ಮಾರ್ಚ್ 15 ರಂದು ಟಿ.ಎನ್.ಷಣ್ಮುಖ ಅವರ ಬದುಕು ಮತ್ತು ಬರಹ ಕುರಿತ ವಿಚಾರ ಸಂಕಿರಣ

1 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಮಾ. 12 : ಪತ್ರಕರ್ತ ಟಿ.ಎನ್.ಷಣ್ಮುಖ ಅವರ ಬದುಕು ಮತ್ತು ಬರಹ ಕುರಿತ ವಿಚಾರ ಸಂಕಿರಣವೂ ಆಶಯ, ಅರಳಿ, ಗೆಳೆಯರ ಬಳಗ, ರೋಟರಿ ಕ್ಲಬ್ ಚಿನ್ನುಲಾದ್ರಿ ಸಂಯುಕ್ತಾಶ್ರಯದಲ್ಲಿ ಮಾ. 15ರ ಭಾನುವಾರ ಜಿಲ್ಲಾಧಿಕಾರಿಗಳ ಕಚೇರಿ ವೃತ್ತದಲ್ಲಿನ ಎಸ್.ಆರ್.ಬಿ.ಎಂ.ಎಸ್.ರೋಟರಿ ಭಾಲಭವನದಲ್ಲಿ ಬೆಳಿಗ್ಗೆ 10ಕ್ಕೆ ಹಮ್ಮಿಕೊಳ್ಳಲಾಗಿದೆ.

ವಿಚಾರ ಸಂಕಿರಣದ ಉದ್ಘಾಟನೆಯನ್ನು ಸಾಹಿತಿಗಳಾದ ಡಾ.ಲೋಕೇಶ್ ಅಗಸನಕಟ್ಟೆ ನಡೆಸಲಿದ್ದಾರೆ. ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತರಾದ ಚಳ್ಳಕೆರೆ ಯರ್ರಿಸ್ವಾಮಿ ವಹಿಸಲಿದ್ದಾರೆ.  ಪತ್ರಕರ್ತ ಟಿ.ಎನ್.ಷಣ್ಮುಖ ಅವರ ಬದುಕು ಮತ್ತು ಬರಹ ಕುರಿತು ಸಾಹಿತಿಗಳಾದ ಡಾ.ದಾದಾಪೀರ್ ನವಿಲೇಹಾಳ್ ಮಾತನಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಕರಿಯಪ್ಪ ಮಾಳಿಗೆ, ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿಯ ಸಂಚಾಲಕರಾದ ಜೋಗಿಮಟ್ಟಿ ಈ.ಮಹೇಶಬಾಬು, ಹಿರಿಯ ಪತ್ರಕರ್ತರಾದ ಗೌನಹಳ್ಳಿ ಗೋವಿಂದಪ್ಪ, ಸಾಕ್ಯ,ಸಾಮಾಜಿಕ ಕಾರ್ಯಕರ್ತರಾದ ಹೊಳೆಯಪ್ಪ ಕೆ ಕನ್ನಡ ಸಾಹಿತ್ಯ ಪರಿಷತ್‍ನ ಕಾರ್ಯದರ್ಶಿ ಶ್ರೀನಿವಾಸ ಮಳಲಿ,ಸಂಗೊಳ್ಳಿ ರಾಯಣ್ಣ ಸೇನೆಯ ರಾಜ್ಯಾಧ್ಯಕ್ಷ, ಟಿ.ಆನಂದ ಭಾಗವಹಿಸಲಿದ್ದಾರೆ.

Share This Article