ಬೆಂಗಳೂರು : ಚಿನ್ನದ ದರದಲ್ಲಿ ಇಂದು ಕೂಡ ಕುಸಿತ ಕಂಡಿದೆ. 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು 75 ರೂಪಾಯಿ ಕುಸಿತ ಕಂಡಿದ್ದು, ಈ ಮೂಲಕ 13,500 ರೂಪಾಯಿ ಮಾರುಕಟ್ಟೆ ಬೆಲೆ ಇದೆ. ಹಾಗೇ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 81 ರೂಪಾಯಿ ಕಡಿಮೆಯಾಗಿದ್ದು, 14,728 ರೂಪಾಯಿ ಇದೆ. ಬೆಳ್ಳಿ ಬೆಲೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಯಥಾಸ್ಥಿತಿ ಕಾಪಾಡಿಕೊಂಡಿದೆ.
ಬೆಂಗಳೂರು, ಮುಂಬೈ, ಕೊಲ್ಕತ್ತಾ, ಕೇರಳ, ಭುವನೇಶ್ವರ ಭಾಗದಲ್ಲಿ ಚಿನ್ನದ ಬೆಲೆ ಒಂದೇ ರೀತಿ ಇದೆ. ಅಂದ್ರೆ ಒಂದು ಗ್ರಾಂಗೆ 13,500 ರೂಪಾಯಿ ಇದೆ. ಹಾಗೇ ಚೆನ್ನೈನಲ್ಲಿ 13,600, ದೆಹಲಿಯಲ್ಲಿ 13,515, ಅಹ್ಮದಾಬಾದ್ ನಲ್ಲಿ 13,505, ಜೈಪುರದಲ್ಲಿ 13,515, ಲಕ್ನೋದಲ್ಲೂ 13,515 ರೂಪಾಯಿ ಇದೆ.
ಇನ್ನು ಬೇರೆ ದೇಶದಲ್ಲಿ ಚಿನ್ನದ ಬೆಲೆಯನ್ನು ನೋಡೋದಾದ್ರೆ, ದುಬೈ ನಲ್ಲಿ 12,814 ರೂಪಾಯಿ, ಅಮೆರಿಕಾದಲ್ಲಿ 13,184 ರೂಪಾಯಿ, ಕತಾರ್ ನಲ್ಲಿ 12,843 ರೂಪಾಯಿ ಹಾಗೇ ಸೌದಿ ಅರೇಬಿಯಾದಲ್ಲಿ 12,754 ರೂಪಾಯಿ ಬೆಲೆ ಇದೆ. ಬೆಳ್ಳಿ ಬೆಲೆಯಲ್ಲಿ ಅಷ್ಟೇನು ವ್ಯತ್ಯಾಸ ಕಂಡು ಬಂದಿಲ್ಲ. ಚಿನ್ನ ಬೆಳ್ಳಿ ದರದಲ್ಲಿ ದಿಢೀರನೇ ಏರಿಕೆಯಾಗಿದ್ದನ್ನು ಕಂಡು ಗ್ರಾಹಕರಂತು ತುಂಬಾನೇ ಬೇಸರ ಮಾಡಿಕೊಂಡಿದ್ದರು. ಈಗ ಇಳಿಕೆಯತ್ತ ಸಾಗುತ್ತಿದೆ. ಈಗಲು ಮಧ್ಯಮವರ್ಗದವರಿಗೇನು ಈ ಚಿನ್ನದ ಲೋಹ ಕೈಗೆಟಕುವುದಿಲ್ಲ. ಆದರೂ ಇಳಿಕೆಯತ್ತ ಸಾಗುತ್ತಿರುವುದಕ್ಕೆ ಏನೊ ಒಂಥರ ಖುಷಿಯಲ್ಲಿದ್ದಾರೆ ಮಹಿಳಾ ಮಣಿಯರು. ತಜ್ಞರ ಪ್ರಕಾರ ಇನ್ನು ಸ್ವಲ್ಪ ದಿನ ಕಾದು ನೋಡುವುದು ಉತ್ತಮ. ಇನ್ನಷ್ಟು ಇಳಿಕೆಯೇ ಆಗಬಹುದು ಎಂಬ ಮಾತುಗಳ ಸಹ ಕೇಳಿ ಬರ್ತಾ ಇದೆ.
















