Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕ್ಷಮೆ ಕೇಳಿದ ಬಳಿಕವೂ ಉಲ್ಟಾ ಹೊಡೆದ ಚೇತನ್ ಅಹಿಂಸಾ..!

---Advertisement---

ಬೆಂಗಳೂರು: ಅಣ್ಣಾವ್ರ ಸಮಾಧಿ ಬಗ್ಗೆ ಮಾತನ್ನಾಡಿ ವಿವಾದಕ್ಕೆ ಕಾರಣವಾಗಿದ್ದರು. ಅಣ್ಣಾವ್ರ ಅಭಿಮಾನಿಗಳ ಕೋಪಕ್ಕೆ‌ಮಣಿದು ನಿನ್ನೆಯಷ್ಟೇ ಕ್ಷಮೆ ಕೇಳಿದ್ದರು. ಇದೀಗ ಮತ್ತೆ ಉಲ್ಟಾ ಹೊಡೆದಿದ್ದಾರೆ. ಕ್ಷಮೆ ಕೇಳಿ ಬಳಿಕ ಚೇತನ್ ಯೂಟರ್ನ್ ಹೊಡೆದಿದ್ದಾರೆ.

ನಿನ್ನೆ ರಾಜ್ ಫ್ಯಾನ್ಸ್ ಬಳಿ ಚೇತನ್ ಕ್ಷಮೆ ಕೇಳಿದ್ದರು. ಇಂದು ತಮ್ಮ ನಿಲುವು ಸಮರ್ಥಿಸಿಕೊಂಡಿದ್ದಾರೆ. ರಾಜ್ ಫ್ಯಾನ್ಸ್ ನಂಗೆ ಧಮ್ಕಿ ಹಾಕಿದ್ದಾರೆ. ಸಾ.ರಾ.ಗೋವಿಂದ್ ಬಳಸಿದ ಪದ ಸರಿಯಿಲ್ಲ. ನಾನು ರಾಜ್ ಅಭಿಮಾನಿನೇ. ಎಲ್ಲಾ ಗೂಂಡಾಗಿರಿ ಮಾಡ್ತಿದ್ದಾರೆ. ಇವರೆಲ್ಲಾ ರಾಜ್ ಹೆಸರಿಗೆ ಮಸಿ ಬಳಿದಿದ್ದಾರೆ. ಮುಂದೆ ಕಾನೂನು ಹೋರಾಟ ಮಾಡ್ತೀನಿ ಎಂದಿದ್ದಾರೆ.

‘ಪ್ರಚಾರ ಅಲ್ಲ ವಿಚಾರ’ ಎಂದು ಡೈಲಾಗ್ ಹೊಡೆದ ಚೇತನ್, ಚಿತ್ರರಂಗದ ಸಮಸ್ಯೆಗಳನ್ನ ರಾಜ್ ಸಮಾಧಿಗೆ ಕಟ್ಟಿದ್ದಾರೆ. ಎಲ್ಲರಿಗೂ ಹೀಗೆ ಸಮಾಧಿ ಕೊಡೋಕೆ ಆಗುತ್ತಾ ಎಂಬ ಪ್ರಶ್ನೆಯನ್ನು ತೆಗೆದಿದ್ದಾರೆ. ಮನೆ ಮುಂದೆ ಬಂದು ದಬ್ಬಾಳಿಕೆ ಮಾಡ್ತಾರೆ. ರಾಜ್ ಫ್ಯಾನ್ಸ್ ಗೆ ವಿಚಾರವಿಲ್ಲ ಎಂದು ಹೇಳುವ ಮೂಲಕ ಮತ್ತೆ ರಾಜ್ ಅಭಿಮಾನಿಗಳ ಕೆಂಗಣ್ಣಿಗೆ ಚೇತನ್ ಗುರಿಯಾಗಿದ್ದಾರೆ.

ರಾಜ್‍ಕುಮಾರ್ ಸಂಘದ ಅಧ್ಯಕ್ಷರಾಗಿದ್ದಂತ ಸಾರಾ ಗೋವಿಂದು ಅವರು ಸೇರಿದಂತೆ ಕರವೇ ಮಂದಿ ನಿನ್ನೆ ಚೇತನ್ ಮನೆ ಮುಂದೆ ಹೋಗಿ ಗಲಾಟೆ ಮಾಡಿದ್ದರು. ಈ ವಿಚಾರಕ್ಕೆ ಕ್ಷಮೆ ಕೇಳಲೇಬೇಕೆಂದು ಹಠ ಮಾಡಿದ್ದರು. ಆ ಕ್ಷಣದಲ್ಲಿ ಮಣಿದು ಕ್ಷಮೆಯನ್ನು ಕೇಳಿದ್ದರು ಚೇತನ್. ಅದರಲ್ಲೂ ಅಣ್ಣಾವ್ರ ಹುಟ್ಟುಹಬ್ಬದ ದಿನವೇ ಈ ರೀತಿಯ ಪೋಸ್ಟರ್ ಹಾಕಿ ಪ್ರಶ್ನೆ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ರಾಜ್ ಕುಮಾರ್ ಅಭಿಮಾನಿಗಳು ಚೇತನ್ ಮೇಲೆ ಕೋಪಿತರಾಗಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...