Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಶ್ಮಿಕಾ-ವಿಜಯ್ ಲವ್ ಸ್ಟೋರಿ ನಿಮಗೆ ಗೊತ್ತೆ? ಇಲ್ಲಿದೆ ಲವ್ ಕಹಾನಿ

---Advertisement---

ಈಗ ದೇಶಾದ್ಯಂತ ​​ ರಶ್ಮಿಕಾ ಮಂದಣ್ಣ ಹಾಗು ವಿಜಯ್ ದೇವರಕೊಂಡ ಮದುವೆಯದ್ದೇ ವಿಚಾರ. ಇವರಿಬ್ಬರ ಲವ್ ಸ್ಟೋರಿಯೇ ಅಷ್ಟು ಇಂಟ್ರೆಸ್ಟಿಂಗ್ ಆಗಿದೆ.ಇಷ್ಟು ದಿನ ಪ್ರೀತಿಯಲ್ಲಿ ಬಿದ್ದ ಇವರು , ಮನೆ, ಊರು, ಕೇರಿ, ದೇಶ, ವಿದೇಶ ಸುತ್ತಿದ್ದ ಈ ಜೋಡಿ ಈಗ ಸತಿ ಪತಿ ಆಗುತ್ತಿದ್ದಾರೆ.ಹಾಗಾದ್ರೆ ಇವರಿಬ್ಬರ ಮಧ್ಯೆ ಲವ್ ಆಗಿದ್ದು ಯಾವಾಗ ?

ರಶ್ಮಿಕಾ ಸಿನಿ ಇಂಡಸ್ಟ್ರಿಗೆ ಬಂದಿದ್ದು ಕಿರಿಕ್ ಪಾರ್ಟಿ ಸಿನಿಮಾ ಮೂಲಕ. ಇನ್ನೂ ಕಾಲೇಜ್​ನಲ್ಲಿ ಓದ್ತಾ ಇದ್ದ ರಶ್ಮಿಕಾನ ಕರೆತಂದು ರಿಷಬ್ & ರಕ್ಷಿತ್ ಪಾತ್ರ ಮಾಡಿಸಿದ್ರು. ಸಿನಿಮಾ ಸೂಪರ್ ಹಿಟ್ ಆಯಿತು. ಕರ್ನಾಟಕದ ಕ್ರಶ್ ಅಂತಾನೇ ಫೇಮಸ್ ಆದರು. ಕಿರಿಕ್ ಪಾರ್ಟಿ ಸಕ್ಸಸ್ ಬಳಿಕ ರಶ್ಮಿಕಾಗೆ ಪುನೀತ್ ರಾಜ್‌ ಕುಮಾರ್ ಜೊತೆಗೆ ಅಂಜನಿ ಪುತ್ರ, ಗಣೇಶ್ ಜೊತೆಗೆ ಚಮಕ್ ಚಿತ್ರಗಳಲ್ಲಿ ನಟಿಸೋ ಅವಕಾಶ ಸಿಕ್ತು. ಈ ನಡುವೆ ಟಾಲಿವುಡ್​ನಿಂದಲೂ ಅವಕಾಶ ಬಂತು.

ರಶ್ಮಿಕಾ ಮಂದಣ್ಣ ಹಾಗು ವಿಜಯ್ ದೇವರಕೊಂಡ ಲವ್ ಸ್ಟೋರಿಗೆ ಬರೋಬ್ಬರಿ ಒಂಬತ್ತು ವರ್ಷಗಳ ಸಂಭ್ರಮ ಇದೆ.2017ರಲ್ಲಿ ಸಿನಿಮಾದ ಶೂಟಿಂಗ್ ಸೆಟ್​​ನಲ್ಲಿ ರಶ್ಮಿಕಾ – ವಿಜಯ್ ದೇವರಕೊಂಡ ಮೊದಲ ಬಾರಿಗೆ ಬೇಟಿ ಆಗಿದ್ದರು.ಅದು ಗೀತಾ ಗೋವಿಂದಂ ಸಿನಿಮಾ ಮಹೂರ್ಥದಲ್ಲಿ. ಆಗ ಇಬ್ಬರಿಗೂ ಯಾರು? ಹಿನ್ನೆಲೆ ಏನು? ಇದ್ಯಾವುದರ ಬಗ್ಗೆ ಗೊತ್ತಿರಲಿಲ್ಲ. ಆದರೆ ಯಾವಾಗ ಗೀತಾ ಗೋವಿಂದಂ ಸಿನಿಮಾ ಶೂಟಿಂಗ್​ ಸೆಟ್‌ಗೆ ಎಂಟ್ರಿ ಕೊಟ್ರೋ ಆಗ ಸ್ನೇಹ ಪ್ರೀತಿ ಪ್ರಾರಂಭವಾಯಿತು.

ಗೀತಾ ಗೋವಿಂದಂ ಸೆಟ್​​​ನಲ್ಲಿ ರಶ್ಮಿಕಾ ಶಾಟ್ ಕಂಪ್ಲೀಟ್ ಆಗ್ತಾ ಇದ್ದ ಹಾಗೇನೇ ತನ್ನ ಕ್ಯಾರಾವಾನ್‌ಗೆ ಹೋಗಿ ಕುಳಿತು ಬಿಡ್ತಾ ಇದ್ರಂತೆ. ಅತ್ತ ವಿಜಯ್ ದೇವರಕೊಂಡ ಕೂಡ ಅಷ್ಟೇ ಡೈರೆಕ್ಟರ್ ಕಟ್ ಅಂತಾ ಇದ್ದ ಹಾಗೇ ತಮ್ಮ ಕ್ಯಾರಾವ್ಯಾನ್​ ಕಡೆಗೆ ಹೋಗ್ತಾ ಇದ್ದಂರಂತೆ.  ಹಾಗಾಗಿ ಸಿನಿಮಾದಲ್ಲಿ ವಿಜಯ್ ರಶ್ಮಿಕಾ ಮಧ್ಯೆ ಕೆಮಿಸ್ಟ್ರಿ ಸರಿಯಾಗಿ ವರ್ಕ್ ಆಗುತ್ತಿರಲಿಲ್ಲವಂತೆ. ಅದಕ್ಕೆ ರಶ್ಮಿಕಾ-ವಿಜಯ್ ಕ್ಲೋಸ್ ಆಗಬೇಕು ಅಂತ ನಿರ್ದೇಶಕ ಪರಶುರಾಮ್ ಒಂದಿಷ್ಟು ಪ್ರೇಮ ಸಂಭಾಷಣೆಗಳನ್ನ ಬರೆಸಿ ಅದನ್ನ ರಶ್ಮಿಕಾ ಹಾಗು ವಿಜಯ್ ಕೈಗೆ ಕೊಟ್ಟು ಇಬ್ಬರೂ ಒಟ್ಟಿಗೆ ಪ್ರ್ಯಾಕ್ಟೀಸ್ ಮಾಡಬೇಕು ಅಂತ ಹೇಳಿದ್ರಂತೆ. ಆಗಿನಿಂದ ಇಬ್ಬರೂ ಬೇರೆ ಬೇರೆ ಕ್ಯಾರಾವ್ಯಾನ್ ಗೆ ಹೋಗೋ ಬದಲು ಒಂದೇ ಕ್ಯಾರಾವ್ಯಾನ್​ನಲ್ಲಿ ಕುಳಿತು ಪ್ರ್ಯಾಕ್ಟೀಸ್ ಮಾಡೋದಕ್ಕೆಶುರುಮಾಡಿದರು‌.

ಪ್ರೇಮ ಸಂಭಾಷಣೆ ಪ್ರ್ಯಾಕ್ಟೀಸ್ ಮಾಡ್ತಾ ರಶ್ಮಿಕಾ ವಿಜಯ್ ತಾವೇ ರಿಯಲ್ ಆಗಿ ಪ್ರೀತಿಯಲ್ಲಿ ಬಿದ್ದರು. ಇದರಿಂದ ಸಿನಿಮಾದಲ್ಲಿ ಇಬ್ಬರ ಕೆಮೆಸ್ಟ್ರಿ ಸೊಗಸಾಗಿ ಮೂಡಿಬಂತು. ಜನರೂ ಈ ಜೋಡಿಯನ್ನ ಇಷ್ಟಪಟ್ಟರು. ಗೀತ ಗೋವಿಂದಂ ಸಿನಿಮಾ ಸೂಪರ್ ಡೂಪರ್ ಹಿಟ್ ಆಯಿತು‌.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...