Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಯ್ ಪಿಸ್ತೂಲ್ ನಿಂದ ಶೂಟ್ ಮಾಡಿಕೊಂಡ್ರು ಸಿಬ್ಬಂದಿಗ್ಯಾಕೆ ತಿಳಿಲಿಲ್ಲ..?

---Advertisement---

 

ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ ಸಿಜೆ ರಾಯ್ ತಮ್ಮ ಬಂದೂಕಿನಲ್ಲಿಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡರು. ಆದರೂ 20 ನಿಮಿಷದ ಮೇಲೆ ವಿಷಯ ಬೆಳಕಿಗೆ ಬಂದಿದೆ. ಸಿಬ್ಬಂದಿಗಳು ಕಚೇರಿಯಲ್ಲಿದ್ರು, ಐಟಿ ಅಧಿಕಾರಿಗಳು ಕಚೇರಿಯಲ್ಲಿಯೇ ಇದ್ದರು ಕೂಡ ಯಾರಿಗೂ ಪಿಸ್ತೂಲ್ ಶಬ್ಧ ಕೇಳಿಸಲೇ ಇಲ್ವಾ ಎಂಬ ಪ್ರಶ್ನೆ ಎಲ್ಲರನ್ನು ಸಹಜವಾಗಿಯೇ ಕಾಡುತ್ತಾ ಇತ್ತು. ಇದೀಗ ಅದಕ್ಕೆಲ್ಲ ಉತ್ತರವೂ ಸಿಕ್ಕಿದೆ.

ಪಿಸ್ತೂಲ್ ನಿಂದ ಬುಲೆಟ್ ಹೊರಗೆ ಬಂದಾಗ ಸಹಜವಾಗಿಯೇ ಶಬ್ಧ ಕೇಳಿಸಿದೆ. ಆದರೆ ಆ ಶಬ್ದ ರೂಮಿನಿಂದ ಹೊರಗೆ ಬರದೆ ಇರಲು ಕಾರಣವೂ ಒಂದಿದೆ. ರಾಯ್ ಚೇಂಬರ್ ಸೌಂಡ್ ಪ್ರೂಫ್ ಆಗಿದೆಯಂತೆ. ರಾಯ್ ಕೂರುತ್ತಿದ್ದ ಕೊಠಡಿಯಲ್ಲಿ ಯಾರೇ ಮಾತನ್ನಾಡಿದರೂ ಆ ಶಬ್ಧ ಹೊರಗೆ ಬರುತ್ತಿರಲಿಲ್ಲವಂತೆ. ಧ್ವನಿ ಹೊರಗೆ ಹೋಗದಂತೆ ಇಂಟಿರಿಯರ್ ಮಾಡಿಸಿದ್ದರಂತೆ. ಹೀಗಾಗಿಯೇ ಅವರು ಆತ್ಮಹತ್ಯೆ ಮಾಡಿಕೊಂಡರು ಶಬ್ಧ ಹೊರಗೆ ಹೋಗಿಲ್ಲ. ಯಾರಿಗೂ ತಿಳಿದಿಲ್ಲ. ಜೊತೆಗೆ ಅವರು ಕೊಠಡಿಯ ಒಳಗೆ ಹೋಗಿ 20 ನಿಮಿಷವಾದರೂ ಬಾರದೆ ಇದ್ದ ಕಾರಣಕ್ಕೆ ಹೊರಗಿನಿಂದ ಎಲ್ಲರು ಕೂಗಿದ್ದಾರೆ.

ಯಾರೂ ಎಷ್ಟೇ ಕೂಗಿದರು ಒಳಗಡೆಯಿಂದ ಧ್ವನಿ ಬಾರದ ಹಿನ್ನಲೆ ಮನೆಯವರ ಅನುಮತಿ ಪಡೆದು, ಬಳಿಕ ಭದ್ರತಾ ಸಿಬ್ಬಂದಿಯ ಸಹಾಯದಿಂದ ಬಾಗಿಲನ್ನು ಹೊಡೆದಿದ್ದಾರೆ. ಆಗ ವಿಷಯ ಬೆಳಕಿಗೆ ಬಂದಿದೆ. ರಾಯ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನವಾದರೂ ಯಾವುದೇ ಪ್ರಯೋಜನವಾಗಿಲ್ಲ. ಕೊನೆಯುಸಿರೆಳೆದಿದ್ದಾರೆ. ಸದ್ಯ ಅವರ ಸಾವಿಗೆ ಸ್ಪಷ್ಟ ಕಾರಣವೇನು ಎಂಬುದನ್ನು ತಿಳಿಯಲು ತನಿಖೆ ನಡೆಯುತ್ತಿದೆ. ಎಸ್ಐಟಿ ತನಿಖೆಯ ಬಳಿಕ ಸತ್ಯಾಸತ್ಯತೆ ಹೊರ ಬರಲಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now