆ. ಎಲ್ಲರೂ ಧೈರ್ಯವಾಗಿರಿ, ಸಮಾಧಾನದಿಂದ ಇರಿ. ಅವರು ಚಿಕಿತ್ಸೆಗೆ ಸ್ಪಂದಿಸ್ತಾ ಇದ್ದಾರೆ. ಗುಣಮುಖರಾಗ್ತಾರೆ ಎಂದು ಹೇಳಿದ್ದಾರೆ.

ಸಚಿವ ಸುಧಾಕರ್ ಅವರಿಗೆ ಮೊಣಕಾಲಿನ ನೋವಿನ ಸಮಸ್ಯೆಯು ಇತ್ತು. ಕೆಲ ದಿನಗಳ ಹಿಂದಷ್ಟೇ ಮೊಣಕಾಲು ಶಸ್ತ್ರ ಚಿಕಿತ್ಸೆಗೆ ದಾಖಲಾಗಿದ್ದರು. ಏಕಾಏಕಿ ಶ್ವಾಸಕೋಶದ ಸೋಂಕು ಕಾಣಿಸಿಕೊಂಡಿತ್ತು. ಅದಾದ ನಂತರ ಅವರನ್ನು ಮಣಿಪಾಲದಿಂದ ಕಿಮ್ಸ್ ಗೆ ಶಿಫ್ಟ್ ಮಾಡಿ, ಹೆಚ್ಚಿನ ಚಿಕಿತ್ಸೆಯನ್ನು ನೀಡುತ್ತಿದ್ದಾರೆ.
















