ರಾಯಚೂರು: ಮಂತ್ರಾಲಯ ಶ್ರೀ ಗುರುರಾಯರ ಮಠಕ್ಕೆ ದಿನೇ ದಿನೇ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡ ಮೇಲೆ, ಈಡೇರಿಸಿದ ರಾಯರಿಗೆ ಕಾಣಿಕೆಯ ರೂಪದಲ್ಲಿ ಹಣ, ಚಿನ್ನ, ಬೆಳ್ಳಿ ಹೀಗೆ ಹಲವು ವಸ್ತುಗಳನ್ನು ನೀಡುತ್ತಾರೆ. ಆಗಾಗ ರಾಯರ ಮಠದ ಹುಂಡಿ ಎಣಿಕೆ ಕಾರ್ಯ ನಡೆಯುತ್ತಾ ಇರುತ್ತದೆ. ಇದೀಗ ಇಂದು ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದೆ. ಅದು 22 ದಿನದ ಹುಂಡಿ ಎಣಿಕೆ ಆಗಿದೆ.
ಈ 22 ದಿನದಲ್ಲಿ ರಾಯರ ಮಠದಲ್ಲಿ ಸಂಗ್ರಹವಾದ ಕಾಣಿಕೆ ಕೋಟಿ ಲೆಕ್ಕದಲ್ಲಿ ಕಲೆಕ್ಟ್ ಆಗಿದೆ. 3,53,54,465 ರೂಪಾಯಿ ಸಂಗ್ರಹವಾಗಿದೆ. 10,84,160 ರೂಪಾಯಿ ನಾಣ್ಯಗಳು ಸಹ ಸಂಗ್ರಹವಾಗಿದೆ. ಚಿನ್ನ, ಬೆಳ್ಳಿ ಕೂಡ ಸಂಗ್ರಹವಾಗಿದೆ. 32 ಗ್ರಾಂ ಚಿನ್ನ, 1278 ಗ್ರಾಂ ಬೆಳ್ಳಿಯನ್ನು ಕೂಡ ಭಕ್ತರು ಹುಂಡಿಗೆ ಹಾಕಿದ್ದಾರೆ. ಈ ಮೂಲಕ ತಿಮ್ಮಪ್ಪನ ನಂತರ ರಾಯರು ಅತಿ ಶ್ರೀಮಂತ ದೇವರು ಎನಿಸಿಕೊಳ್ಳಲಿದ್ದಾರೆ. ಭಕ್ತರ ಆಸೆಗಳನ್ನ ಈಡೆರಿಸುವಲ್ಲಿಯೂ ರಾಯರು ಅಸ್ತು ಎನ್ನುತ್ತಿದ್ದಾರೆ.
ರಾಯರ ಮಠದಲ್ಲಿ ಎಣಿಸಲಾದ ಹುಂಡಿ ಎಣಿಕೆ ಕೆಲಸದಲ್ಲಿ ಮಠದ ಸಿಬ್ಬಂದಿಗಳು, ಭಕ್ತರು, ಸೇವಕರು ಭಾಗಿಯಾಗಿದ್ದರು. ರಾಯರಿಗೆ ಸೇವೆ ಮಾಡಬೇಕು ಅಂತಾನೇ ಮಂತ್ರಾಲಯಕ್ಕೆ ಬರುವ ಜನರು ಜಾಸ್ತಿ. ಮಠದ ಆವರಣದಲ್ಲಾದರೂ ಸರಿ, ಪ್ರಸಾದದ ಜಾಗದಲ್ಲಾದರೂ ಸರಿ ಏನಾದರೂ ಸೇವೆ ಮಾಡುವುದಕ್ಕೆ ಅವಕಾಶ ಸಿಕ್ಕರೆ ಅದೆಲ್ಲವನ್ನು ಮಾಡಿ ಬರುತ್ತಾರೆ. ಎಷ್ಟೋ ಭಕ್ತರು ನಿನ್ನ ಸನ್ನಿದಿಗೆ ಬಂದು ಸೇವೆ ಮಾಡುತ್ತೇನೆ ರಾಯರೆ, ಈ ಕಷ್ಟ ಬಗೆಹರಿಸು ಅಂತಾನೂ ಹರಕೆ ಹೊರುವುದು ಇದೆ.

















