ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ. ಏ. 24 : ಚಿತ್ರದುರ್ಗ ಸೈನ್ಸ್ ಫೌಂಡೇಶನ್(ರಿ), ಚಿತ್ರದುರ್ಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಚಿತ್ರದುರ್ಗ ಹಾಗೂ ಸಿಲಿಕಾನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ, ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ವಿಜ್ಞಾನ ಲೇಖಕ ಹೆಚ್.ಎಸ್.ಟಿ. ಸ್ವಾಮಿರವರ ಕನ್ನಡ ವಿಜ್ಞಾನ ಕೃತಿ ನಾ ಕಂಡ ಖಗೋಳ ಬಿಡುಗಡೆ ಸಮಾರಂಭವು ಏ. 26ರ ಭಾನುವಾರ ಬೆಳಿಗ್ಗೆ 10.30ಕ್ಕೆ ಜೋಗಿಮಟ್ಟಿ ಸರ್ಕಲ್‍ನ ಐ.ಎಂ.ಎ. ಹಾಲ್‍ನಲ್ಲಿ ನಡೆಯಲಿದೆ.
ಪುಸ್ತಕ ಬಿಡುಗಡೆ ಹಾಗೂ ಕೃತಿಯ ಕುರಿತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ವಿಜ್ಞಾನಿಗಳಾದ ಶ್ರೀನಾಥ್ ರತ್ನಾಕರರವರು ನೇರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಚಿತ್ರದುರ್ಗ ಸೈನ್ಸ್ ಫೌಂಡೇಷನ್‍ನ ಅಧ್ಯಕ್ಷರಾದ ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ ವಹಿಸಲಿದ್ದಾರೆ.
ಜಿಲ್ಲಾ ಶರಣ ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾದ ಡಾ. ಕೆ.ಎಂ. ವೀರೇಶ್, ಚಿತ್ರದುರ್ಗ ಸೈನ್ಸ್ ಫೌಂಡೇಷನ್‍ನ ಉಪಾಧ್ಯಕ್ಷರಾದ ಚಳ್ಳಕೆರೆ ಯರಿಸ್ವಾಮಿ, ಸಿಲಿಕಾನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವ್ಯವಸ್ಥಾಪಕರಾದ ಡಿ. ಗೋಪಾಲಸ್ವಾಮಿ ನಾಯಕ, ಚಿತ್ರದುರ್ಗ ಸೈನ್ಸ್ ಫೌಂಡೇಷನ್‍ನ ಖಜಾಂಚಿ, ಕೆ.ವಿ. ನಾಗಲಿಂಗರೆಡ್ಡಿ, ನಿರ್ದೇಶಕರಾದ ಡಾ|| ಈ. ರುದ್ರಮುನಿ ವಿಜ್ಞಾನ ಲೇಖಕರು ಹಾಗೂ ಕಾರ್ಯದರ್ಶಿ, ಹೆಚ್.ಎಸ್.ಟಿ. ಸ್ವಾಮಿ ಭಾಗವಹಿಸಲಿದ್ದಾರೆ.
















