Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹೆಚ್.ಎಂ.ರೇವಣ್ಣ ಪುತ್ರನ ಕಾರು ಅಪಘಾತಕ್ಕೆ ಯುವಕ ಬಲಿ..!

---Advertisement---

ಬೆಂಗಳೂರು: ಕಾಂಗ್ರೆಸ್ ನ ಪ್ರಭಾವಿ ರಾಜಕಾರಣಿ ಹೆಚ್.ಎಂ.ರೇವಣ್ಣ ಪುತ್ರನ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದ್ದು, ಶಶಾಂಕ್ ವಿರುದ್ಧ ಆಕ್ಸಿಡೆಂಟ್ ಮಾಡಿದ ಆರೋಪ ಕೇಳಿ ಬಂದಿದೆ. ಈ ರಸ್ತೆ ಅಪಘಾತದಿಂದ 23 ವರ್ಷದ ರಾಜೇಶ್ ಬಿ.ಜಿ.ಎಂಬಾತ ಸಾವನ್ನಪ್ಪಿದ್ದಾರೆ. ಮೃತ ರಾಜೇಶ್ ಮಾಗಡಿ ತಾಲೂಕಿನ ಬೆಳಗುಂಬ ನಿವಾಸಿ. ದಾಬಸ್ ಪೇಟೆಯಲ್ಲಿ ಕೆಲಸ ಮಾಡುತ್ತಿದ್ದ. ಇಬ್ಬರು ಅಕ್ಕಂದಿರುವ ಮನೆಗೆ ತಮ್ಮನಾಗಿ ಆಧಾರವಾಗಿದ್ದ. ಈಗ ಮಗ ಇನ್ನಿಲ್ಲವೆಂಬ ಸತ್ಯ ಅರಗಿಸಿಕೊಳ್ಳುವುದು ಆ ಕುಟುಂಬಕ್ಕೆ ಸುಲಭವಾಗಿಲ್ಲ.

ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ರಾತ್ರಿ 10.30ರ ಸುಮಾರಿಗೆ ಗುಡೇಮಾರೇನಹಳ್ಳಿ ಟೋಲ್ ನ 100 ಮೀಟರ್ ಅಂತರದಲ್ಲಿ ಅಪಘಾತ ನಡೆದಿದೆ. ಮೃತ ರಾಜೇಶ್ ದಾಬಸ್ ಪೇಟೆಯಿಂದ ಬರುತ್ತಿದ್ದರು. ಈ ವೇಳೆ ಫಾರ್ಚುನರ್ ಕಾರು ಬಂದು ಗುದ್ದಿದೆ. ಬಳಿಕ ಕಾರನ್ನು ನಿಲ್ಲಿಸದೇ ಕಾರಿನಲ್ಲಿದ್ದವರು ಅಲ್ಲಿಂದ ಪರಾರಿಯಾಗಿದ್ದಾರೆ. ಕಾರು ಅಪಘಾತವನ್ನು ಕಂಡ ಸ್ಥಳೀಯರು ಕೂಡಲೇ ಆ ಕಾರನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಅಪಘಾತ ನಡೆದ ಸ್ಥಳದಿಂದ 5 ಕಿಲೋ ಮೀಟರ್ ದೂರದಲ್ಲಿ ಚೇಸ್ ಮಾಡಿ ಕಾರನ್ನು ನಿಲ್ಲಿಸಲಾಗಿದೆ.

ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ, ಪೊಅರ್ಚೂನರ್ ಕಾರಿನಲ್ಲಿ ರೇವಣ್ಣ ಅವರ ಮಗ ಶಶಾಂಕ್ ಹಾಗೂ ಹೆಂಡತಿ, ಮಗು, ವಯಸ್ಸಾದ ವ್ಯಕ್ತಿಯು ಇದ್ದರು. ಎರಡು ಬೈಕ್ ಗಳನ್ನು ಓವರ್ ಟೇಕ್ ಮಾಡಲು ಹೋಗಿ ಬೈಕ್ ಗೆ ಕಾರು ಗುದ್ದಿದೆ. ಸನ್ ಫ್ಲವರ್ ಆಯಿಲ್ ಫ್ಯಾಕ್ಟರಿ ಬಳಿ ಕಾರನ್ನು ತಡೆದು ನಿಲ್ಲಿಸಲಾಗಿದೆ. ಕಾರನ್ನು ನಿಲ್ಲಿಸುತ್ತಿದ್ದಂತೆಯೇ ರೇವಣ್ಣ ಪುತ್ರ ಆವಾಜ್ ಹಾಕಿದ್ದಾರೆ. ನಾನು HM ರೇವಣ್ಣ ಪುತ್ರ ಎಂದು ದೌಲತ್ತು ತೋರಿಸಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now