Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಚಿತ್ರದುರ್ಗದ ಯುವ ಪ್ರತಿಭೆ ಧನುಶ್ : ಸ್ವಯಂ ಕಲಿಕೆಯಿಂದ ಮೂಡಿದ ‘ದೇವತಾ ಕಲಾವಿದ’

---Advertisement---

ಸುದ್ದಿಒನ್ ವಿಶೇಷ, ಚಿತ್ರದುರ್ಗ, ಏಪ್ರಿಲ್. 02 : ಕಲೆ ಎಂದರೆ ಅದು ಯಾರೊಬ್ಬರ ಸ್ವತ್ತಲ್ಲ. ಅದು ಒಲಿದವರಿಗೆ ಮಾತ್ರ ತನ್ನ ಸೌಂದರ್ಯವನ್ನು ತೆರೆದಿಡುತ್ತದೆ. ಇದೇ ಮಾತಿಗೆ ಜೀವಂತ ಉದಾಹರಣೆಯಾಗಿ ತಾಲ್ಲೂಕಿನ ತುರುವನೂರು ಗ್ರಾಮದ ಯುವಕ ಧನುಶ್ ಹೊರಹೊಮ್ಮಿದ್ದಾರೆ. ಯಾವುದೇ ವೃತ್ತಿಪರ ತರಬೇತಿ ಪಡೆಯದೆ, ತನ್ನ ಆಸಕ್ತಿ ಮತ್ತು ಪರಿಶ್ರಮದ ಮೂಲಕ ದೇವರ ಚಿತ್ರಗಳನ್ನು ಅದ್ಭುತವಾಗಿ ಮೂಡಿಸುತ್ತಿರುವ ಈ ಯುವಕ, ಈಗಾಗಲೇ ಹಲವರ ಗಮನ ಸೆಳೆದಿದ್ದಾರೆ.

ತುರುವನೂರು ಗ್ರಾಮದವರಾದ ಶೃತಿ ಎಂ. ಮತ್ತು ಮೌನೇಶ್ವರಾಚಾರಿ ಕೆ.ಬಿ. ದಂಪತಿಯ ಪುತ್ರನಾದ ಧನುಶ್ ಕೆ. ಎಂ. ಒಂದರಿಂದ ಹತ್ತನೆಯ ತರಗತಿಯವರೆಗೂ ಗ್ರಾಮದಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದಾರೆ. ವಿದ್ಯಾಭ್ಯಾಸದಲ್ಲಿ ಎತ್ತಿದ ಕೈ, ಹತ್ತನೇ ತರಗತಿಯಲ್ಲಿ ಶಾಲೆಗೆ ಅತಿಹೆಚ್ಚು ಅಂಕ ಪಡೆದು ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಪ್ರಸ್ತುತ, ಬಳ್ಳಾರಿಯ  ಎಸ್ ಜಿ ಕಾಲೇಜ್ ಬಳ್ಳಾರಿ ನಲ್ಲಿ ಪ್ರಥಮ ಪಿಯುಸಿ ಯನ್ಬು ಕೂಡಾ ಕಾಲೇಜ್ ಟಾಪರ್ ಆಗಿದ್ದಾರೆ. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಓದಿನಲ್ಲಿ ಸೈನ್ಸ್ ಆಯ್ಕೆ ಮಾಡಿಕೊಂಡಿದ್ದರೂ, ಅವರ ಮನಸ್ಸು ಹೆಚ್ಚು ಸೆಳೆಯುವುದೇ ಚಿತ್ರಕಲೆ. ವಿದ್ಯಾರ್ಥಿ ಜೀವನದ ಐದನೇ ತರಗತಿಯಿಂದಲೇ ಚಿತ್ರ ಬಿಡಿಸುವ ಹವ್ಯಾಸ ಬೆಳೆಸಿಕೊಂಡಿದ್ದ ಧನುಶ್, ಸ್ವಯಂ ಪ್ರಯತ್ನದ ಮೂಲಕ ತಮ್ಮ ಕೌಶಲ್ಯವನ್ನು ಹಂತಹಂತವಾಗಿ ಅಭಿವೃದ್ಧಿಪಡಿಸಿಕೊಂಡಿದ್ದಾರೆ.


ವಿಶೇಷವಾಗಿ ತಿರುಪತಿ ತಿಮ್ಮಪ್ಪ ಮತ್ತು ಗಣೇಶನ ಚಿತ್ರಗಳನ್ನು ಜೀವಂತವಾಗಿ ಮೂಡಿಸುವಲ್ಲಿ ಇವರಿಗೆ ವಿಶೇಷ ನೈಪುಣ್ಯವಿದೆ. ಅವರು ಬಿಡಿಸುವ ಚಿತ್ರಗಳು ನೋಡುಗರಲ್ಲಿ ಭಕ್ತಿಭಾವದ ಜೊತೆಗೆ ಒಂದು ವಿಶಿಷ್ಟ ಆನಂದವನ್ನು ಉಂಟುಮಾಡುತ್ತವೆ. ಚಿತ್ರಗಳಲ್ಲಿ ಬಣ್ಣಗಳ ಬಳಕೆ, ಮುಖಭಾವಗಳ ಸೂಕ್ಷ್ಮತೆ ಮತ್ತು ಆಕೃತಿಗಳ ನೈಜತೆ ಸೇರಿ ಅವರ ಕಲೆಗೆ ವಿಶಿಷ್ಟ ಗುರುತನ್ನು ತಂದುಕೊಟ್ಟಿವೆ.

ಇವರ ಸಾಧನೆಯ ಹಿಂದಿರುವ ಪ್ರಮುಖ ಬಲವೇ ಕುಟುಂಬದ ಬೆಂಬಲ. ವಿಶೇಷವಾಗಿ ತಾಯಿ ಸದಾ ಪ್ರೋತ್ಸಾಹ ನೀಡುತ್ತಿದ್ದು, ಅವರ ಕಲಾ ಪಯಣಕ್ಕೆ ದಿಕ್ಕು ತೋರಿಸುತ್ತಿದ್ದಾರೆ. ಇತ್ತೀಚೆಗೆ ಧನುಶ್ ತಿರುಪತಿ ದೇವರ ಸುಂದರ ಚಿತ್ರವನ್ನು ರಚಿಸಿ ತಮ್ಮ ಅತ್ತೆಗೆ ಉಡುಗೊರೆಯಾಗಿ ನೀಡಿರುವುದು ಅವರ ಕಲಾತ್ಮಕತೆಯ ಜೊತೆಗೆ ಭಾವನಾತ್ಮಕತೆಯನ್ನೂ ತೋರಿಸುತ್ತದೆ. ಚಿತ್ರಕಲೆಯಲ್ಲಿ ಯಾವುದೇ ತರಬೇತಿ ಪಡೆಯದೆ, ಕೇವಲ ಆಸಕ್ತಿ ಮತ್ತು ಅಭ್ಯಾಸದಿಂದಲೇ ಈ ಮಟ್ಟದ ಕೌಶಲ್ಯ ಸಾಧಿಸಿರುವುದು ವಿಶೇಷ. ಸಾಮಾನ್ಯವಾಗಿ ಕಲೆಯಲ್ಲಿ ಸಾಧನೆ ಮಾಡಲು ತರಬೇತಿ ಅಗತ್ಯವೆಂದು ನಂಬಲಾಗುತ್ತದೆ. ಆದರೆ ಧನುಶ್ ಅವರ ಸಾಧನೆ, ಪ್ರತಿಭೆ ಮತ್ತು ಪರಿಶ್ರಮ ಇದ್ದರೆ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧ್ಯ ಎಂಬುದನ್ನು ಸಾಬೀತುಪಡಿಸಿದೆ.

ವನ್ಯಜೀವಿಗಳು, ದೇವರ ಚಿತ್ರಗಳಾದ ಆಂಜನೇಯ, ಕೃಷ್ಣ, ಸೇರಿದಂತೆ ಸುಮಾರು 70 ಕ್ಕೂ ಹೆಚ್ಚು ಚಿತ್ರಗಳನ್ನು ಬಿಡಿಸಿದ್ದಾರೆ. ಮುಂದಿನ ದಿನಗಳಲ್ಲಿ ವಿದ್ಯಾಭ್ಯಾಸದ ಜೊತೆಗೆ ಚಿತ್ರಕಲೆಯಲ್ಲೂ ದೊಡ್ಡ ಸಾಧನೆ ಮಾಡಲು ಧನುಶ್ ಕನಸು ಕಾಣುತ್ತಿದ್ದಾರೆ. ಅವರ ಈ ಕನಸುಗಳಿಗೆ ಕುಟುಂಬದ ಬೆಂಬಲವೂ ಜೊತೆಯಾಗಿರುವುದರಿಂದ, ಭವಿಷ್ಯದಲ್ಲಿ ಈ ಯುವ ಕಲಾವಿದ ಇನ್ನಷ್ಟು ಎತ್ತರಕ್ಕೆ ಏರಲಿ ಹಾರೈಸೋಣ.

ಧನುಷ್ ಕೆ.ಎಂ.
ತುರುವನೂರು, ಚಿತ್ರದುರ್ಗ ತಾ.ಜಿ.
ಮೊ : 98445 06291

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...