7 ಲಕ್ಷ ರೂಪಾಯಿ ಮೌಲ್ಯದ ಹೊಸ ಮಾರುತಿ ಸುಜುಕಿ ಇಗ್ನಿಸ್ ಕಾರ್ ಖರಿದಿಸಿದ ಗ ಆಂಧ್ರಪ್ರದೇಶದ ವ್ಯಕ್ತಿಯೊಬ್ಬರು ನಂಬರ್ ಪ್ಲೇಟ್ ಗೆ ಫ್ಯಾನ್ಸಿ ನಂಬರ್ ಖರಿದಿಸಲು ಎಷ್ಟು ದುಡ್ಡು ಕೊಟ್ಟಿದ್ದಾರೆ ಗೊತ್ತೆ ? ಕೇಳಿದರೆ ಶಾಕ್ ಆಗುತ್ತೀರಾ .
ಅನೇಕರಿಗೆ ಕಾರು, ವಿಶೇಷ ನಂಬರ್ ಪ್ಲೇಟ್‌ಗಳನ್ನು ಕೊಳ್ಳುವ ಹವ್ಯಾಸವನ್ನು ಹೊಂದಿರುತ್ತಾರೆ. ಎಷ್ಟೇ ಬೆಲೆಯಾದರೂ ದುಡ್ಡು ಕೊಟ್ಟು ನಂಬರ್ ಪ್ಲೇಟ್ ಖರಿದಿಸುತ್ತಾರೆ ಹಾಗೇ ಇಲ್ಲೊಬ್ಬ ಕಿರಣ್ ಎನ್ನುವ ವ್ಯಕ್ತಿ 2.08 ಕೋಟಿ ರೂ. ನೀಡಿ ಫ್ಯಾನ್ಸಿ ನಂಬರ್ ಖರೀದಿಸಿದ್ದಾರೆ.
ಬಿಗ್ ಬಾಸ್ ಟಾಯ್ ಎಂಬ ಕಂಪನಿ ಮಾಲೀಕ ಜತಿನ್ ಅಹುಜಾ ಅವರ ಬಳಿ ಇದುವರೆಗೂ ಡಿಡಿಸಿ 0001 ಎನ್ನುವ ನಂಬರ್ ಇದ್ದು, ಅವರು ತಮ್ಮ ಕಾರ್ ಗೆ ಆ ನಂಬರ್ ನೋಂದಣಿ ಮಾಡಿಸಿದ್ದರು. ಇತ್ತೀಚೆಗೆ ಆ ನಂಬರ್ ಅನ್ನು ಅವರು ಹರಾಜು ಹಾಕಿದ್ದು, ಆಂದ್ರಪ್ರದೇಶದ ಕಿರಣ್ ಕೊಲ್ಟಕುಲ ಎಂಬ ಉದ್ಯಮಿ 2.08 ಕೋಟಿ ರೂ.ಗೆ ಖರೀದಿ ಮಾಡಿದ್ದಾರೆ.
ಡಿಡಿಸಿ 0001 ಸಂಖ್ಯೆ ಈಗ ದೇಶದ ದುಬಾರಿ ನೋಂದಣಿ ಸಂಖ್ಯೆಯಾಗಿದೆ. ಇದುವರೆಗೆ ದೇಶದ ಅತಿ ದುಬಾರಿ ನಂಬರ್ ಪ್ಲೇಟ್ ಎಚ್‌ಆರ್ 88 ಬಿ 8888ಗೆ ಆಗಿತ್ತು. ಇದನ್ನು ಕಳೆದ ವರ್ಷ 1.17 ಕೋಟಿ ರೂ.ಗೆ ಮಾರಾಟ ಮಾಡಿದ್ದರು. ಇದೀಗ ಡಿಡಿಸಿ 001 ಹೊಸ ದಾಖಲೆ ಸೃಷ್ಟಿಸಿದೆ.ಡಿಡಿಸಿ 0001ಡಿಡಿಸಿ 0001 ಹೊಸಡಿಡಿಸಿ 0001
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










