Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳ ಹುಡುಗಿ ಶವವಾಗಿ ಪತ್ತೆ : ಮೃತದೇಹ ಕಂಡು ಕಂಗಲಾದ ತಾಯಿ..!

---Advertisement---

ಚಿಕ್ಕಮಗಳೂರು: ಇಲ್ಲಿನ ಪ್ರಸಿದ್ಧ ತಾಣ ಮಾಣಿಕ್ಯಧಾರದಲ್ಲಿ ನಾಪತ್ತೆಯಾಗಿದ್ದ ಬಾಲಕಿಯನ್ನ ಕಳೆದ ಎರಡು ದಿನಗಳಿಂದ ಹುಡುಕುತ್ತಲೇ ಇದ್ದಾರೆ. ಆದರೆ ಈ ಪ್ರಕರಣ ದುರಂತ ಅಂತ್ಯ ಕಂಡಿದೆ. ಬಾಲಕಿ ಶ್ರೀನಂದಾ ಅವರ ಮೃತದೇಹ ಭೀಕರ ಪ್ರಪಾತದಲ್ಲಿ ಪತ್ತೆಯಾಗಿದೆ. ಮಂಗಳವಾರ ಸಂಜೆ ಸುಮಾರು 6.30ರ ಸುಮಾರಿಗೆ ಮಾಣಿಕ್ಯಧಾರದ ಬಳಿ ಬಾಲಕಿ ಶ್ರೀನಂದಾ ನಾಪತ್ತೆಯಾಗಿದ್ದಳು. ಬಾಲಕಿ ಕಾಣೆಯಾದ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಮತ್ತು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು. ಆದರೆ ಅಂದಿನ ವಾತಾವರಣ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಇದೀಗ ಶವವಾಗಿ ಪತ್ತೆಯಾಗಿದ್ದಾಳೆ.

ಮಗಳ ಆಗಮನಕ್ಕಾಗಿ ಕಾದು ಕೂತಿದ್ದ ಪೋಷಕರಿಗೆ ಇದೀಗ ಆಘಾತ ಎದುರಾಗಿದೆ. ಮಗಳು ಕಿಡ್ಯ್ನಾಪ್ ಆಗಿರಬಹುದು ಎಂಬ ಅನುಮಾನವನ್ನ ಪೋಷಕರು ವ್ಯಕ್ತಪಡಿಸಿದ್ದರು. ಈಗ ನೋಡಿದ್ರೆ ಶವವಾಗಿ ನೋಡಬೇಕಾದ ಪರಿಸ್ಥಿತಿ ಬಂದಿದೆ. ಆ ಫೋಟೋ ನೋಡಿದ ಕೂಡಲೇ ದಿಕ್ಕೆ ತೋಚದಂತೆ ಆಗಿದೆ. ಬೇಸಿಗೆ ರಜೆ ಇರುವ ಕಾರಣ ಉಡುಪಿ, ಮಂಗಳೂರು ಭಾಗಕ್ಕೆ ಪ್ರವಾಸಕ್ಕೆ ಬಂದಿದ್ದರು. ಎಲ್ಲಾ ಕಡೆ ಸುತ್ತಾಡಿ ಬಳಿಕ ಚಿಕ್ಕಮಗಳೂರಿಗೆ ಹೋಗಿದ್ದಾರೆ. ಮಾಣಿಕ್ಯಧಾರ ಬಳಿ ಹೋದಾಗ ಶ್ರೀನಂದಾ ನಾಪತ್ತೆಯಾಗಿದ್ದರು‌.

ರಜೆಗೆಂದು ಬಂದು ಈಗ ಮಗಳನ್ನ ಕಳೆದುಕೊಂಡಿರುವ ಪೋಷಕರಿಗೆ ಎಂಥ ದೊಡ್ಡ ಆಘಾತವಾಗಿದೆ ಅಲ್ವಾ. ಸುಮಾರು 1500 ಅಡಿ ಆಳದ ಕಂದಕದ ಬಳಿ ಮೃತದೇಹ ಬಿದ್ದಿರುವುದು ಪತ್ತೆಯಾಗಿದೆ. ಇವತ್ತಿನ ಕಾರ್ಯಾಚರಣೆ ವೇಳೆ ಸುಮಾರು 5 ಕಿಲೋ ಮೀಟರ್ ದೂರದಲ್ಲಿ ಮೃತದೇಹವನ್ನ ಗುರುತಿಸಿದ್ದಾರೆ. ಮಗಳನ್ನ ಹೇಗಾದರೂ ಮಾಡಿ ಹುಡುಕಿಕೊಡಿ ಎಂದು ಪ್ರಾರ್ಥನೆ ಮಾಡಿದ್ದ ಪೋಷಕರಿಗೆ ಮಗಳ ಸಾವು ಶಾಕ್ ನೀಡಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...