Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ರಂಗೇರಿದ ಶಿಕ್ಷಕರ ಚುನಾವಣೆ ಕಣ : ಪ್ರಚಾರ ಬಿರುಸು

---Advertisement---

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 16 : ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದ್ದು, ತಲಾ 21 ನಿರ್ದೇಶಕ ಸ್ಥಾನಕ್ಕೆ ತೀವ್ರ ಪೈಪೋಟಿ ಆರಂಭವಾಗಿದೆ.

 

ನಾಮಪತ್ರ ಸಲ್ಲಿಕೆ ಏ.11, ಅಂತಿಮ ದಿನ 12, ಪರಿಶೀಲನೆ 13, ಉಮೇದುವಾರಿಕೆ ಹಿಂಪಡೆಯಲು 14ರಂದು ಅಂತಿಮಗೊಂಡಿದ್ದು, ಅಂದೇ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ.

 

ಚಿತ್ರದುರ್ಗ ತಾಲ್ಲೂಕು ಸಂಘದ 21 ನಿರ್ದೇಶಕ ಸ್ಥಾನಗಳಿಗೆ ಏ.19 ರಂದು ಮತದಾನ ನಡೆಯಲಿದ್ದು, ಅಂದೇ ಸಂಜೆ ಫಲಿತಾಂಶ ಪ್ರಕಟಗೊಳ್ಳಲಿದೆ.
ವಿಶೇಷವಾಗಿ ಚಿತ್ರದುರ್ಗ ತಾಲ್ಲೂಕು ಸಂಘದ ಕಣದಲ್ಲಿ 1. ಆಗನೂರು ಪ್ರಕಾಶ್, 2. ಬಸವರಾಜ್ ಸಿ, 3. ಭವ್ಯವಾಣಿ ಕೆ.ಎಂ., 4. ಭುವನೇಶ್ವರಿ ಡಿ.ಜೆ., 5. ದೇವರಾಜ್ ಹೆಚ್, 6. ದಿಲೀಪ್‍ಕುಮಾರ್ ಎಸ್, 7. ದುರುಗೇಶಪ್ಪ ಹೆಚ್, 8. ಗೀತಾ ಸಿ.ಕೆ., 9. ಗುರುಮೂರ್ತಿ ಜಿ.ವಿ., 10. ಗುರುನಾಥ್ ಪಿ.ಜೆ., 11. ಹನುಮಂತಪ್ಪ ಜಿ.ಟಿ., 12. ಹಿದಾಯತ್ ವುಲ್ಲಾ ಷರೀಫ್, 13. ಕುಮಾರಸ್ವಾಮಿ ಬಿ.ಟಿ.ಎಂ., 14. ಲತಾ ಎಂ.ಎಸ್., 15. ಲೋಲಾಕ್ಷಮ್ಮ ಬಿ.ಟಿ., 16. ಮಮತಾ ಕೆ.ಸಿ., 17. ಮಹಾಲಿಂಗಪ್ಪ ಸಿ.ಪಿ., 18. ಮಹಮ್ಮದ್ ತಾಜ್‍ಪೀರ್ ಭಾಷಾ, 19. ಮಹಾಂತೇಶ್ ಜಿ.ಬಿ., 20. ಮಹೇಶ್ ಸಿ.ಎನ್., 21. ನಾಗರಾಜ್ ಎಚ್.ಎಂ., 22. ನಟೇಶ್‍ಕುಮಾರ್ ಆರ್.ಜಿ., 23. ಓಬಳಪ್ಪ ಕೆ.ಕೆ., 24. ಪ್ರಭಾವತಿಬಾಯಿ ಸಿ.ಟಿ., 25. ರಂಗಪ್ಪ ಎಚ್.ಆರ್., 26. ರಂಗಸ್ವಾಮಿ ಎಸ್.ಟಿ., 27. ರೇಣುಕಮ್ಮ ಡಿ, 28. ರೂಪಾ ಸಿ.ಎನ್., 29. ಸರಸ್ವತಿ ಎನ್., 30. ಶಶಿಕಲಾ ಎಸ್, 31. ಶಿವಪ್ರಕಾಶ್ ಬಿ.ಎಚ್., 32. ಶಿವಸ್ವಾಮಿ ಆರ್, 33. ಸುರೇಶ್ ಎನ್., 34. ತಿಪ್ಪೇಸ್ವಾಮಿ ಬಿ.ಎಚ್., 35. ವಸಂತಕುಮಾರ್, 36. ವಾಸಂತಿ ಎಂ.ಬಿ., 37. ವಿಶ್ವನಾಥ್ ಎಂ., 38. ವಿಶ್ವನಾಥಯ್ಯ ಎಸ್. 17 ಮಂದಿಯ ನಾಮಪತ್ರ ವಾಪಸ್ ತೆಗೆಸಿ ಅವಿರೋಧ ಆಯ್ಕೆ ಕಸರತ್ತು ಅಂತಿಮ ಕ್ಷಣದವರೆಗೂ ನಡೆದರು ಎಲ್ಲ ಪ್ರಯತ್ನ ವಿಫಲಗೊಂಡಿದ್ದು, ಪರಿಣಾಮ ಎಲ್ಲರೂ ತಮ್ಮ ಬಣ ರಚಿಸಿಕೊಂಡು ಈಗಾಗಲೇ ಪ್ರಚಾರ ಕಾರ್ಯಕ್ಕೆ ಇಳಿದಿದ್ದಾರೆ.

ನಿರ್ದೇಶಕರಾಗಿ ಆಯ್ಕೆಗೊಂಡವರು ತಾಲ್ಲೂಕು ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಿದ್ದು, ಅಗತ್ಯವಿದ್ದಲ್ಲಿ ಏ.30ರಂದು ಮತದಾನ ನಡೆಯಲಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...