ಬೆಳಗಾವಿ: ಗೃಹಲಕ್ಷ್ಮೀ ಹಣ ಬಿಡುಗಡೆಯಾದರು ರಾಜ್ಯದ ಮಹಿಳೆಯರಿಗೆ ಈ ಹಣ ಬಂದಿಲ್ಲ. ಹಾಗಾದ್ರೆ ಬಿಡುಗಡೆಯಾದ ಐದು ಕೋಟಿ ಹಣ ಎಲ್ಲಿ ಹೋಯ್ತು ಅಂತ ವಿರೋಧ ಪಕ್ಷದ ನಾಯಕರು ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪ್ರತಿಕ್ರಿಯೆ ಹೀಗಿದೆ.
ಮಹಿಳೆಯರಿಗೆ ಮಾಡಿದಂತ ವಾಗ್ದಾನ, ವಚನವನ್ನು ಸಂಪೂರ್ಣವಾಗಿ, ಬದ್ಧತೆಯಿಂದ ನಾವೂ, ನಮ್ಮ ಸರ್ಕಾರ ನಿಭಾಯಿಸ್ತಾ ಇದೆ. ನಾನು ಹೇಳಿದ್ದು, 23 ಕಂತನ್ನ ಹಾಕಿದ್ದೀವಿ. 46 ಸಾವಿರ ರೂಪಾಯಿ ಒಬ್ಬೊಬ್ಬರಿಗೆ ಬಂದಿದೆ. 23 ಕಂತಿಗೆ. ಆಗಸ್ಟ್ ವರೆಗೂ ಕ್ಲಿಯರ್ ಇದೆ ಎಂಬ ನನ್ನ ಹೇಳಿಕೆಗೆ ನಾನು ಈಗಲೂ ಬದ್ಧವಾಗಿದ್ದೇನೆ. ಇವರು ಫೆಸಿಫಿಕ್ ಆಗಿ ಕೇಳಿದ್ದಹ ಫೆಬ್ರವರಿ – ಮಾರ್ಚ್ ದು.
ಫೈನಾಶ್ಸಿಯಲ್ ಡಿಪಾರ್ಟ್ಮೆಂಟ್ ಗೆ ಪ್ರತಿ ತಿಂಗಳು. ನಮ್ಮ ಇಲಾಖೆಯಿಂದ ಫೈಲ್ ಮೂವ್ ಮಾಡುತ್ತೇನೆ. 1 ಅಥವಾ 3ನೇ ತಾರೀಖಾದರು ಸರಿ ಹಣವನ್ನು ಮೂವ್ ಮಾಡಿ ಎಂದು ಫೈಲ್ ಕಳುಹಿಸುತ್ತೇವೆ. ಯಾವ ತಾರೀಖಿಗೆ ಫೈನಾನ್ಸ್ ಡಿಪಾರ್ಟ್ಮೆಂಟ್ ನಮ್ಮ ಫೈಲ್ ಕ್ಲಿಯರ್ ಮಾಡುತ್ತದೆಯೋ ಒಂದು ಕ್ಷಣ ಕೂಡ ತಡ ಮಾಡದೆ, ಗೃಹಲಕ್ಷ್ಮೀ ಅವರ ಅಕೌಂಟ್ ಗೆ ಹೋಗುವಂತೆ ನಾನು ನೋಡಿಕೊಳ್ಳುತ್ತೇನೆ. ಮಾರ್ಚ್ ಮತ್ತು ಫೆಬ್ರವರಿಯದ್ದು ಹೆಚ್ಚು ಕಡಿಮೆ ಆಗಿದ್ದರೆ, ಅದಕ್ಕೆ ಹಣಕಾಸು ಸಚಿವರಾದ ಸಿದ್ದರಾಮಯ್ಯ ಅವರು ಸದನದಲ್ಲಿ ಉತ್ತರವನ್ನ ಕೊಡುತ್ತಾರೆ. ಪ್ರತಿಯೊಬ್ಬರಿಗೂ ರೈಟ್ ಟು ಇನ್ಫರ್ಮೆಷನ್ ಆಕ್ಟ್ ಗೊತ್ತಿದೆ. ವಿರೋಧ ಪಕ್ಷದವರು ಚೈಲ್ಡೀಶ್ ಆಗಿ ಪ್ರಶ್ನೆ ಕೇಳುವುದು ಬೇಡ. ಐದು ಸಾವಿರ ಕೋಟಿ ಎಲ್ಲೋಗಿದೆ ಅಂದ್ರೆ, ಬಿಡುಗಡೆನೇ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

