ಬೆಂಗಳೂರು: ಡೆವಿಲ್ ಸಿನಿಮಾದ ಹವಾ, ಜೋಶು ಎಷ್ಟಿದೆ ಅನ್ನೋದನ್ನ ಯಾರ ಬಾಯ್ಬಿಟ್ಟು ಹೇಳುವ ಅವಶ್ಯಕತೆ ಇಲ್ಲ. ಯಾಕಂದ್ರೆ ಸೋಶಿಯಲ್ ಮೀಡಿಯಾ ತೆಗೆದ್ರು ಅದೇ ಸುದ್ದಿ, ಥಿಯೇಟರ್ ಮುಂದೆ ಪಾಸ್ ಆದ್ರೂ ಅದೇ ಸಿನಿಮಾ ಪೋಸ್ಟರ್ ಗಳು ರಾರಾಜಿಸ್ತಾ ಇದಾವೆ. ದರ್ಶನ್ ಅಭಿಮಾನಿಗಳಿಂದ ಇದೆಲ್ಲ ಸಾಧ್ಯವಾಗಿರೋದು. ಎಲ್ಲಾ ಕಡೆ ಮುಂದೆ ನಿಂತು ಅಭಿಮಾನಿಗಳೇ ಪ್ರಚಾರ ಮಾಡ್ತಾ ಇದ್ದಾರೆ.
ದರ್ಶನ್ ಕೊಕೆ ಕೇಸಲ್ಲಿ ಜೈಲಲ್ಲಿದ್ದಾರೆ. ಇಡೀ ಚಿತ್ರತಂಡ ಚಿತ್ರದ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಈ ಸಂಭ್ರಮದ ನಡುವೆ ಭರ್ಜರಿ ಕಲೆಕ್ಷನ್ ಕೂಡ ಸಿನಿಮಾ ಮಾಡಿದೆ. ಡೆವಿಲ್ ಫಸ್ಟ್ ಡೇ ಫಸ್ಟ್ ಶೋ ನೋಡೋದಕ್ಕೆ ಅಭಿಮಾನಿಗಳು ಕಾತುರದಿಂದ ಕಾಯ್ತಾ ಇದ್ದಾರೆ. ಹೀಗಾಗಿ ಟಿಕೆಟ್ ಬುಕ್ಕಿಂಗ್ ಆರಂಭವಾದಾಗಲೇ ಸೋಲ್ಡ್ ಔಟ್ ಆಗಿದೆ. ಟಿಕೆಟ್ ಗಾಗಿ ಎಷ್ಟೊ ಜನ ಪರದಾಡ್ತಾ ಇದ್ದಾರೆ.
ನಾಲ್ಕು ದಿನಗಳ ಮೊದಲೇ ಥಿಯೇಟರ್ ನಲ್ಲೂ ಹಬ್ಬದ ಕಳೆಗಟ್ಟಿದೆ. ಥಿಯೇಟರ್ ಗಳ ಮುಂದೆಲ್ಲಾ ದರ್ಶನ್ ಅವರ ಕಟೌಟ್ ನಿಲ್ಲಿಸಿ, ಹಾರ ಹಾಕಿ ಸಂಭ್ರಮಿಸಿದ್ದಾರೆ. ಬೆಂಗಳೂರಲ್ಲಂತು ಎಲ್ಲಾ ಥಿಯೇಟರ್ ಗಳಲ್ಲೂ ದರ್ಶಬ್ ಅವರ ಕಟೌಟ್ ರಾರಾಜಿಸ್ತಾ ಇದೆ. ಹಾಗೇ ಪ್ರತಿ ಜಿಲ್ಲೆಯಲ್ಲೂ ದರ್ಶನ್ ಅಭಿಮಾನಿಗಳು ಕೈಜೋಡಿಸಿದ್ದು, ಬ್ಯಾನರ್, ಕಟೌಟ್ ಹಾಕುವುದರ ಜೊತೆಗೆ ದರ್ಶನ್ ಅವರ ಮಾರ್ಗದರ್ಶನ, ಮಾತಿನಂತೆ ಸಮಾಜ ಸೇವೆಯನ್ನು ಮಾಡ್ತಿದ್ದಾರೆ, ಸಿನಿಮಾ ರಿಲೀಸ್ ದಿನ ಅನ್ನದಾನಕ್ಕೂ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮರಿಗಳನ್ನ ಹೊಡೆದು ಹಬ್ಬ ಮಾಡೋದಕ್ಕೆ ರೆಡಿಯಾಗಿದ್ದಾರೆ. ಸದ್ಯ ಟಿಕೆಟ್ ಒಂದರಿಂದಾನೆ ನಾಲ್ಕು ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.

