Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಇನ್ಮುಂದೆ ಹೋಟೆಲಲ್ಲಿ ಗಂಟೆಗಟ್ಟಲೆ ಮಾತನಾಡುತ್ತಾ ಕುಳಿತರೆ  ಟೇಬಲ್‌ ಚಾರ್ಜ್ ನೀಡಬೇಕಂತೆ!

---Advertisement---

ಬೆಂಗಳೂರಿನ ಈಗ ಹೆಚ್ಚು ಹೋಟೆಲ್ ಗಳಲ್ಲಿ ಕಾಫಿ- ತಿಂಡಿ ಮಾಡುವ ಜಾಗಗಳಾಗಿ ಉಳಿಯದೇ, ಮೀಟಿಂಗ್ ಸ್ಪಾಟ್‌ಗಳಾಗುತ್ತಿವೆ. ಕೆಲವರು ಅರ್ಧರ್ಧ ಕಾಫಿ, ತಿಂಡಿ ಮಾಡಿ ಚರ್ಚೆ ಮಾತಾಡುತ್ತಾ ಗಂಟೆಗಟ್ಟಲೆ ಕುಳಿತುಕೊಳ್ಳುತ್ತಾರೆ. ಇದರಿಂದಾಗಿ ಗ್ರಾಹಕರು ಹಾಗೂ ಹೋಟೆಲ್ ಮಾಲೀಕರಿಗೆ ತೊಂದರೆಯಾಗುತ್ತಿದೆ.

ಹೋಟೆಲ್ ಟೇಬಲ್ ಗಳಲ್ಲಿ ರಾಜಕೀಯ, ರಿಯಲ್ ಎಸ್ಟೇಟ್, ಮದುವೆ, ಆಫೀಸ್ ವಿಷಯಗಳು ಸೇರಿದಂತೆ ಹಲವು ಚರ್ಚೆಗಳು ನಡೆಯುತ್ತವೆ. ಈ ವೇಳೆ ಮಾತನಾಡುತ್ತಾ ಗ್ರಾಹಕರು ಗಂಟೆಗಟ್ಟಲೆ ಕುಳಿತುಕೊಳ್ಳುತ್ತಾರೆ. ಇದರಿಂದ  ಬರುವ ಗ್ರಾಹಕರಿಗೆ ಜಾಗವಿಲ್ಲದೆ ಸಾಕಷ್ಟು ತೊಂದರೆಯಾಗುತ್ತಿದೆ. ಪೀಕ್ ಅವರ್‌ಗಳಲ್ಲಿ ಬರುವ ಗ್ರಾಹಕರಿಗೆ ಕೂರಲು ಜಾಗವಿಲ್ಲದೆ ಅವರು ವಾಪಸ್ ಹೋಗುತ್ತಾರೆ ಎಂದು ಹೋಟೆಲ್‌ನವರು ಹೇಳುತ್ತಿದ್ದಾರೆ.

ಈ ಬಗ್ಗೆ ಬೃಹತ್ ಬೆಂಗಳೂರು ಹೋಟೆಲ್ ಸಂಘಕ್ಕೆ (Hotel Association) ಹಲವು ಹೋಟೆಲ್ ಮಾಲೀಕರು ದೂರು ನೀಡಿದ್ದಾರೆ.ಟೇಬಲ್ ಚಾರ್ಜ್ ಹಾಕಲು ಸಲಹೆ ನೀಡುತ್ತಿದ್ದಾರೆ. ಹೀಗಾಗಿ ನಗರದ ಸಣ್ಣ, ಮಧ್ಯಮ ವರ್ಗದ ಹೋಟೆಲ್‌ಗಳಲ್ಲಿ ಟೀ, ಕಾಫಿ, ಉಪಹಾರ ಹಾಗೂ ಊಟಕ್ಕೆ ಇಂತಿಷ್ಟು ಸಮಯ ನಿಗದಿಪಡಿಸಿ ಟೇಬಲ್ ಚಾರ್ಜ್ ಅಳವಡಿಸುವ ಬಗ್ಗೆ ಚರ್ಚೆ ನಡೆದಿದೆ. ಎಲ್ಲರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಸಂಘ ತಿಳಿಸಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...