ಬಳ್ಳಾರಿ: ಬ್ಯಾನರ್ ಕಟ್ಟುವ ವಿಚಾರಕ್ಕೆ ಇಂದು ನಡೆದ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಗಲಾಟೆಯ ಸಂಬಂಧ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಒಟ್ಟಾಗಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಭರತ್ ರೆಡ್ಡಿ ವಿರುದ್ಧ ಶ್ರೀರಾಮುಲು ಹೌಹಾರಿದ್ದಾರೆ. ಗೊತ್ತಾಯ್ತಲ್ಲ ಇಂದು ಜನಾರ್ದನ ರೆಡ್ಡಿ ಅವರ ಮನೆಯನ್ನ ಸುಡುತ್ತಾ ಇರುವುದು ಎಂದಿದ್ದಾರೆ.
ಆ ಪೆಟ್ರೋಲ್ ಬಾಂಬ್ ಎಲ್ಲಾ ತಂದಿರೋದನ್ನ ನೋಡಿದ್ರೆ ಇವತ್ತು ಕ್ಲಿಯರ್ ಆಗಿ ಗೊತ್ತಾಯ್ತಲ್ಲ ಭರತ್ ರೆಡ್ಡಿ ಅವರು ಪ್ಲ್ಯಾನ್ಡ್ ಆಗಿ ಫಿಕ್ಸಿಂಗ್ ಮಾಡಿಕೊಂಡು ಬಂದಿರೋದು ಅಂತ ತಿಳಿದುಕೊಳ್ತೀನಿ. ಅವರು ಹೇಳ್ತಾರಂತೆ ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನ ನಿರ್ಮಾಣ ಮಾಡ್ತಾ ಇದ್ದೀವಿ, ಆದ್ರೆ ನಿರ್ಮಾಣ ಮಾಡುವುದಕ್ಕೆ ಬಿಡ್ತಾ ಇಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಇಲ್ಲಿ ವಾಲ್ಮೀಕಿ ವಿಚಾರವನ್ನ ಮಧ್ಯದಲ್ಲಿ ತರುವ ಅವಶ್ಯಕತೆಯೇ ಇಲ್ಲ. ಎಲ್ಲಾ ಕಡೆ ಪುತ್ಥಳಿ ಆಗ್ತಾ ಇರುತ್ತೆ. ನಾವೂ ಹೋಗ್ತಾ ಇರ್ತೀವಿ ಬರ್ತಾ ಇರ್ತೀವಿ. ಅದನ್ನ ನಿಮ್ಮ ಜಗಳದಲ್ಲಿ ಯಾಕೆ ತರ್ತೀರಿ. ಒಂದು ಜಾತಿಯನ್ನ ಯಾಕೆ ತರ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ನನ್ನ ಊರು ಶಾಂತಿಯುತವಾಗಿ ಇರಬೇಕು. ಅಮಾಯಕ ಇವತ್ತು ಸತ್ತೋದಾ. ಯಾರು ಹೊಣೆ ಇದಕ್ಕೆ. ಅವರು ಹೇಳ್ತಾರೆ ಸತ್ಯ ಹರಿಶ್ಚಂದ್ರರು. ನಮ್ಮ ಕಡೆಯಿಂದ ಫೈರಿಂಗ್ ಆಗಿಲ್ಲ, ಜನಾರ್ದನ ರೆಡ್ಡಿ ಅವರ ಕಡೆಯಿಂದ ಫೈರಿಂಗ್ ಆಗಿದೆ ಅಂತ. ನಿಮ್ಮ ಮನೆಗೆ ಜನಾರ್ದನ ರೆಡ್ಡಿ ಮನೆಗೆ ನಾಲ್ಕು ಕಿಲೋ ಮೀಟರ್ ಇದೆ. ಎಲ್ಲಿಂದ ಎಲ್ಲಿಗೆ ಸಂಬಂಧ. ನೀನ್ಯಾಕೆ ಇಲ್ಲಿಗೆ ಬಂದಪ್ಪ. ರೋಡ್ ನಲ್ಲಿ ಕಟ್ಟಿಕೊಳ್ಳಪ್ಪ ಬೇಡ ಅಂದವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















