ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಮಾ. 08 :
ಸಿದ್ಧರಾಮಯ್ಯರಿಂದ ಸಾಲದ ಮೂಟೆಯ ಬಜೆಟ್ ಮಂಡನೆ ಆಗಿದೆ, ಹುಟ್ಟುವ ಮಕ್ಕಳ ಮೇಲೂ ಸಾಲ ಹೊರಿಸುವ ಕೆಲಸ ಆಗಿದೆ ಎಂದು ಮಾಜಿ ಸಚಿವರಾದ ಶ್ರೀರಾಮುಲು ಟೀಕಿಸಿದ್ದಾರೆ.
ಚಿತ್ರದುರ್ಗ ನಗರದ ಶ್ರೀ ವಾಲ್ಮೀಕಿ ಭವನದ ಹತ್ತಿರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರದ ಖಜಾನೆ ಖಾಲಿ ಆಗಿದೆ. ಐವತ್ತು ಸಾವಿರ ಹುದ್ದೆ ನೇಮಕಾತಿ ಕೇವಲ ಕುಂಟು ನೆಪವಾಗಿದೆ. ಸಿದ್ಧರಾಮಯ್ಯ ಸಾಲದ ಬಜೆಟ್ ನೋಡಿ ಡಿ.ಕೆ ಶಿವಕುಮಾರ್ ಸಿಎಂ ಆಗಲ್ಲ.ರಾಜ್ಯ ದಿವಾಳಿಯಾದ ವೇಳೆ ಡಿ.ಕೆ ಶಿವಕುಮಾರ್ ಸಿಎಂ ಆಗಿ ಏನು ಮಾಡುತ್ತಾನೆ.. ಡಿಸಿಎಂ ಡಿ.ಕೆ ಶಿವಕುಮಾರ್ ಸಿಎಂ ಸ್ಥಾನದಿಂದ ಹಿಂದೆ ಸರಿಯುತ್ತಾರೆ ಎಂದು ಭವಿಷ್ಯ ನುಡಿದರು.
ಬಸವರಾಜ ಬೊಮ್ಮಾಯಿರವರ ಆಡಳಿತದಲ್ಲಿ ಎಸ್. ಸಿ/ಎಸ್. ಟಿ ಮೀಸಲಾತಿ ಹೆಚ್ಚಳ ಮಾಡಿದ್ದರು ಒಟ್ಟು ಶೇ.50% ರಷ್ಟಿದ್ದ ಮೀಸಲಾತಿಯನ್ನು ಶೇ 56%ಕ್ಕೆ ಹೆಚ್ಚಿಸಲಾಯಿತು. ಕಾಂಗ್ರೆಸ್ ಆಡಳಿತದಲ್ಲಿ ಶೇ.50% ಮೀಸಲಾತಿ ನೀಡುವ ಕೆಲಸ ಆಗಿದೆ. ಜನಸಂಖ್ಯೆ ಆಧಾರದ ಮೀಸಲಾತಿ ಪಡೆಯುವುದು ನಮ್ಮ ಹಕ್ಕು…ನಾಗಮೋಹನದಾಸ್ ವರದಿ ಜಾರಿಗೆ ಕ್ರಮ ಕೈಗೊಂಡಿದ್ದೆವು. ಕಾಂಗ್ರೆಸ್ ಸರ್ಕಾರ ಮೀಸಲಾತಿ ಕಸಿಯುವ ದಲಿತ ವಿರೋಧದ ವಿರುದ್ಧ ಉಗ್ರ ಹೋರಾಟ ಮಾಡುವ ನಿಟ್ಟಿನಲ್ಲಿ ಇಂದು ಸಭೆ ನಡೆಯಲಿದೆ ಎಂದರು.





