ಸುದ್ದಿಒನ್, ಚಳ್ಳಕೆರೆ, ಡಿಸೆಂಬರ್. 13 : ಪತ್ರಕರ್ತ ಹಾಗೂ ಮಾನವ ಹಕ್ಕುಗಳ ಆಯೋಗದ ಜಿಲ್ಲಾಧ್ಯಕ್ಷರಾದ ಸುರೇಶ ಬೆಳಗೆರೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಗೆ ಗೋವಾದ ಮಡಗಾವ್ ನ ರವೀಂದ್ರ ಭವನದಲ್ಲಿ ನಾಳೆ (ಡಿಸೆಂಬರ್. 14) ನಡೆಯಲಿರುವ ರಾಷ್ಟ್ರೀಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಸನ್ಮಾಸಿ ಗೌರವಿಸಲಿದ್ದಾರೆ.
ಚಿರಾಯು ಕನ್ನಡ ವಾಹಿನಿ ನೆನಪು ಪೌಂಡೇಷನ್ (ರಿ) ಕರ್ನಾಟಕ ಇವರ ವತಿಯಿಂದ ರಾಷ್ಟ್ರಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಮಾಧ್ಯಮ ಕ್ಷೇತ್ರದ ಸುರೇಶಬೆಳಗೆರೆ ಇವರಿಗೆ “ರಾಷ್ಟ್ರೀಯ ಮಾಧ್ಯಮ ರತ್ನ ಪ್ರಶಸ್ತಿ ಕೃಷಿ ಕ್ಷೇತ್ರದಲ್ಲಿ ಪ್ರಗತಿಪರ ರೈತ ಡಾ.ಆರ್ ಎ.ದಯಾನಂದಮೂರ್ತಿ ಗೆ” ರಾಷ್ಟ್ರೀಯ ನೇಗಿಲಯೋಗಿ ರತ್ನ” ಪ್ರಶಸ್ತಿ ಹಾಗೂ ಶಿಕ್ಷಣ ಕ್ಷೇತ್ರದಂದ ಹೊಂಗಿರಣ ಇಂಟರ್ ನ್ಯಾಶನಲ್ ನ ಕಾರ್ಯದರ್ಶಿ ಪಿ.ದಯಾನಂದ ಪ್ರಹ್ಲಾದ ಇವರಿಗೆ ರಾಷ್ಟೀಯ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ಹಾಗೂ ವಾರಿಯರ್ ಶಿಕ್ಷಣ ಸಂಸ್ಥೆ ಯ ಖಜಾಂಚಿ ಶ್ರೀ ಮಾರುತಿ ಲೋಕನಾಥ ಇವರಿಗೆ ರಾಷ್ಟೀಯ ಶಿಕ್ಷಣ ಸೇವಾ ರತ್ನ ಪ್ರಶಸ್ತಿ.
ಚಿತ್ರದುರ್ಗದ ಭಾರತ ಸೇನಾದಳದ ನಿರ್ದೇಶಕರು ಹಾಗೂ ಸಮಾಜಸೇವಕರಾದ ಈ. ಆನಂದಮೂರ್ತಿ ಇವರಿಗೆ ರಾಷ್ಟ್ರೀಯ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




