ಬೆಂಗಳೂರು: ಬಿಎಂಟಿಸಿಯಲ್ಲಿ ಖಾಲಿ ಇರುವ ಹುದ್ದಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 2,500 ಹುದ್ದೆಗಳನ್ನು ಭರ್ತಿ ಮಾಡಲು ಹೊರಟಿದೆ. ಅರ್ಜಿ ಆಹ್ವಾನ ಮಾಡಿ, ನೋಟಿಫೀಕೇಷನ್ ಹೊರಡಿಸಿದೆ. ಹೆಚ್ಚಿನ ಮಾಹಿತಿಗಾಗಿ cetonline.karnataka.gov.inಗೆ ಭೇಟಿ ನೀಡಬಹುದಾಗಿದೆ.
ಅರ್ಜಿ ಹಾಕುವವರು ದ್ವಿತೀಯ ಪಿಯುಸಿ ಮುಗಿಸಿರಲೇಬೇಕು. ಜೊತೆಗೆ ಮೋಟಾರು ವಾಹನ ನಿರ್ವಾಹಕ ಪರವಾನಗಿ, ಬ್ಯಾಡ್ಜ್ ಹೊಂದಿರಲೇಬೇಕು. ಸಾಮಾನ್ಯ ವರ್ಗದವರಿಗೆ ಗರಿಷ್ಠ 35 ವರ್ಷ, 2ಎ, 2ಬಿ, 3ಎ ಮತ್ತು 3ಬಿಗೆ 38, ಎಸ್ಸಿ, ಎಸ್ಟಿ ಮತ್ತು ಪ್ರವರ್ಗ-1ಕ್ಕೆ 40, ಮಾಜಿ ಸೈನಿಕ, ಇಲಾಖಾ ಅಭ್ಯರ್ಥಿಗೆ 45 ವರ್ಷ.
ದೇಹದಾರ್ಢ್ಯತೆ: ಪುರುಷರು 160 ಸೆಂಟಿ ಮೀಟರ್, ಮಹಿಳೆಯರು 150 ಸೆಂಟ್ ಮೀಟರ್ ಎತ್ತರ ಇರಬೇಕಾಗುತ್ತದೆ. ಅಭ್ಯರ್ಥಿಗಳು ಕನಿಷ್ಠ ವಯೋಮಿತಿ 18 ಆಗಿದ್ದು, ಗರಿಷ್ಠ ವಯೋಮಿತಿ 35 ವರ್ಷ ಆಗಿದೆ. ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್ಸಿ, ಎಸ್ಟಿ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ 5 ಮತ್ತು ಮಾಜಿ ಸೈನಿಕ, ಇಲಾಖಾ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇರಲಿದೆ ಎಂದು ತಿಳಿಸಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷದ ವೃತ್ತಿ ತರಬೇತಿಯಲ್ಲಿ ಮಾಸಿಕ ವೇತನ 9,100 ರೂಪಾಯಿ ನೀಡಲಾಗುತ್ತದೆ. ವರ್ಷದ ಬಳಿಕ ಎರಡು ವರ್ಷಗಳ ಅವಧಿಗೆ ಖಾಯಂ ಪೂರ್ವ ಪರೀಕ್ಷಾರ್ಥ ಸೇವೆಯಲ್ಲಿ ನೇಮಕ ಆದಲ್ಲಿ ಮಾಸಿಕ 18,660-25,300 ರೂಪಾಯಿ ವೇತನ ನಿಗದಿಪಡಿಸಲಾಗಿದೆ. ಎರಡು ವರ್ಷಗಳ ಖಾಯಂ ಪೂರ್ವ ಪರೀಕ್ಷಾರ್ಥ ಸೇವೆ ತೃಪ್ತಿಕರವಾಗಿ ಪೂರೈಸಿದ ಬಳಿಕ ಅಭ್ಯರ್ಥಿಗಳ ನೇಮಕಾತಿಯನ್ನು ಪ್ರಾಧಿಕಾರದಿಂದ ಖಾಯಂಗೊಳಿಸಲಾಗುತ್ತದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















