Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮನೆಯೂಟದ ನಿರೀಕ್ಷೆಯಲ್ಲಿದ್ದ ಪವಿತ್ರಾ ಗೌಡಗೆ ಶಾಕಿಂಗ್ ನ್ಯೂಸ್..!

---Advertisement---

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ಪವಿತ್ರಾ ಗೌಡಗೆ ಮತ್ತೆ ಸಂಕಷ್ಟ ಶುರುವಾಗ್ತಾ ಇದೆ. ಮನೆಯಿಂದ ಊಟ ಬರುತ್ತೆ ಎಂಬ ಆಸೆಯನ್ನ ಇಟ್ಟುಕೊಂಡಿದ್ದರು. ಆದರೆ ಅದಕ್ಕೆ ಈಗ ತಣ್ಣೀರು ಬಿದ್ದಂತೆ ಆಗಿದೆ. ಈ ಸಂಬಂಧ ಮನೆಯೂಟವನ್ನು ಪ್ರಶ್ನಿಸಿ ಈಗ ಹೈಕೋರ್ಟ್ ಮೊರೆ ಹೋಗೋದಕ್ಕೆ ತೆರೆಮರೆಯ ಪ್ಲ್ಯಾನ್ ರೆಡಿಯಾಗ್ತಾ ಇದೆ. ಸೆಷನ್ಸ್ ಕೋರ್ಟ್ ಆದೇಶವನ್ನು ಪ್ರಶ್ನೆ ಮಾಡಿ ಹೈಕೋರ್ಟ್ ಗೆ ಮೇಲ್ಮನವಿಯನ್ನು ಸಲ್ಲಿಸೋದಕ್ಕೆ ಮುಂದಾಗ್ತಾ ಇದ್ದಾರೆ.

ಜೈಲಾಧಿಕಾರಿಯಿಂದ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲು ತೀರ್ಮಾನ ಮಾಡಲಾಗಿದೆ. ಸೋಮವಾರ ಅರ್ಜಿ ಸಲ್ಲಿಕೆ ಮಾಡಲಿದ್ದಾರೆ. ಜೈಲಿನಲ್ಲಿ ಇದ್ದವರಿಗೆ ಒಂದೇ ತೆರನಾದ ಊಟವನ್ನು ನೀಡಲಾಗುತ್ತಿದೆ. ಇಲ್ಲಿವರೆಗೆ ಜೈಲಿನ ಊಟದಿಂದ ಯಾರಿಗೂ, ಯಾವುದೇ ತೊಂದರೆಯಾಗಿಲ್ಲ. ಜೈಲಿನ ಊಟ ಎಲ್ಲಾ ರೀತಿಯಲ್ಲೂ ಪರೀಕ್ಷೆಯಾಗಿದೆ ಅಂತ ವಾದ ಮಂಡಿಸೋದಕ್ಕೆ ರೆಡಿಯಾಗಿದ್ದಾರೆ.

ಯಾಕಂದ್ರೆ ಜೈಲಿನ ಊಟ FSSI ನಿಂದ ಪ್ರಮಾಣಿಕರೀಸಲ್ಪಟ್ಟಿದೆ. ಜೈಲಿನಲ್ಲಿ ಎಲ್ಲರಿಗೂ ಗುಣಮಟ್ಟದ ಊಟವನ್ನೇ ನೀಡಲಾಗುತ್ತಿದೆ. ಪವಿತ್ರಾ ಗೌಡ ಒಬ್ಬರಿಗೆ ಮನೆಯೂಟ ನೀಡಿದರೆ ಬೇರೆಯವರು ಕೂಡ ಮನೆಯೂಟಕ್ಕೆ ಬೇಡಿಕೆ ಇಡುತ್ತಾರೆ. ಉಳಿದ ಕೈದಿಗಳು ಮನೆಯೂಟಕ್ಕೆ ಬೇಡಿಕೆ ಇಟ್ಟರೆ ಅದನ್ನು ಒದಗಿಸುವುದಕ್ಕೆ ಆಗುವುದಿಲ್ಲ. ಅಷ್ಟೇ ಅಲ್ಲ ಮನೆಯೂಟ ನೀಡಿದರೆ ಜೈಲೂಟ ಕಳಪೆ ಎಂದು ಒಪ್ಪಿಕೊಂಡಂತೆ ಆಗುತ್ತದೆ ಎಂಬ ವಾದವನ್ನು ಮಂಡಿಸಲು ಜೈಲು ಅಧಿಕಾರಿಗಲಕು ತಯಾರಾಗಿದ್ದಾರೆ. ಹೀಗಾಗಿ ಪವಿತ್ರಾ ಗೌಡಗೆ ವಾರಕ್ಕೆ ಒಮ್ಮೆ ಆದರೂ ಮನೆಯಿಂದ ಊಟ ಬರುವ ನಿರೀಕ್ಷೆ‌ ಇತ್ತು. ಅಮ್ಮನ ಕೈರುಚಿ ಹಾಗೂ ಬೇಕಾದ ತಿಂಡಿಯನ್ನ ತಿನ್ನಬಹುದು ಎಂದುಕೊಂಡಿದ್ದ ಪವಿತ್ರಾಗೆ ಎಲ್ಲವೂ ಫೇಲ್ ಆಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now