Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಾಲೆಂಜ್ ಮಾಡ್ತೀನಿ ಐಟಿ ಟಾರ್ಚರ್ ನಿಂದ ರಾಯ್ ಸೂಸೈಡ್ : KGF ಬಾಬು ಕಣ್ಣೀರಾಕಿದ್ದೇಕೆ..?

---Advertisement---

 

ಇತ್ತೀಚೆಗಷ್ಟೇ ಕಾನ್ಫಿಡೆಂಟ್ ಗ್ರೂಪ್ ಮಾಲೀಕ ರಾಯ್ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಸಾವಿನ ನಂತರ ಸಾಕಷ್ಟು ಚರ್ಚೆಗಳು ಹರಿದಾಡ್ತಿವೆ. ಐಟಿ ದಾಳಿಗೆ ಹೆದರಿ ಸೂಸೈಡ್ ಮಾಡಿಕೊಳ್ಳಲಾಗಿದೆ ಎಂದು ಸುದ್ದಿ ಹಬ್ಬಿತ್ತು. ಅದಾದ ಮೇಲೆ ಐಟಿ ದಾಳಿಗೆಲ್ಲಾ ಅವರು ಹೆದರೋರು ಅಲ್ಲ. ಏನೋ ಇದೆ ಅಂತೆಲ್ಲಾ ಚರ್ಚೆಗಳು ನಡೆಯುತ್ತಿದೆ. ಈ ಸಂಬಂಧ ತನಿಖೆಯೂ ಆಗ್ತಿದೆ. ಇದರ‌ ನಡುವೆ ಕೆಜಿಎಫ್ ಬಾಬು ಇದು ಐಟಿ ಕಾಟದಿಂದಾನೇ ಆಗಿರುವಂತದ್ದು ಎಂದಿದ್ದಾರೆ.

ಖಾಸಗಿ ಚಾನೆಲ್ ಒಂದರಲ್ಲಿ ಮಾತನ್ನಾಡುತ್ತಾ, ನಮ್ಮ ಸಿದ್ದರಾಮಯ್ಯ ಸಾಹೇಬ್ರಿಗೆ, ಡಿಕೆ ಶಿವಕುಮಾರ್ ಸಾಹೇಬ್ರಿಗೆ ಮನವಿ ಮಾಡ್ತೇನೆ. ಈ ಸೆಂಟ್ರಲ್ ಗವರ್ನಮೆಂಟ್ ಅವರಿಗೆ ಇದರ ಮೇಲೆ ತನಿಖೆ ಆಗ್ಬೇಕು. ಸಿಜೆ ರಾಯ್ ವಿಚಾರದಲ್ಲಿ ನಾನು ಚಾಲೆಂಜ್ ಮಾಡಿ ಹೇಳ್ತೀನಿ, ಸಿಜೆ ರಾಯ್ ದು ಏನು ಇರಲಿಲ್ಲ. ಇನ್ ಕಮ್ ಟ್ಯಾಕ್ಸ್ ಟಾರ್ಚರ್ ನಿಂದಾನೇ ಆ ಯಪ್ಪಾ ಸೂಸೈಡ್ ಮಾಡ್ಕೊಂಡಿರೋದು. ಇದೇ ಸತ್ಯ. ಬೇರೆ ಏನು ಇಲ್ಲ. ಎಷ್ಟೇ ತನಿಖೆ ಮಾಡಿದ್ರು ಅವನ ಆಫೀಸಲ್ಲಿ ಬೇರೆ ಏನು ಸಿಗೋದಿಲ್ಲ.

ಇದರಿಂದಾನೇ ನಾನು ಬಂದಿದ್ದೀನಿ. ನನಗೆ ಗೊತ್ತಿದೆ. ನಮ್ಮೆಲ್ಲರ ಬಳಿ ವೈಟೇ ಇರೋದು. ನಮ್ಮ ಬಿಲ್ಡರ್ ಬಳಿ ಯಾವ ಬ್ಲಾಕ್ ಕೂಡ ಸಿಗೋದು ಇಲ್ಲ. ಕೋಟಿ ರೂಪಾಯಿ ಸ್ಯಾಲರಿ ಕೊಡಬೇಕು ಅಂದ್ರು ಬ್ಯಾಂಕ್ ನಿಂದಾನೇ ಡ್ರಾ ಮಾಡಬೇಕು. ನನ್ನ ಮನವಿ ಅಂದ್ರೆ ಇದರ ಮೇಲೆ ತನಿಖೆ ಆಗ್ಬೇಕು. ಇದರಲ್ಲಿ ಯಾರು ತಪ್ಪು ಮಾಡಿದ್ದಾರೆ ಅವರಿಗೆಲ್ಲಾ ಶಿಕ್ಷೆ ಆಗ್ಬೇಕು. ಇವತ್ತು ಸಿಜೆ ರಾಯ್ ನಾಳೆ ಕೆಜಿಎಫ್ ಬಾಬು ಸೂಸೈಡ್ ಮಾಡ್ಕೊಂಡ್ರೆ ಇವರೇ ಕಾರಣ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...