Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಚಿವ ಸುಧಾಕರ್ ಅವರ ಆರೋಗ್ಯ ಈಗ ಹೇಗಿದೆ : ಶಾಸಕ ರಂಗನಾಥ್ ಹೇಳಿದ್ದೇನು..?

---Advertisement---

ಬೆಂಗಳೂರು : ಸಚಿವ ಡಿ ಸುಧಾಕರ್ ಅವರು ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಈ ಬಗ್ಗೆ ಶಾಸಕ ರಂಗನಾಥ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಯಾರೂ ಕೂಡ ಸರಿಯಾಗಿ ಹೇಳ್ತಿಲ್ಲ. ಡಾಕ್ಟರ್ ಆಗಿ ಆರೋಗ್ಯದ ಬಗ್ಗೆ ಹೇಳ್ತೀನಿ. ಬಲಗಾಲು ಪ್ರೆಶರ್ ಜಾಸ್ತಿ ಆಗಿ ಆಸ್ಟಿ ಆರ್ಥರೈಟೀಸ್ ಆಗಿತ್ತು, ನೀ ಜಾಯಿಂಟ್.

ಮಂಡಿನೋವಿಗೆ ಮೂರ್ನಾಲ್ಕು ಕಡೆ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಸರ್ಜರಿ ಮಾಡಿಸಿಕೊಳ್ಬೇಕು ಅಂತ ಸಲಹೆ ನೀಡಿದ್ದರು. ನನ್ನ ಬಳಿಯೂ ಸಲಹೆಯನ್ನು ಕೇಳಿದ್ದರು ನೀ ರಿಪ್ಲೇಸ್ಮೆಂಟ್ ಮಾಡಿಸಿಕೊಳ್ಳೋದಾ ಹೇಗೆ ಅಂತ. ನಾನು ಸ್ವಲ್ಪ ಕಾಯೋಣಾ ಅಂತಾನೂ ಹೇಳಿದ್ದೆ. ಅಷ್ಟರಲ್ಲಿ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ ಸರ್ಜರಿ ಮಾಡಿಸಿಕೊಂಡಿದ್ದಾರೆ. ನಿಮಗೂ ಎಲ್ಲಾ ಗೊತ್ತಿದೆ. ಅವರು ಸರ್ಜರಿ ಮಾಡಿಸಿಕೊಂಡ ಎರಡು ದಿನ ಚೆನ್ನಾಗಿದ್ರು. ಆ ನಂತರ ಸಡನ್ ಆಗಿ ಆಕ್ಸಿಜನ್ ಕಡಿಮೆ ಆಗಿದೆ.

ಆಕ್ಸಿಜನ್ ಕೊಡುವಾಗ ಆರು ಗಂಟೆಗಳ ಕಾಲ ಆಕ್ಸಿಜನ್ ರಿಕವರಿ ನಾರ್ಮಲ್ ಬರದೆ ಇದ್ದಂತ ಸಂದರ್ಭದಲ್ಲಿ ವೆಂಟಿಲೇಟರ್ ಹಾಕಿದ್ದಾರೆ. ವೆಂಟಿಲೇಟರ್ ನಲ್ಲಿ ದಿನವಿಡೀ ನೋಡಿದ್ರು. ಅಲ್ಲಿಯೂ ಆಕ್ಸಿಜನ್ ಅಷ್ಟು ರೀಚ್ ಆಗಿ ಎಂದ ತಕ್ಷಣವೇ ಎಕ್ಮೋ ಅಂತ ಮಿಷನ್ ಬರುತ್ತೆ. ಲಂಗ್ ಮತ್ತು ಹಾರ್ಟ್ ಸಪೋರ್ಟ್ ಮಾಡುವಂತ ಮಷಿನ್. ಆ ಮಷಿನ್ ಹಾಕಿ ಆರು ವಾರಗಳು ಆಗಿದೆ. ಆದರೂ ಚೇತರಿಕೆ ಅಷ್ಟು ಕಾಣಿಸ್ತಾ‌ ಇಲ್ಲ. ಲಂಗ್ ನಲ್ಲಿ ಒಂದು ರೀತಿಯ ಸೋಂಕು ಕಾಣಿಸಿಕೊಂಡಿದೆ. ಚೇತರಿಕೆ ಆಗದೆ ಇರುವ ಕಳವಳ ಇದೆ. ಬೇಗ ಹುಷಾರಾಗಲಿ ಎಂದು ನಾವೂ ಬಯಸ್ತಾ ಇದ್ದೇವೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...