Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅನುಕಂಪದ ಆಧಾರದ ನೇಮಕಾತಿ ಉದ್ಯೋಗ ನಿರಂತರ ಸೌಲಭ್ಯವಲ್ಲ : ಕರ್ನಾಟಕ ಹೈಕೋರ್ಟ್

---Advertisement---

ಬೆಂಗಳೂರು: ಕುಟುಂಬದ ಮುಖ್ಯಸ್ಥ ಅಥವಾ ದುಡಿಯುವ ಸರ್ಕಾರಿ ನೌಕರ ಹಠಾತ್ ಮೃತಪಟ್ಟಾಗ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕುವ ಕುಟುಂಬಕ್ಕೆ ಆಸರೆಯಾಗುವುದು ಮಾತ್ರವೇ ಅನುಕಂಪ ಆಧಾರಿತ ನೇಮಕಾತಿಯ ಮೂಲ ಉದ್ದೇಶ. ಇದು ಸಂಕಷ್ಟದಲ್ಲಿರುವವರಿಗೆ ನೀಡುವ ಏಕಕಾಲೀನ ತುರ್ತು ನೆರವೇ ಹೊರತು, ಕಾಲಕಾಲಕ್ಕೆ ಸೌಲಭ್ಯಗಳನ್ನು ಪಡೆಯಬಹುದಾದ ಶಾಶ್ವತ ಹಕ್ಕಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಅನುಕಂಪದ ಅಡಿಯಲ್ಲಿ ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗೆ ಸೇರಿದ ಇಬ್ಬರು ನೌಕರರು ಉನ್ನತ ಶಿಕ್ಷಣ ಹೊಂದಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಪ್ರಥಮ ದರ್ಜೆ ಸಹಾಯಕ (FDA) ಹುದ್ದೆಗೆ ಪರಿಗಣಿಸುವಂತೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (KAT) ಈ ಹಿಂದೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಕೆಎಟಿಯ ಈ ಕ್ರಮವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಹಾಗೂ ನ್ಯಾಯಮೂರ್ತಿ ಹೇಮಾ ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠವು ಆ ಆದೇಶವನ್ನು ಸಂಪೂರ್ಣವಾಗಿ ರದ್ದುಪಡಿಸಿದೆ.

ಒಮ್ಮೆ ವ್ಯಕ್ತಿಯೊಬ್ಬರು ಅನುಕಂಪದ ಆಧಾರದ ಮೇಲೆ ಸರ್ಕಾರಿ ಹುದ್ದೆಯನ್ನು ಒಪ್ಪಿಕೊಂಡ ನಂತರ, ಆ ಯೋಜನೆಯ ಮೂಲ ಆಶಯ ಈಡೇರಿದಂತಾಗುತ್ತದೆ. ತಮಗೆ ಉನ್ನತ ಶೈಕ್ಷಣಿಕ ಅರ್ಹತೆ ಇದೆ ಎಂಬ ಕಾರಣ ನೀಡಿ, ಅದೇ ಅನುಕಂಪದ ಹೆಸರಿನಲ್ಲಿ ಮತ್ತೆ ಉನ್ನತ ಶ್ರೇಣಿ, ಹೆಚ್ಚಿನ ವೇತನ ಅಥವಾ ಉತ್ತಮ ಹುದ್ದೆಗಳನ್ನು ಹಕ್ಕಿನಂತೆ ಬೇಡುವಂತಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಅಲ್ಲದೆ, ಗ್ರೂಪ್ ‘ಸಿ’ ವೃಂದದೊಳಗೆ ಉನ್ನತ ಅರ್ಹತೆಗಳ ನೆಪವೊಡ್ಡಿ ಒಂದು ಹುದ್ದೆಯಿಂದ ಮತ್ತೊಂದು ಉನ್ನತ ಹುದ್ದೆಗೆ ವರ್ಗಾವಣೆ ಅಥವಾ ನೇಮಕಾತಿ ಕೋರುವ ಅರ್ಜಿಗಳನ್ನು ಪುರಸ್ಕರಿಸುವ ಮುನ್ನ ರಾಜ್ಯ ಸರ್ಕಾರ ಅತ್ಯಂತ ಎಚ್ಚರಿಕೆ ವಹಿಸಬೇಕು ಎಂದೂ ನ್ಯಾಯಾಲಯ ಸೂಚಿಸಿದೆ.

Join WhatsApp

Join Now

Join Telegram

Join Now