ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಕೆಡಿ ಸಿನಿಮಾದ ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ ಹಾಡು ಸಿಕ್ಕಾಪಟ್ಟೆ ಚರ್ಚೆಯಾಗ್ತಾ ಇದೆ. ವಿವಾದಕ್ಕೂ ಕಾರಣವಾಗಿದೆ. ಆ ಹಾಡಿನಲ್ಲಿರುವ ಅಶ್ಲೀಲ ಸಾಹಿತ್ಯಕ್ಕೆ ಎಲ್ಲರ ವಿರೋಧ ವ್ಯಕ್ಯವಾಗ್ತಾ ಇದೆ. ಅಮ್ಮನ ಮೇಲಿನ ಅದ್ಭುತ ಸಾಹಿತ್ಯ ಬರೆಯುತ್ತಿದ್ದ ಪ್ರೇಮ್ ಅವರ ಬರವಣಿಗೆ ಇಂಥ ಪದವಾ ಎಂದು ಬಾಯಿ ಮೇಲೆ ಬೆರಳಿಟ್ಟುಕೊಳ್ತಿದ್ದಾರೆ. ಇದೀಗ ಸರ್ಸೆ ಸರ್ಸೆ ಸೆರಗಾ ಸರ್ಸೆ ಹಾಡಿಗೆ ಹೆಜ್ಜೆ ಹಾಕಿರೋ ನೋರಾ ಫತೇಹಿ ಅದಕ್ಕೆ ರಿಯಾಕ್ಟ್ ಮಾಡಿದ್ದಾರೆ.
ಕೆಲವು ವಿಷಯಗಳನ್ನು ನಾನು ಸ್ಪಷ್ಟಪಡಿಸಬೇಕಿದೆ. ನಾನು ಈ ಹಾಡನ್ನು ಮೂರು ವರ್ಷಗಳ ಹಿಂದೆ ಕನ್ನಡ ಭಾಷೆಯಲ್ಲಿ ಚಿತ್ರೀಕರಿಸಿದ್ದು, ಸಂಜಯ್ ದತ್ ಅವರಂತಹ ದೊಡ್ಡ ಕಲಾವಿದರು ಇರುವ ಸಿನಿಮಾ ಎಂಬ ಕಾರಣಕ್ಕೆ ನಾನು ಒಪ್ಪಿಕೊಂಡಿದ್ದೆ. ಕನ್ನಡ ಭಾಷೆ ನನಗೆ ತಿಳಿಯುವುದಿಲ್ಲ. ಶೂಟಿಂಗ್ ಮಾಡುವಾಗ ಹಾಡಿನ ಅರ್ಥ ತಿಳಿಯಲು ನಾನು ಚಿತ್ರತಂಡದ ಮೆ ಅವಲಂಬಿತಳಾಗಿದ್ದೆ. ಅವರು ಭಾಷಾಂತರ ಮಾಡಿ ಹೇಳಿದಾಗ ನನಗೆ ಯಾವುದೂ ಅಸಭ್ಯ ಅಂತ ಅನಿಸಿರಲಿಲ್ಲ. ಹಾಡು ಬಿಡುಗಡೆಗೆ ನನ್ನನ್ನು ಕರೆದಾಗ, ನನ್ನ ಫೋಟೋಗಳನ್ನು ಬಳಸಿದ ರೀತಿ ಕಂಡು ನನಗೆ ಬೇಸರವಾಯ್ತು.
ನನ್ನ ಮತ್ತು ಸಂಜಯ್ ದತ್ ಅವರ ಫೋಟೋಗಳನ್ನು ಎಐ ಮೂಲಕ ಸೃಷ್ಟಿಸಿ ಬಳಸಿದ್ದಾರೆ. ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿಯೇ ನನಗೆ ಕಿರಿಕಿರಿ ಆಯ್ತು. ಹಿಂದಿ ವರ್ಷನ್ ಹಾಡು ಕೇಳಿದಾಗ ನನಗೆ ಎಲ್ಲವೂ ಅರ್ಥವಾಯ್ತು. ಯಾಕಂದ್ರೆ ನಂಗೆ ಹಿಂದಿ ಬರುತ್ತೆ. ಇದು ಸರಿ ಅಲ್ಲ ಅಂತ ನಿರ್ದೇಶಕರಿಗೆ ನಾನು ಅಂದೇ ಹೇಳಿದ್ದೆ. ನಾನು ಸಿನಿಮಾದಿಂದ ಹೊರಗೆ ಬರುತ್ತೇನೆ. ನಾವು ಯಾವುದೇ ಕಾರಣಕ್ಕೂ ಇದನ್ನು ಪ್ರಚಾರ ಮಾಡಲ್ಲ. ನನ್ನ ಘನತೆಗೆ ಧಕ್ಕೆ ಆಗಿದೆ ಅಂತ ನಿರ್ದೇಶಕರಿಗೆ ಹೇಳಿದೆ ಎಂದು ಬೇಸರ ಹೊರ ಹಾಕಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.
















