Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಸವಣ್ಣನವರು ಸಮ ಸಮಾಜಕ್ಕೆ ಹೋರಾಡಿದ ಕ್ರಾಂತಿಕಾರಿ : ಬಿ.ರಾಜಪ್ಪ

---Advertisement---

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 20 : ಕಾರ್ಮಿಕರ ಸಂರಕ್ಷಣಾ ವೇದಿಕೆಯಿಂದ ಪ್ರವಾಸಿ ಮಂದಿರದಲ್ಲಿ ಸೋಮವಾರ ಬಸವ ಜಯಂತಿ ಆಚರಿಸಲಾಯಿತು.

ದಲಿತ ಮುಖಂಡ ಬಿ.ರಾಜಪ್ಪ ಮಾತನಾಡಿ ವಿಶ್ವಕ್ಕೆ ಸಮಾನತೆಯ ಸಂದೇಶವನ್ನು ಸಾರಿದ ಹನ್ನೆರಡನೆ ಶತಮಾನದ ಬಸವಣ್ಣನವರ ಆದರ್ಶ ತತ್ವ ಸಿದ್ದಾಂತಗಳ ಪಾಲಿಸುವವರನ್ನು ಇಂದಿನ ದಿನಮಾನಗಳಲ್ಲಿ ಹುಡುಕುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಜಾತಿ ಅಸಮಾನತೆಯನ್ನು ಹೋಗಲಾಡಿಸುವುದಕ್ಕಾಗಿ ಅಂತರ್ಜಾತಿ ವಿವಾಹವನ್ನು ಪ್ರೋತ್ಸಾಹಿಸುತ್ತಿದ್ದ ಬಸವಣ್ಣನವರು ಸಮ ಸಮಾಜಕ್ಕೆ ಹೋರಾಡಿದ ಕ್ರಾಂತಿಕಾರಿ. ಅಂದಿನ ಅನುಭವ ಮಂಟಪವೆ ಇಂದಿನ ಪಾರ್ಲಿಮೆಂಟ್ ಎಂದು ಬಣ್ಣಿಸಿದರು.

 

ಕಳೆದ 25-30 ವರ್ಷಗಳಿಂದಲೂ ಒಳ ಮೀಸಲಾತಿಗಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಬಸವಣ್ಣನವರ ಧ್ಯೇಯಗಳನ್ನು ತಪ್ಪದೆ ಜೀವನದಲ್ಲಿ ಪಾಲಿಸಬೇಕಿದೆ. ಯಾವುದೆ ಜಾತಿ ತಾರತಮ್ಯ, ಲಿಂಗ ಬೇಧವಿಲ್ಲದೆ ಸಮಾನತೆಗಾಗಿ ಶ್ರಮಿಸಿದ ಬಸವಣ್ಣನವರನ್ನು ಕೇವಲ ಒಂದು ಜಾತಿ ಧರ್ಮಕ್ಕೆ ಮೀಸಲಿಡಬಾರದು ಎಂದು ಹೇಳಿದರು.

ಪಿ.ಕುಮಾರ್ ಮಾತನಾಡುತ್ತ ಕಾಯಕವೇ ಕೈಲಾಸ ಎನ್ನುವ ತತ್ವವನ್ನು ಇಡಿ ಮನು ಕುಲಕ್ಕೆ ಸಾರಿದ ವಿಶ್ವಗುರು ಬಸವಣ್ಣನವರು ಜಾತಿ ತಾರತಮ್ಯದ ವಿರುದ್ದ ಹೋರಾಡಿ ಮಹಾ ಮಾನವತಾವಾದಿ ಎನಿಸಿಕೊಂಡಿದ್ದಾರೆ. ಪ್ರಸ್ತುತ ಸಮಾಜಕ್ಕೆ ಬಸವಣ್ಣನವರ ತತ್ವ ಸಿದ್ದಾಂತಗಳು ಅತ್ಯವಶ್ಯಕ. ಜಯಂತಿಯನ್ನು ಆಚರಿಸುವುದರ ಜೊತೆಗೆ ಅವರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಕೊಳ್ಳುವುದು ಉತ್ತಮ ಎಂದು ನುಡಿದರು.

ಕೆ.ರಾಜಣ್ಣ ಮಾತನಾಡಿ ಸಮಾಜದ ಪರಿವರ್ತನೆಗಾಗಿ ಹೋರಾಡಿದ ಬಸವಣ್ಣನವರು ಎಲ್ಲರ ಮನದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಅಂಬೇಡ್ಕರ್, ಬುದ್ದ, ಬಸವ ಇವರುಗಳನ್ನು ಯಾರು ಮರೆಯುವಂತಿಲ್ಲ. ಎಲ್ಲರ ಗುರಿ ಸಮಾನತೆಯಾಗಿತ್ತು. ಮೂಢನಂಬಿಕೆ, ಅಸ್ಪøಶ್ಯತೆ, ಅಸಮಾನತೆ ವಿರುದ್ದ ಹೋರಾಡಿದ ಬಸವಣ್ಣನವರು ಹನ್ನೆರಡನೆ ಶತಮಾನದಲ್ಲಿ ಅಂತರ್ಜಾತಿ ವಿವಾಹ ಮಾಡಿಸಿ ಜಾತಿ ನಿವಾರಣೆಗಾಗಿ ಹೋರಾಡಿದ ಮಹಾನ್ ಮಾನವತಾವಾದಿ ಎಂದು ಸ್ಮರಿಸಿದರು.

21 ನೇ ಶತಮಾನದಲ್ಲಿ ಬಸವಣ್ಣನವರ ತತ್ವಗಳ ಪಾಲನೆಯಾಗುತ್ತಿಲ್ಲ. ಜಾತಿ ಧರ್ಮಗಳ ನಡುವೆ ಸಂಘರ್ಷ ನಡೆಯುತ್ತಿದೆ. ಶಾಂತಿಯುತ ಸಮಾಜ ನಿರ್ಮಾಣವಾಗಬೇಕಾದರೆ ಬಸವಣ್ಣವರ ಆದರ್ಶಗಳು ಆಚರಣೆಯಲ್ಲಿರಬೇಕೆಂದರು.‌ಕಾರ್ಮಿಕರ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾಗರಾಜ್, ರಾಜ್ಯ ಕಾರ್ಯದರ್ಶಿ ಪರಮೇಶಪ್ಪ, ಚಿಕ್ಕಾಲಘಟ್ಟ ರಂಗಸ್ವಾಮಿ, ತಿಪ್ಪೇಸ್ವಾಮಿ, ಓಬಕ್ಕ, ಲಲಿತಮ್ಮ, ಮಲ್ಲಿಕಾರ್ಜುನ್ ಇನ್ನು ಅನೇಕರು ಬಸವ ಜಯಂತಿಯಲ್ಲಿ ಪಾಲ್ಗೊಂಡಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...