ಚಿತ್ರದುರ್ಗ, ಮೇ 01: ರೈತರ ಬದುಕು ಅಸನಾದರೆ ಮಾತ್ರ ನಾಡಿನ ಜನತೆ ನೆಮ್ಮದಿಯಿಂದ ಇರುತ್ತಾರೆ ಹಾಗಾಗಿ ರೈತರಿಗೆ ದೊರೆಯಬೇಕಾದಂತಹ ಸರ್ಕಾರದ ಸೌಲಭ್ಯಗಳು ನೇರವಾಗಿ ರೈತರಿಗೆ ತಲುಪಿಸುವಂತಹ ಕಾರ್ಯವನ್ನ ನಿಷ್ಠೆಯಿಂದ ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ ಎಂದು ಕೆ.ಸಿ ವೀರೇಂದ್ರ (ಪಪ್ಪಿ) ಅವರು ತಿಳಿಸಿದರು.
ತಾಲ್ಲೂಕಿನ ಪಂಡರಹಳ್ಳಿ ಗ್ರಾಮದಲ್ಲಿ ಶುಕ್ರವಾರ ಯರೇ ಓಣಿ ಸಿ.ಸಿ. ರಸ್ತೆ ನಿರ್ಮಾಣದ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಈಗಾಗಲೇ ಮಾಡಲಾಗುತ್ತಿದೆ ಅದರಂತೆಯೇ ರೈತರಿಗೆ ಅನುಕೂಲವಾಗುವಂತಹ ಚೆಕ್ ಡ್ಯಾಂ ಮತ್ತು ಸರ್ಕಾರಿ ಹಳ್ಳಗಳಿಗೆ ಕಟ್ಟೆಗಳನ್ನು ಕಟ್ಟುವಂತ ಕಾಮಗಾರಿಯು ಸಹ ಮುಂದಿನ ದಿನಗಳಲ್ಲಿ ಭೂಮಿ ಪೂಜೆ ನೆರವೇರಿಸಲಾಗುತ್ತದೆ. ಚಿತ್ರದುರ್ಗ ಕ್ಷೇತ್ರದಲ್ಲಿ ಯಥೇಚ್ಛವಾಗಿ ರೈತರು ಅಡಿಕೆ ಬೆಳೆಗಳಿಗೆ ಅವಲಂಬಿತರಾಗಿದ್ದಾರೆ ಹಾಗಾಗಿ ಅಂತರ್ಜಲ ಮಟ್ಟವನ್ನ ಹೆಚ್ಚಿಸುವಲ್ಲಿ ಸರ್ಕಾರದ ವಿವಿಧ ಯೋಜನೆಗಳ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಬಂಡಿ ರಸ್ತೆಗಳು ತಗ್ಗು-ಗುಂಡಿಗಳಿAದ ಕೂಡಿದ್ದು, ರೈತರು ತಮ್ಮ ಬೆಳೆಗಳನ್ನು ಹೊತ್ತೊಯ್ಯಲು ತುಂಬಾ ಸಂಕಷ್ಟ ಅನುಭವಿಸುತ್ತಿದ್ದರು. ಮಳೆಗಾಲದ ಸಮಯದಲ್ಲಿ ಈ ಸಮಸ್ಯೆ ಇನ್ನಷ್ಟು ತೀವ್ರವಾಗಿ ಪರಿಣಮಿಸುತ್ತಿದ್ದು, ದಾರಿಯಲ್ಲೇ ಬೆಳೆ ಹಾನಿಯಾಗುವಂತಹ ಪರಿಸ್ಥಿತಿ ಎದುರಾಗುತ್ತಿತ್ತು. ಇದರಿಂದ ರೈತರ ಪರಿಶ್ರಮಕ್ಕೂ ಸರಿಯಾದ ಮೌಲ್ಯ ಸಿಗದೇ ತೊಂದರೆ ಅನುಭವಿಸುತ್ತಿದ್ದರು. ಜೊತೆಗೆ ರೈತರು ಎತ್ತಿನ ಬಂಡಿ, ಟ್ರಾಕ್ಟರ್‌ಗಳ ಮೂಲಕ ಬೆಳೆ ಸಾಗಾಟ ಮಾಡುವಾಗ ದಾರಿಯ ಅಸಮರ್ಪಕತೆಯಿಂದಾಗಿ ಅನೇಕ ಬಾರಿ ಬೆಳೆ ದಾರಿಯಲ್ಲೇ ಬಿದ್ದು ಹಾಳಾಗುತ್ತಿತ್ತು. ಇದರಿಂದ ಉತ್ಪಾದನೆಯಷ್ಟೇ ಅಲ್ಲ, ರೈತರ ಆರ್ಥಿಕ ಸ್ಥಿತಿಗೂ ಹೊಡೆತ ಬೀಳುತ್ತಿತ್ತು. ಈ ಸಮಸ್ಯೆಗಳನ್ನು ಮನಗಂಡು ಸರ್ಕಾರ ಕೆ.ಆರ್.ಐ.ಡಿ.ಎಲ್ ಯೋಜನೆಯಡಿ ವಿಶೇಷ ಅನುದಾನ ಒದಗಿಸಿ ಬಂಡಿ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಿದೆ ಎಂದು ತಿಳಿಸಿದರು.

ಈ ಒಂದು ಸಂದರ್ಭದಲ್ಲಿ ಕೆ ಆರ್ ಐ ಡಿ ಎಲ್ ವಿಭಾಗದ ಸಹಾಯಕ ಇಂಜಿನಿಯರ್ ಶರತ್, ಹಾಗೂ ಗ್ರಾಮಸ್ಥರಾದ ಸೊಸೈಟಿ ಮಂಜಣ್ಣ, ರವಿಕುಮಾರ್, ಬಸವರಾಜ್, ಮೌನೇಶ್, ವೆಂಕಟೇಶ್, ಸುನಿಲ್, ಈರಪ್ಪ, ಶ್ರೀನಿವಾಸ್, ರಾಜಪ್ಪ, ರಾಮಣ್ಣ, ತಿಪ್ಪೇಸ್ವಾಮಿ, ಶಿವಪ್ಪ, ಈಶಪ್ಪ, ನಾಗರಾಜ್, ತಿಪ್ಪೇಸ್ವಾಮಿ, ತಿಮ್ಮೇಶ್, ಲೋಕೇಶ್ ಹಾಗೂ ಇತರರು ಇದ್ದರು.


















