Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಳ್ಳಾರಿಯಲ್ಲಿ ಸಿಡಿಲು ಬಡಿದು 3 ಮಂದಿ ಸಾವು..!

---Advertisement---

ಬಳ್ಳಾರಿ; ರಾಜ್ಯದಲ್ಲಿ ಮಳೆ ಜೋರಾಗಿದೆ. ಅದರಲ್ಲೂ ಗುಡುಗು, ಸಿಡಿಲು ಆರ್ಭಟವೂ ಜೋರಾಗಿದೆ. ಹೀಗಾಗಿ ಜನ ಕೂಡ ಎಚ್ಚರಿಕೆಯಿಂದ ಇರಬೇಕಾಗಿದೆ. ಇಂದು ಸಿಡಿಲು ಬಡಿದು ಮೂರು ಜನ ಸಾವನ್ನಪ್ಪಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.

45 ವರ್ಷದ ಭೀರಪ್ಪ, 26 ವರ್ಷದ ಸುನೀಲ ಸಾವನ್ನಪ್ಪಿದ್ದಾರೆ. ಸಿಡಿಲು ಬಡಿದಿರಯವುದಲ್ಲಿ 14 ವರ್ಷ ವಿನೋದ ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುರಿ ಮೇಯಿಸಲು ಹೋದಾಗ ಸಿಡಿಲು ಬಡಿದಿದೆ. ಮಳೆ ಬಂದಾಗ ಯಾವುದೋ ಮರದ ಕೆಳಗೆ ಆಶ್ರಯ ಪಡೆದ ಈ ಮೂವರು ಇಂದು ಇಹಲೋಕ ತ್ಯಜಿಸಿದ್ದಾರೆ. ಮಳೆ ಬಂತು ಅಂತ ಮರದ ಕೆಳಗೆ ನಿಂತಿದ್ದೆ ಈ ಸಾವಿಗೆ ಕಾರಣವಾಗಿದೆ.

ರಾಜ್ಯಾದ್ಯಂತ ಈಗಾಗಲೇ ಮಳೆ ಶುರುವಾಗಿದೆ. ಮಳೆಗಾಲ ಶುರುವಾದಾಗೆಲ್ಲ ಒಂದಷ್ಟು ಮುಂಜಾಗ್ರತ ಕ್ರಮದ ಬಗ್ಗೆ ಜಾಗೃತಿಯನ್ನ ಮೂಡಿಸಲಾಗುತ್ತದೆ. ಆದರು ಜನ ಅದರ ಬಗ್ಗೆ ಗಮನಹರಿಸುತ್ತಿಲ್ಲ. ಮಳೆ ಬಂದಾಗ ಮಳೆಯಲ್ಲಿ ನೆನೆದರು ಮರದ ಕೆಳಗಡೆ ನಿಲ್ಲಬಾರದು. ಯಾಕಂದ್ರೆ ಸಿಡಿಲು ಹೆಚ್ಚಾಗಿ ಬಡಿಯುವುದು ಮರಗಳಿಗೇನೆ. ಹೀಗಾಗಿ ಮಳೆ ಬಂದಾಗ ಯಾರು ಕೂಡ ಮರದ ಕೆಳಗೆ ಆಶ್ರಯ ಪಡೆಯಬೇಡು. ಈಗಾಗಲೇ ಮಳೆಗಾಲ ಶುರುವಾಗಿರೋ ಕಾರಣ ಒಂದಷ್ಟು ಮುಂಜಾಗ್ರತೆ ಇರಲಿ. ಕೆಲಸಕ್ಕೆ ಹೋಗುವವರು ಕೊಡೆ, ರೇನ್ ಕೋಟ್ ತೆಗೆದುಕಿಂಡು ಹೋಗಿ. ಹೊಲ, ಬಯಲುಗಳಿಗೆ ಹೋಗುವವರು ಆದಷ್ಟು ಕೊಡೆ, ಟಾರ್ಪಲ್ ರೀತಿ ಮಳೆಯಿಂದ ರಕ್ಷಣೆ‌ನೀಡುವ ಚೀಲಗಳನ್ನ ತೆಗೆದುಕೊಂಡು ಹೋಗುವುದು ಉತ್ತಮ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...