Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಜೈಲಿನಲ್ಲಿ ರಾಜಾತಿಥ್ಯ ವಿಡಿಯೋ : ವಿಜಯಲಕ್ಷ್ಮಿ ಹೆಸರು ತಳುಕು..!

---Advertisement---

ಬೆಂಗಳೂರು: ಕಳೆದ ಕೆಲವು ದಿನಗಳ ಹಿಂದೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಅನುಭವಿಸುತ್ತಿರುವ ಕೈದಿಗಳ ವಿಡಿಯೋ ಹೊರ ಬಂದಿತ್ತು. ಅದರಲ್ಲೂ ಎಂಥಾ ಕೈದಿಗಳು ಉಗ್ರಗಾಮಿಗೆ ರಾಜಾತಿಥ್ಯವಿದ್ದದ್ದು. ಈ ಸಂಬಂಧ ತನಿಖೆ ಕೂಡ ಶುರುವಾಗಿದೆ. ದರ್ಶನ್ ಜೈಲಿನಲ್ಲಿಯೇ ಇದ್ದರು, ಕೇವಲ ಹಾಸಿಗೆ, ದಿಂಬಿಗಾಗಿ ಕೋರ್ಟ್ ನಲ್ಲಿ ಮನವಿ ಮಾಡಿದ್ರು ಸಿಕ್ತಿಲ್ಲ. ಆದರೆ ಹೀಗೆ ಉಗ್ರಗಾಮಿಗಳಿಗೆ ನೀಡುತ್ತಿರೋದು ಎಷ್ಟು ಸರಿ ಎಂಬ ಚರ್ಚೆಗಳು ಆಗಿತ್ತು. ಬಳಿಕ ಅದರ ತನಿಖೆ ಶುರುವಾಗಿದ್ದು, ಆರಂಭದಲ್ಲಿ ದರ್ಶನ್ ಅವರ ಆಪ್ತ ಧನ್ವೀರ್ ಅವರಿಗೆ ನೋಟೀಸ್ ನೀಡಿ, ವಿಚಾರಣೆ ನಡೆಸಿದ್ದರು. ಇದೀಗ ವಿಜಯಲಕ್ಷ್ಮೀ ಅವರ ಹೆಸರು ಈ ಕೇಸಲ್ಲಿ ತಗಲಾಕಿಕೊಂಡಿದೆ.

ಧನ್ವೀರ್ ಅವರಿಗೆ ಎರಡನೇ ಬಾರಿಗೆ ನೋಟೀಸ್ ಕೊಟ್ಟು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಆ ವೇಳೆ ವಿಜಯಲಕ್ಷ್ಮೀ ಅವರ ಹೆಸರು ಬಂದಿದೆ ಎನ್ನಲಾಗಿದೆ. ಹಾಗೇ ವಿಚಾರಣೆ ವೇಳೆ ವಿಡಿಯೋ ಬಗ್ಗೆಯೂ ಮಾಹಿತಿ ನೀಡಿದ್ದಾರೆ ಎನ್ನಲಾಗಿದ್ದು, ನನಗೆ ಲಾಯರ್ ಕಡೆಯಿಂದ ವಿಡಿಯೋ ಬಂದಿದ್ದು. ಅದನ್ನ ವಿಜಯಲಕ್ಷ್ಮಿ ಅವರಿಗೆ ಕಳುಹಿಸಿದೆ. ಮಾಧ್ಯಮದವರಿಗೆ ಅದು ಹೇಗೆ ರೀಚ್ ಆಯ್ತು ಅನ್ನೋದು ನನಗೆ ಗೊತ್ತಿಲ್ಲ ಎಂಬ ವಿಚಾರವನ್ನ ಹೇಳಿದ್ದಾರೆ ಎನ್ನಲಾಗಿದೆ.

ವಿಜಯಲಕ್ಷ್ಮಿ ಅವರ ಹೆಸರು ಬಂದ ಮೇಲೆ ಅಧಿಕಾರಿಗಳು ಅವರನ್ನು ಕರೆಸಿ ತನಿಖೆ ನಡೆಸುವ ಸಾಧ್ಯತೆ ಇದೆ. ವಿಡಿಯೋ ಲೀಕ್ ಆಗಿದ್ದು ಹೇಗೆ ಎಂಬ ಬಗ್ಗೆ ಸದ್ಯಕ್ಕೆ ತನಿಖೆ ನಡೆಯುತ್ತಿದೆ. ವಿಜಯಲಕ್ಷ್ಮಿ ಅವರು ಪೊಲೀಸರ ಮುಂದೆ ಏನು ಹೇಳ್ತಾರೆ ಎಂಬುದನ್ನ ನೋಡಬೇಕಿದೆ. ಇದೆಲ್ಲ ಬೆಳವಣಿಗೆಯ ನಡುವೆ ದರ್ಶನ್ ಅವರು ಹಾಸಿಗೆ, ದಿಂಬು ಸಿಗದೆ ಜೈಲಲ್ಲಿ ಸಿಕ್ಕ ಸೌಲಭ್ಯಗಳಲ್ಲಿಯೇ ಬದುಕುತ್ತಿದ್ದಾರೆ.

 

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now