ರಾಯಚೂರು: ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ಭಕ್ತರ ಸಂಖ್ಯೆ ಏನು ಕಡಿಮೆ ಇಲ್ಲ. ರಾಜ್ಯದ ಮೂಲೆ ಮೂಲೆಯಲ್ಲಿಯೂ ಭಕ್ತರಿದ್ದಾರೆ. ಅಷ್ಟೇ ಯಾಕೆ ಬೇರೆ ರಾಜ್ಯದವರಿಗೂ ರಾಯರೆಂದರೆ ಅಪಾರವಾದ ಭಕ್ತಿ. ಹೀಗಾಗಿಯೇ ಮಂತ್ರಾಲಯದ ಮಠ ಸದಾ ಕಾಲ ಗಿಜಿಗುಡುತ್ತಾ ಇರುತ್ತದೆ. ಇಂದು ಮಠದ ಕಾಣಿಕೆ ಹುಂಡಿಯನ್ನ ಒಡೆಯಲಾಗಿದೆ. ಭಕ್ತರು ತಮ್ಮ ಭಕ್ತಿಯಿಂದ ಹಾಕಿದ ಕಾಣಿಕೆಯನ್ನ ಎಣಿಕೆ ಮಾಡಲಾಗಿದೆ.
ಈ ಮೂಲಕ 21 ದಿನದಲ್ಲಿ 3.06 ಕೋಟಿ ಹಣ ಸಂಗ್ರಹವಾಗಿದೆ. ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿನ 21 ದಿನದ ಹುಂಎಇ ಎಣಿಕೆಯಲ್ಲಿ 3,6,81,661 ರೂಪಾಯಿ ಸಂಗ್ರಹವಾಗಿದೆ. ಕೇವಲ ಎರಡೇ ತಿಂಗಳಲ್ಲಿ ರಾಯರಿಗೆ ಕೋಟ್ಯಾಂತರ ರೂಪಾಯಿ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ. ಸಂಗ್ರಹವಾದ ಕಾಣಿಕೆಯಲ್ಲಿ 2,97,44,661 ರೂಪಾಯಿ ನೋಟಿನ ರೂಪದಲ್ಲಿ ಬಂದಿದ್ದರೆ, 9,37,000 ರೂಪಾಯಿ ನಾಣ್ಯದ ರೂಪದಲ್ಲಿ ಬಂದಿದೆ. 23 ಗ್ರಾಂ ಚಿನ್ನ, 490 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ. ಮಂತ್ರಾಲಯ ರಾಯರ ಮಠದಲ್ಲಿ ನಡೆಸಲಾದ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿ, ಕರ ಸೇವಕರು ಭಾಗವಹಿಸಿದ್ದರು.
ಬೇಡಿದ್ದನ್ನು ಕರುಣಿಸುವ ಕರುಣಾಮಯಿ ಶ್ರೀ ರಾಘವೇಂದ್ರ ಸ್ವಾಮಿಗಳು. ಮಠಕ್ಕೆ ಆಗಾಗ ಭೇಟು ನೀಡಿ, ರಾಯರ ಬೃಂದಾವನ ದರ್ಶನ ಮಾಡಿ ಪಾವನವಾದೆವು ಎಂಬ ಭಕ್ತಿ ಜನರದ್ದು. ಅದೆಷ್ಟೋ ಜನರಿಗೆ ನೆಮ್ಮದಿಯ ತಾಣ ಕೂಡ. ಸಂಕಷ್ಟಗಳನ್ನು ಬಗೆಹರಿಸಿದಾಗ ತಮ್ಮಿಂದಾದ ಕಾಣಿಕೆಯನ್ನು ದೇವರಿಗೆ ನೀಡುತ್ತಾರಡ ಅದರ ಎಣಿಕೆಯೇ ಇಂದು ನಡೆದಿದೆ. ಸದ್ಯ ರಾಜ್ಯದ ಶ್ರೀಮಂತ ದೇವರುಗಳಲ್ಲಿ ರಾಯರು ಕೂಡ ಇದ್ದಾರೆ.

















