Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸೋಲು-ಗೆಲುವು ಬೇಧವಿಲ್ಲದೆ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿ: ಹೆಚ್. ಹನುಮಂತಪ್ಪ

---Advertisement---

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 23 : ಯಾವುದೇ ಕ್ರೀಡೆಯಾಗಲಿ ಸೋತವರು, ಗೆದ್ದವರು ಎನ್ನುವ ತಾರತಮ್ಯವಿಲ್ಲದೆ ಸಮಾನವಾಗಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಬೇಕೆಂದು ಸರಸ್ವತಿ ವಿದ್ಯಾಸಂಸ್ಥೆ ಅಧ್ಯಕ್ಷರಾದ ಹೆಚ್.ಹನುಮಂತಪ್ಪ ಹೇಳಿದರು.

 

ಸರಸ್ವತಿ ಕಾನೂನು ಮಹಾ ವಿದ್ಯಾಲಯ ಚಿತ್ರದುರ್ಗ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಎರಡು ದಿನಗಳ ಕಾಲ ನಡೆದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಅಂತರ್ ಮಹಾ ವಿದ್ಯಾಲಯಗಳ ಹೊನಲು ಬೆಳಕಿನ ಪುರುಷರ ಕಬ್ಬಡಿ ಪಂದ್ಯಾವಳಿ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.

 

ಕಾನೂನು ವಿಶ್ವವಿದ್ಯಾಲಯ ಪ್ರತಿ ವರ್ಷವೂ ಕಬ್ಬಡಿ ಆಟಕ್ಕೆ ಪ್ರೋತ್ಸಾಹ ನೀಡುತ್ತ ಬರುತ್ತಿದೆ. ಪಾಠಗಳ ಜೊತೆ ಗ್ರಾಮೀಣ ಕ್ರೀಡೆಗಳ ಕಡೆಗೂ ಗಮನ ಕೊಡಬೇಕು. ಕ್ರೀಡೆಯಲ್ಲಿ ಗೆದ್ದು ಬಹುಮಾನ ಪಡೆಯುವುದು ಮುಖ್ಯವಲ್ಲ. ಸೋತವರು ಮುಂದೆ ಗೆಲ್ಲುವಂತೆ ಬೆನ್ನು ತಟ್ಟಬೇಕೆಂದರು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಹುಬ್ಬಳ್ಳಿಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಖಾಲಿದ್‍ಖಾನ್ ಮಾತನಾಡುತ್ತ ಕಬ್ಬಡಿ ಆಟದ ಹಿಂದೆ ತಿಂಗಳುಗಳ ಕಾಲ ಪರಿಶ್ರಮವಿರುತ್ತದೆ. ಚಿತ್ರದುರ್ಗ ಸರಸ್ವತಿ ಕಾನೂನು ಕಾಲೇಜಿನವರು ಕಬ್ಬಡಿ ಪಟುಗಳಿಗೆ ಅಚ್ಚುಕಟ್ಟಾಗಿ ವಸತಿ, ಊಟದ ವ್ಯವಸ್ಥೆ ಕಲ್ಪಿಸಿದ್ದರು. ಸೋಲು-ಗೆಲುವಿಗಿಂತ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ. ತರಬೇತುದಾರರು, ತೀರ್ಪುಗಾರರು ಹೀಗೆ ಎಲ್ಲರ ಹೊಂದಾಣಿಕೆ ಮುಖ್ಯ ಎಂದು ತಿಳಿಸಿದರು.

 

ಸರಸ್ವತಿ ಕಾನೂನು ಕಾಲೇಜು ಪ್ರಾಚಾರ್ಯರಾದ ಡಾ.ಎಂ.ಎಸ್.ಸುಧಾದೇವಿ ಮಾತನಾಡಿ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆಯೇ ಮುಖ್ಯವಲ್ಲ. ಎಲ್ಲರ ಸಮ್ಮಿಲನವಾಗುತ್ತದೆ. ಕಬ್ಬಡಿಯಲ್ಲಿ ಶಕ್ತಿ, ವೇಗ, ತಂತ್ರ, ತಂಡದ ಒಗ್ಗಟ್ಟು ಅಡಗಿರುತ್ತದೆ. ಸೋಲು-ಗೆಲುವು ಕ್ರೀಡೆಯ ಒಂದು ಭಾಗ. ಗೆದ್ದವರಿಗಿಂತ ಸೋತವರಿಗೆ ಪ್ರೋತ್ಸಾಹ ಹೆಚ್ಚು ಸಿಗಬೇಕು. ಕ್ರೀಡಾ ಮನೋಭಾವವೆ ನಿಜವಾದ ಗೆಲುವು. ನಿರಂತರ ಅಭ್ಯಾಸ ಮುಖ್ಯ. ಎಲ್ಲಾ ತಂಡಗಳು ಧೈರ್ಯದಿಂದ ಸೆಣಸಾಡುವುದರ ಜೊತೆ ಶಿಸ್ತು, ಸಂಯಮದಿಂದ ವರ್ತಿಸಿರುವುದು ನಮಗೆಲ್ಲಾ ಖುಷಿ ಕೊಟ್ಟಿದೆ ಎಂದು ಪ್ರಶಂಶಿಸಿದರು.
ಕಬ್ಬಡಿಯಲ್ಲಿ ತೀರ್ಪುಗಾರರು ಮತ್ತು ತರಬೇತುದಾರರ ಪರಿಶ್ರಮವಿರುತ್ತದೆ. ಸೋತವರು ಕುಗ್ಗದೆ ಮುಂದೆ ಗೆಲ್ಲಬೇಕೆಂಬ ಆತ್ಮವಿಶ್ವಾಸ ಬೆಳೆಸಿಕೊಳ್ಳಿ ಎಂದು ಹೇಳಿದರು.

 

ಸರಸ್ವತಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಡಿ.ಕೆ.ಶೀಲಾ ಮಾತನಾಡಿ ಪ್ರತಿಯೊಂದು ವೃತ್ತಿಯಲ್ಲಿಯೂ ಒತ್ತಡವಿರುತ್ತದೆ. ವ್ಯಾಯಾಮವನ್ನು ಹವ್ಯಾಸವಾಗಿ ಬೆಳೆಸಿಕೊಂಡಾಗ ಮಾನಸಿಕ ಮತ್ತು ದೈಹಿಕವಾಗಿ ಒತ್ತಡದಿಂದ ಹೊರ ಬರಬಹುದು. ವಕೀಲ ವೃತ್ತಿಯಲ್ಲಿರುವವರು ಕಕ್ಷಿದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆಂದರು.

 

ಸರಸ್ವತಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಫಾತ್ಯರಾಜನ್ ವೇದಿಕೆಯಲ್ಲಿದ್ದರು.
ಸರಸ್ವತಿ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಶ್ರೀಶೈಲ ಎಲ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಪಿ.ಸಿ.ಮುರುಗೇಶ್ ವಂದಿಸಿದರು.
ಸರಸ್ವತಿ ಕಾನೂನು ಮಹಾವಿದ್ಯಾಲಯದ ಪ್ರೊಫೆಸರ್‍ಗಳಾದ ಎನ್.ಡಿ.ಗೌಡ, ರವಿಕುಮಾರ್, ರಮೇಶ್, ಕರಿಯಣ್ಣ, ಮುರಳಿ, ಸಂದೇಶ್, ಅಭಿನೇತ್ರಿ, ಹರ್ಷ, ಸಾಹಿ ನಿಕಿತ ಇವರುಗಳು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...