Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕಾಂತಾರ ಸಕ್ಸಸ್ ಬೆನ್ನಲ್ಲೇ ರಿಷಬ್ ಶೆಟ್ಟಿ ಸಂಭಾವನೆ ಹೆಚ್ಚಾಯ್ತಾ..? ಬರೋಬ್ಬರಿ 80 ಕೋಟಿ ಅಂತೆ..!

---Advertisement---

ರಿಷಬ್ ಶೆಟ್ಟಿ ಈಗಂತು ಪ್ಯಾನ್ ಇಂಡಿಯಾ ಹೀರೋ ಆಗಿದ್ದಾರೆ. ಅದರಲ್ಲೂ ಕಾಂತಾರ ಚಾಪ್ಟರ್ 1 ರಿಲೀಸ್ ಆದ್ಮೇಲೆ ಡಿಮ್ಯಾಂಡ್ ಕೂಡ ಜಾಸ್ತಿ ಆಗಿದೆ. ರಿಷಬ್ ಶೆಟ್ಟಿ ಅವರಿಗಾಗಿ ಬೇರೆ ಭಾಷೆಯ ನಿರ್ದೇಶಕ, ನಿರ್ಮಾಪಕರೇ ಕ್ಯೂನಲ್ಲಿದ್ದಾರೆ. ಅವರಿಗಿರುವ ಡಿಮ್ಯಾಂಡ್ ನಿಂದಾನೇ ಜೈ ಹನುಮಾನ್ ಹಾಗೂ ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾ ಅನೌನ್ಸ್ ಆಗಿರೋದು.

ಇದೆಲ್ಲಾ ಆದ್ಮೇಲೆ ರಿಷಬ್ ಶೆಟ್ಟಿ ಸಂಭಾವನೆಯೂ ಹೆಚ್ಚಾಗಿದೆಯಂತೆ. ಈ ವಿಚಾರ ಇಂಡಸ್ಟ್ರಿಯಲ್ಲಿ ಸಾಕಷ್ಟು ಚರ್ಚಿತವಾಗಿದೆ. ಈಗಂತು ಸಾಮಾನ್ಯ ನಿರ್ಮಾಪಕರ ಕೈಗೆ ರಿಷಬ್ ಸಿಗೋದು ಕಷ್ಟ ಸಾಧ್ಯವಾಗಿದೆ. ಅವರ ಸಂಭಾವನೆ ಕೇಳಿದ್ರೆ ನಿರ್ಮಾಪಕರಿಗೆ ತಲೆ ತಿರುಗೋದು ಗ್ಯಾರಂಟಿಯಾಗಿದೆ. ಒಂದು ಸಿನಿಮಾಗೆ ರಿಷಬ್ ಶೆಟ್ಡಿ ಬರೋಬ್ಬರಿ 80 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಿದ್ದಾರಂತೆ.

 

ಸಾಮಾನ್ಯವಾಗಿ ಚಿತ್ರರಂಗದಲ್ಲಿ ನಟ-ನಟಿಯರು ತಮ್ಮ ಸಂಭಾವನೆ ಬಗ್ಗೆ ಸಾರ್ವಜನಿಕವಾಗಿ ಮಾತನ್ನಾಡುವುದಿಲ್ಲ. ಎಷ್ಟೋ ಕಲಾವಿದರ ವಿಚಾರಕ್ಕೆ ಈ ಸಂಬಂಧ ದೊಡ್ಡ ಮಟ್ಟದ ಗಾಸಿಪ್ ಕೂಡ ಹರಿದಾಡುತ್ತೆ. ರಿಷಬ್ ಶೆಟ್ಟಿ ವಿಚಾರದಲ್ಲೂ ಈ ಸಂಬಂಧ ಚಿತ್ರತಂಡದವರ್ಯಾರು ಮಾಹಿತಿ ನೀಡಿಲ್ಲ. ಕೇವಲ ಅಂತೆ ಕಂತೆಯ ಹಂತದಲ್ಲಿದೆ. ಏನೇ ಇರಲಿ ಚಿತ್ರರಂಗದಲ್ಲಿ ತನ್ನ ಸಕ್ಸಸ್ ತಾಕತ್ತು ಏನು ಎಂಬುದನ್ನು ರಿಷಬ್ ಶೆಟ್ಟಿ ತೋರಿಸಿದ್ದಾರೆ. ನಿರ್ದೇಶಕನಾಗಿ, ನಟನಾಗಿ ಹಲವು ಸಿನಿಮಾಗಳಲ್ಲಿ ತಮ್ಮ ಪ್ರತಿಭೆಯನ್ನ ತೋರಿಸಿದ್ದಾರೆ. ಹೀಗಾಗಿ ಸಂಭಾವನೆ ಹೆಚ್ಚಿಸಿಕೊಳ್ಳುವುದರಲ್ಲಿ ಆಶ್ಚರ್ಯವೇನು ಇಲ್ಲ. ಸದ್ಯ ಎಲ್ಲಾ ಇಂಡಸ್ಟ್ರಿಯಲ್ಲೂ ರಿಷಬ್ ಶೆಟ್ಟಿಗೆ ದೊಡ್ಡ ಮಟ್ಟದ ಡಿಮ್ಯಾಂಡ್ ಇದೆ. ಸಂಭಾವನೆಯ ವಿಚಾರಕ್ಕೆ ಸಂಬಂಧಿಸಿದಂತೆ ಕ್ಲಾರಿಟಿಯೊಂದು ಸಿಗಬೇಕಿದೆ ಅಷ್ಟೇ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now