ಮೈಸೂರು: ಚೇತನ್ ಅಹಿಂಸಾ ಅಣ್ಣಾವ್ರ ಸಮಾಧಿ ಬಗ್ಗೆ ಮಾತನ್ನಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ರು. ಬಳಿಕ ನಿಖಿಲ್ ಕುಮಾರಸ್ವಾಮಿ ಹಾಗೂ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದರು. ಇದೀಗ ನಿಖಿಲ್ ಕುಮಾರಸ್ವಾಮಿ ಒಪನ್ ಚಾಲೆಂಜ್ ಒಂದನ್ನ ಚೇತನ್ ಅವರಿಗೆ ಹಾಕಿದ್ದಾರೆ.
ನನ್ಮ ಅಚ್ಚುಮೆಚ್ಚಿನ ಅಂಬರೀಶ್ ಅಣ್ಣ ಅವರು ನಿಧನರಾದಂತ ಸಂದರ್ಭದಲ್ಲಿ ಕುಮಾರಣ್ಣ ನಡೆದುಕೊಂಡ ರೀತಿ ಏನಿತ್ತು. ಬಹುಶಃ ನಾನು ಅಂಬರೀಶ್ ಅಣ್ಣನನ್ನ ಬಹಳ ಹತ್ತಿರದಿಂದ ನೋಡಿದ್ದೇನೆ. ಕುಮಾರಣ್ಣ ಹಾಗೂ ಅವರ ಬಾಂಧವ್ಯ ಏನಿತ್ತು, ಅದು ಇಂದಿನಿಂದ ಅಲ್ಲ. ಕನ್ನಡ ಚಿತ್ರರಂಗದಲ್ಲಿ ಹಂಚಿಕೆದಾರರಾಗಿ ಕುಮಾರಣ್ಣ ಅವರು, ಜೊತೆಗೆ ಅಂಬರೀಶ್ ಅಣ್ಣ ಅವರನ್ನ ರಾಜಕೀಯಕ್ಕೆ ಕರೆ ತರುವುದಕ್ಕೆ ನಿರಂತರವಾಗಿ ಅವರ ಜೊತೆಗಿದ್ದ ಒಡನಾಟ, ಆ ದಿನಗಳಲ್ಲಿ ನಾನು ಕೂಡ ಚಿಕ್ಕ ವಯಸ್ಸಿನ ಹುಡುಗ. ಅವರು ನಮ್ಮನ್ನ ಬಿಟ್ಟು ಹೋದಂತ ಸಂದರ್ಭದಲ್ಲಿ ಕುಮಾರಣ್ಣ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದರು. ಆಗ ಅವರಿಗೆ ಗೌರವ ಅರ್ಪಿಸಿದ ರೀತಿ. ಹಾಗೇ ವಿಷ್ಣುವರ್ಧನ್ ಅವರು ನಮ್ಮನ್ನಗಲಿದಾಗ ಸರ್ಕಾರಗಳು ಯಾವ ರೀತಿ ಗೌರವ ಅರ್ಪಿಸಿದರು ಎಂಬ ಪ್ರಶ್ನೆ ಕೇಳಿದ್ದಾರೆ.

ಧಮ್ ಇದ್ದರೆ ಬಂದು ಒಂದು ಚುನಾವಣೆಗೆ ನಿಲ್ಲೋಕೆ ಹೇಳಿ. ಮನೆಯಲ್ಲಿ ಕೂತು, ಟ್ವೀಟ್ ಮಾಡೋದಲ್ಲ. ನಾನು ಸಾವಿರ ಬರಿತೀನಿ ಈ ಥರ ಅಂತ ಚೇತನ್ ಅಹಿಂಸಾಗೆ ಸವಾಲು ಹಾಕಿದ್ದಾರೆ. ಅಣ್ಣಾವ್ರ ಬಗ್ಗೆ ಮಾತನ್ನಾಡುವುದಕ್ಕೆ, ಅವರ ಹೆಸರು ಹೇಳುವುದಕ್ಕೂ ಚೇತನ್ ಗೆ ಯೋಗ್ಯತೆ ಇಲ್ಲ ಎಂಬ ಮಾತನ್ನ ನಿಖಿಲ್ ಕುಮಾರಸ್ವಾಮಿ ಹೇಳಿದ್ದರು. ಆ ಮಾತಿಗೆ ಚೇತನ್ ಸೋಷಿಯಲ್‌ಮೀಡಿಯಾದಲ್ಲಿ ನಿಖಿಲ್ ಹಾಗೂ ಕುಮಾರಸ್ವಾಮಿ ಅವರನ್ನು ಟೀಕಿಸಿದ್ದಾರೆ.



















