Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹುಬ್ಬಳ್ಳಿ ‘ಲವ್ ಜಿಹಾದ್’ ಆರೋಪ ತೀವ್ರ: ಜಿಮ್ ಟ್ರೈನರ್ ವಿರುದ್ಧ ಪ್ರಕರಣ, ನೇಹಾ ಹಿರೇಮಠ ಹತ್ಯೆಗೂ ಲಿಂಕ್ ಶಂಕೆ

---Advertisement---

ಹುಬ್ಬಳ್ಳಿನಲ್ಲಿ ‘ಲವ್ ಜಿಹಾದ್’ ಆರೋಪಗಳ ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿರುವ ಹಿನ್ನೆಲೆ ಆತಂಕ ಹೆಚ್ಚಾಗಿದೆ. ಜಿಮ್ ಟ್ರೈನರ್‌ಗಳು ಹಿಂದೂ ಯುವತಿಯರನ್ನು ಗುರಿಯಾಗಿಸಿಕೊಂಡು ಪುಸಲಾಯಿಸಿ ಬಳಿಕ ಲೈಂಗಿಕವಾಗಿ ಬಳಸಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿರುವ ಆರೋಪಗಳು ಕೇಳಿಬಂದಿವೆ.ಈ ನಡುವೆ ಸಮೀರ್ ಮುಲ್ಲಾ ಎಂಬ ಜಿಮ್ ಟ್ರೈನರ್ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದು, ಇಬ್ಬರು ಯುವತಿಯರು ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದಾರೆ.

ಸಮೀರ್ ಹಿಂದೂ ಯುವತಿಯರನ್ನೇ ಟಾರ್ಗೆಟ್ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪವೂ ವ್ಯಕ್ತವಾಗಿದೆ.
ಪ್ರಕರಣ ಮತ್ತಷ್ಟು ಗಂಭೀರ ತಿರುವು ಪಡೆದಿದ್ದು, ಈ ಪ್ರಕರಣಕ್ಕೆ ನೇಹಾ ಹಿರೇಮಠ ಹತ್ಯೆ ಪ್ರಕರಣಗೂ ಸಂಬಂಧ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ. ನೇಹಾ ಅವರ ತಂದೆ ನಿರಂಜನ್ ಹಿರೇಮಠ ಅವರು ವಿಡಿಯೋ ಹೇಳಿಕೆಯಲ್ಲಿ, ತಮ್ಮ ಮಗಳ ಹತ್ಯೆಯಲ್ಲಿ ಸಮೀರ್ ಮುಲ್ಲಾ ಹಾಗೂ ಅವರ ಕುಟುಂಬದ ಕೈವಾಡ ಇರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದಾರೆ.ಅವರ ಪ್ರಕಾರ, ಹತ್ಯೆ ಆರೋಪಿಯಾಗಿರುವ ಫಯಾಜ್ ಇದೇ ಸಮೀರ್‌ನ ಜಿಮ್‌ಗೆ ಹೋಗುತ್ತಿದ್ದನೆಂದು ಹೇಳಲಾಗಿದ್ದು, ಅಲ್ಲಿಯೇ ತರಬೇತಿ ಪಡೆದಿದ್ದಾನೆ ಎಂಬ ಶಂಕೆ ಮೂಡಿದೆ. ಇದರಿಂದ ಪ್ರಕರಣದ ತನಿಖೆ ಮತ್ತಷ್ಟು ಸಂಕೀರ್ಣಗೊಂಡಿದೆ.

ಇನ್ನೊಂದೆಡೆ, ಸಮೀರ್ ಕುಟುಂಬದಿಂದ ತಮ್ಮನ್ನು ಸಂಪರ್ಕಿಸಿ ಬಾಡಿ ಬಿಲ್ಡಿಂಗ್ ಸ್ಪರ್ಧೆ ಹೆಸರಿನಲ್ಲಿ ಆರ್ಥಿಕ ನೆರವು ಕೇಳಿದ್ದರೆಂದು ನಿರಂಜನ್ ಹಿರೇಮಠ ತಿಳಿಸಿದ್ದಾರೆ. ಮನೆಗೆ ಬರಲು ಆಹ್ವಾನಿಸಿದ್ದರೂ, ಏನೋ ಅನುಮಾನದಿಂದ ಹೋಗಿರಲಿಲ್ಲ ಎಂದು ಹೇಳಿದ್ದಾರೆ.
ನೇಹಾ ಹಾಗೂ ಫಯಾಜ್ ಇಬ್ಬರೂ 2020ರಲ್ಲಿ ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದು, ನಂತರ ಪ್ರೀತಿಸುತ್ತಿದ್ದರು. ಆದರೆ 2024ರ ಮಾರ್ಚ್‌ನಲ್ಲಿ ಉಂಟಾದ ಮನಸ್ತಾಪದ ಬಳಿಕ ನೇಹಾ ದೂರವಾಗಿದ್ದಳು. ಇದರಿಂದ ಉಂಟಾದ ಸಿಟ್ಟಿನಲ್ಲಿ ಫಯಾಜ್ ಆಕೆಯನ್ನು ಹತ್ಯೆ ಮಾಡಿದ್ದಾನೆ ಎಂಬ ಆರೋಪ ಇದೆ.ಪ್ರಕರಣದ ಎಲ್ಲಾ ಆಯಾಮಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಆರೋಪಗಳ ಸತ್ಯಾಸತ್ಯತೆ ಬಗ್ಗೆ ಸಮಗ್ರ ತನಿಖೆ ಮುಂದುವರಿದಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...