ನಂಬಿಕಸ್ಥ ಬೇಕು ಅಂತ ವಿತ್ತ ಸಚಿವ ಮಾಡಿದ್ರು : ದೇವೇಗೌಡರ ಬಗ್ಗೆ ಸಿದ್ದರಾಮಯ್ಯ ಮನದಾಳದ ಮಾತು

1 Min Read

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರು ಜೆಡಿಎಸ್ ನಲ್ಲಿಯೇ ಇದ್ದವರು. ಕಾಂಗ್ರೆಸ್ ಗೆ ಬಂದ ಮೇಲೆ ಎರಡು ಬಾರಿ ಸಿಎಂ ಆಗಿ, ದಾಖಲೆಯನ್ನು ಬರೆದಿದ್ದಾರೆ. ಅಂದಿನ ದಿನಗಳನ್ನ ನೆನೆದಿದ್ದಾರೆ. ನನಗೆ ಮೊದಲ ಬಾರಿಗೆ ದೇವೇಗೌಡ ಅವರು ಆರ್ಥಿಕ ಇಲಾಖೆ ನೀಡಿದಾಗ ಬೇಡ ಎಂದಿದ್ದೆ. ಆದರೆ ನಂಬಿಕಸ್ಥ ಬೇಕು ಎಂಬ ಕಾರಣಕ್ಕಾಗಿ ಬಲವಂತವಾಗಿ ನನ್ನನ್ನ ವಿತ್ತ ಸಚಿವನನ್ನಾಗಿ ಮಾಡಿದ್ದರು ಎಂದು ಹೇಳಿದ್ದಾರೆ. ಅದು ಸದನದಲ್ಲಿ ನಡೆದ ಸ್ವಾರಸ್ಯಕರ ಚರ್ಚೆಯಲ್ಲಿ ಈ ಬಗ್ಗೆ ಮಾತನ್ನಾಡಿದ್ದಾರೆ.

1994ರಲ್ಲಿ ದೇವೇಗೌಡ ಅವರು ಮುಖ್ಯಮಂತ್ರಿ ಆಗಿದ್ದಾಗ ಜಾಲಪ್ಪ ಮೆಡಿಕಲ್ ಕಾಲೇಜಿನಲ್ಲಿ ನಾನು, ದೇವೇಗೌಡ, ಪಿಜಿಆರ್ ಸಿಂಧ್ಯಾ, ಆರ್.ಎಲ್.ಜಾಲಪ್ಪ ಅವರು ಸಚಿವ ಸಂಪುಟದ ರಚನೆ ಕುರಿತು ಚರ್ಚೆ ಮಾಡುತ್ತಿದ್ದೆವು. ಆಗ ನಾನು ಕಂದಾಯ ಇಲಾಖೆ ನೀಡುವಂತೆ ಕೋರಿದ್ದೆ. ಆದರೆ ಜಾಲಪ್ಪ ಅವರು ತಮಗೆ ಕಂದಾಯ ಇಲಾಖೆಯನ್ನು ನೀಡುವಂತೆ ಪಟ್ಟು ಹಿಡಿದರು. ಕೊನೆಗೆ ದೇವೇಗೌಡ ಅವರು ಆರ್ಥಿಕ ಇಲಾಖೆ ವಹಿಸಿಕೊಳ್ಳುವಂತೆ ತಿಳಿಸಿದರು.

ಆದರೆ ನಾನು ಬೇಡ ಎಂದೆ. ಆದರೂ ನಂಬಿಕಸ್ಥ ಬೇಕು ಎಂದು ಬಲವಂತವಾಗಿ ನನಗೆ ಆರ್ಥಿಕ ಸಚಿವನನ್ನಾಗಿ ಮಾಡಿದರು ಎಂದು ದೇವೇಗೌಡರ ಕಾಲದ ದಿನಗಳನ್ನ ನೆನೆದರು. ಇದೇ ವೇಳೆ ಆರ್.ಅಶೋಕ್ ಅವರು, ಹಾಗಾದ್ರೆ ನೀವೂ ದೇವೇಗೌಡ್ರಿಗೆ ಧನ್ಯವಾದವನ್ನ ಹೇಳಬೇಕು ಎಂದಿದ್ದಾರೆ. ಬಜೆಟ್ ಮೇಲಿನ ಚರ್ಚೆ ವೇಳೆ ಆರ್.ಅಶೋಕ್ ಅವರೇ ಈ ವಿಚಾರವನ್ನ ತೆಗೆದಿದ್ದರು. ಸಿದ್ದರಾಮಯ್ಯ ಅವರನ್ನು ದೇವೇಗೌಡ್ರು ಹುಡುಕಿ ಮೊದಲ ಬಾರಿಗೆ ಆರ್ಥಿಕ ಇಲಾಖೆಯ ಹೊಣೆ ನೀಡಿದರು ಎಂಬ ವಿಚಾರವನ್ನು ತೆಗೆದಿದ್ದು. ಆಗ ಸಿದ್ದರಾಮಯ್ಯ ಅವರು ಸಹ ಹಳೆಯ ದಿನಗಳನ್ನ ಮೆಲುಕು ಹಾಕಿದರು‌.

Share This Article