Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಮಾನತಾದ ಬಳಿಕ ಜಬ್ಬರ್ ಫಸ್ಟ್ ರಿಯಾಕ್ಷನ್

---Advertisement---

ಬೆಂಗಳೂರು: ಪಜ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ‌ ಎಂಬ ಕಾರಣಕ್ಕೆ ಎಂಎಲ್ಸಿ ಅಬ್ದುಲ್ ಜಬ್ಬರ್ ಅವರನ್ನ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಸ್ಥಾನದಿಂದ ಅಮಾನತು ಮಾಡಲಾಗಿದೆ. ಈ ಸಂಬಂಧ ಜಬ್ಬರ್ ಅವರು ಕೂಡ ಪ್ರತಿಕ್ರಿಯೆ ನೀಡಿದ್ದು, ಹೈಕಮಾಂಡ್ ಆದೇಶಕ್ಕೆ ಕೆಂಡಾಮಂಡಲರಾಗಿದ್ದಾರೆ. ನನಗೆ ಇದುವರೆಗೂ ಸಸ್ಪೆಂಡ್ ಲೆಟರ್ ಬಂದಿಲ್ಲ ಎಂಬ ಮಾತನ್ನ ಹೇಳಿದ್ದಾರೆ.

ನನಗೆ ಆದೇಶ ಬರಲಿ, ಆಮೇಲೆ ಸರಿಯಾಗಿ ಉತ್ತರ ಕೊಡುತ್ತೇನೆ. ನನ್ನ ಆಡಿಯೋ, ವಿಡಿಯೋ ಇದ್ದರೆ ತೋರಿಸಬೇಕು ಅಲ್ವಾ. ಯಾವ ಆಧಾರ ಇಟ್ಕೊಂಡು ಸಸ್ಪೆಂಡ್ ಮಾಡಿದ್ದಾರೆ. ಇದೆಲ್ಲಾ ಶುದ್ಧ ಸುಳ್ಳು. ಇದುವರೆಗೂ ಸಸ್ಪೆಂಡ್ ಮಾಡಿರುವ ಬಗ್ಗೆ ನನ್ನ ಕೈಗೆ ಬಂದಿಲ್ಲ. ಆ ಪಟ್ಟವನ್ನ ನನಗೆ ಕೊಟ್ಟ ಮೇಲೆ, ನಾನು ಪ್ರಶ್ನೆ ಮಾಡ್ತೀನಿ. ಪತ್ರದ ಮೂಲಕ ಬಂದ್ರೆ ಅದಕ್ಕೆ ಸರಿಯಾದ ಉತ್ತರ ಕೊಡ್ತೇನೆ. ನಾನು ಬರೀ ಡಿಸ್ಟ್ರಿಕ್ ಪ್ರೆಸಿಡೆಂಟ್ ಅಲ್ಲ, ಯೂಥ್ ಕಾಂಗ್ರೆಸ್ ನಿಂದಾನು ಇಲ್ಲಿಗೆ ತನಕ ಬಂದಿರೋದು. ಸುಮ್ನೆ ಹಾಗೇ ಬಂದಿಲ್ಲ.

ಯಾರಿಗಾದ್ರೂ ತೇಜೋವಧೆ ಮಾಡುವಾಗ, ಸುಲಭವಾಗಿ ಸಿಕ್ತಾರೆ ಅಂತ ಮಾಡೋದಲ್ಲ. ಸ್ವಲ್ಪ ದೊಡ್ಡವರಿಗೂ ಮಾಡಿ ತೋರಿಸಬೇಕು. ಪಕ್ಷದಲ್ಲಿ ಎಲ್ಲರಿಗೂ ಗೊತ್ತಿದೆ. ಓಪನ್ ಆಗಿ ಯಾರೂ ವಿರೋಧ ಮಾಡಿದ್ದಾರೆ ಎಂಬುದು. ನಾವೂ ಒಳಗೆ ಮಾಡಿದ್ದೀವಿ ಎಂಬುದು ಇದ್ದರೆ ತೋರಿಸಿ ನಮಗೆ. ನಮ್ಮ ಜೀವನದಲ್ಲಿಯೇ ಆ ರೀತಿಯ ಕೆಲಸವನ್ನ ನಾವೂ ಮಾಡೋದಿಲ್ಲ. ಪತ್ರ ಸಿಕ್ಕ ಮೇಲೆ ಮುಂದೆ ಏನು ಅನ್ನೋದನ್ನ ತೀರ್ಮಾನ ಮಾಡ್ತೇವೆ. ನಜೀರ್ ಅಹ್ಮದ್, ಜಮೀರ್ ಅಹ್ಮದ್ ಬಗ್ಗೆ ಮಾತನಾಡೋದನ್ನ ನೋಡಿದ್ರೆ ನಂಗೆ ಆಶ್ಚರ್ಯ ಆಗುತ್ತೆ. ಜಮೀರ್ ಅವರನ್ನ ಕೇರಳಗೆ ಹಾಕಿ ಕೆಲಸ ಮಾಡಿಸ್ತಾ ಇರುವಾಗ, ಹೋಗ್ಬೇಡಿ ಇಲ್ಲಿ ಕೆಲಸ ಮಾಡಿ ಅಂತ ಹೇಳಿದ್ಮೇಲು, ಅವರು ಇಲ್ಲಿಗೆ ಬರೋಕೆ ಆಗುತ್ತಾ. ಆದ್ರು ಒಂದಿನ ಬಂದು ಹೋಗಿದ್ದಾರೆ. ನೋಡಿದ್ರೆ ಅವರ ಹಸೆರನ್ನು ತೆಗೆದುಕೊಳ್ತಾರೆ ಎಂಬ ಮಾತನ್ನ ಹೇಳಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now