Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

BREAKING NEWS : ಏಷ್ಯನ್ ಗೇಮ್ಸ್ 2026: ಇರಾನ್ ಮಣಿಸಿ ಚಿನ್ನದ ಪದಕ ಮುಡಿಗೇರಿಸಿಕೊಂಡ ಭಾರತೀಯ ಮಹಿಳಾ ಕಬಡ್ಡಿತಂಡ!

---Advertisement---

ಐಚಿ-ನಗೋಯಾ: ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026ರ ಕಬಡ್ಡಿ ಸ್ಪರ್ಧೆಯಲ್ಲಿ ಭಾರತದ ಮಹಿಳಾ ತಂಡವು ಭರ್ಜರಿ ಪ್ರದರ್ಶನ ನೀಡಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ.

ಅತ್ಯಂತ ರೋಚಕವಾಗಿ ಸಾಗಿದ ಫೈನಲ್ ಹಣಾಹಣಿಯಲ್ಲಿ ಭಾರತೀಯ ವನಿತೆಯರು ಬಲಿಷ್ಠ ಇರಾನ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ.

ಪಂದ್ಯದುದ್ದಕ್ಕೂ ಸಂಘಟಿತ ಆಟ ಪ್ರದರ್ಶಿಸಿದ ಭಾರತೀಯ ಆಟಗಾರ್ತಿಯರು, ರೇಡಿಂಗ್ ಮತ್ತು ಟ್ಯಾಕಲ್ ಎರಡರಲ್ಲೂ ಪಾರಮ್ಯ ಮೆರೆದು ಎದುರಾಳಿ ಇರಾನ್ ತಂಡದ ಮೇಲೆ ನಿರಂತರ ಒತ್ತಡ ಕಾಯ್ದುಕೊಂಡರು. ಈ ರೋಮಾಂಚಕ ಜಯದೊಂದಿಗೆ ಭಾರತದ ಮಹಿಳಾ ಕಬಡ್ಡಿ ತಂಡವು ದೇಶಕ್ಕೆ ಮತ್ತೊಂದು ಐತಿಹಾಸಿಕ ಚಿನ್ನದ ಪದಕವನ್ನು ತಂದುಕೊಟ್ಟಿದೆ.

 

Join WhatsApp

Join Now

Join Telegram

Join Now