ಬೆಂಗಳೂರು: ಇತ್ತೀಚೆಗಷ್ಟೇ ಜಮೀರ್ ಮತ್ತೆ ಜೆಡೊಎಸ್ ವಾಪಾಸ್ ಹೋಗ್ತಾರೆ ಎಂಬ ಬಗ್ಗೆ ಚರ್ಚೆ ಶುರುವಾಗಿತ್ತು. ಅದಾದ್ಮೇಲೆ ಜಮೀರ್ ಅವರು ಕೂಡ ಕ್ಲಾರಿಟಿ ಕೊಟ್ಟಿದ್ದರು. ಇದೀಗ ನಿಖಿಲ್ ಕುಮಾರಸ್ವಾಮಿ ಅವರು ಈ ಬಗ್ಗೆ ಮಾತನ್ನಾಡಿ, ಜಮೀರ್ ಅವರು ಜೆಡಿಎಸ್ ಬರುವ ಅವಶ್ಯಕತೆ ಏನು ಇಲ್ಲ ಎಂಬ ಮಾತನ್ನ ಹೇಳಿದ್ದಾರೆ.
ಪಕ್ಷ ಕಟ್ಟುವುದಕ್ಕೆ ಕಾರ್ಯಕರ್ತರು ಸಿದ್ಧರಾಗಿದ್ದಾರೆ. ಜಮೀರ್ ಅವರು ಜೆಡಿಎಸ್ ಗೆ ಬರುವ ಅವಶ್ಯಜತೆ ಇಲ್ಲ. ಸುಮ್ಮನೆ ಮಾಧ್ಯಮದಲ್ಲಿ ಬರುತ್ತಿರುವ ವಿಚಾರ ಅದು. ಈಗಾಗಲೇ ಅವರು ಕೂಡ ಈ ಸಂಬಂಧ ಸ್ಪಷ್ಟೀಕರಣ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಸ್ಥಾನಮಾನ ಕೊಟ್ಟಿದೆ. ಅವರ ಬಗ್ಗೆ ಚರ್ಚೆ ಬೇಡ. ನಮ್ಮ ಪಾರ್ಟಿ ಕಟ್ಟೋಕೆ ಕಾರ್ಯಕರ್ತರು ಇದ್ದಾರೆ. ನಮ್ಮ ಕಾರ್ಯಕರ್ತರು ಹೋರಾಟಕ್ಕೆ ಸಿದ್ಧರಿದ್ದಾರೆ. ಪಕ್ಷ ಯಾರನ್ನು ಕೂಡ ನೆಚ್ಚಿಕೊಂಡಿಲ್ಲ ಎಂದಿದ್ದಾರೆ.
ಇನ್ನು ದಾವಣಗೆರೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡದೆ ಇದ್ದ ಕಾರಣಕ್ಕೆ ಮುನಿಸು ಇನ್ನು ಹಾಗೇ ಇದೆ ಎಂಬ ಚರ್ಚೆ ನಡೀತಾ ಇದೆ. ಅಲ್ಪಸಂಖ್ಯಾತರು ಜೆಡಿಎಸ್ ಕಡೆ ಮುಖ ಮಾಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಸಿಎಂ ಯಾವಾಗಲೂ ಅಹಿಂದ ರಾಜಕಾರಣಿ ಅಂತ ಹೇಳ್ತಾರೆ. ಅಹಿಂದದಲ್ಲಿ ಅ ಮತ್ತು ದ ಅನ್ನೋದು ಉರುಳಿ ಹೋಗಿದೆ. ರಾಜಣ್ಣ, ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಾಗಿದೆ. ಕಬ್ಬಾರ್, ನಜೀರ್ ತಲೆದಂಡ ಆಗಿದೆಮ ದಾವಣಗೆರೆಯಲ್ಲಿ ಅಲ್ಪಸಂಖ್ಯಾತರು ಹೆಚ್ಚಾಗಿದ್ದಾರೆ. ಆ ಕ್ಷೇತ್ರದಲ್ಲಿ ಮುಸ್ಲಿಂ ಬಾಂಧವರಿಗೆ ಟಿಕೆಟ್ ಕೊಡಬೇಕಿತ್ತು. ಅಲ್ಲಿ ಜಬ್ಬಾರ್, ನಜೀರ್ ಕೈ ಬಿಟ್ಟಿದ್ದಾರೆ. ಅಹಿಂದದಲ್ಲಿ ಅ – ಅಲ್ಪಸಂಖ್ಯಾತ, ದ – ದಲಿತ ಹೋಗಿದೆ ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











