Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕೋಡಿಹಳ್ಳಿಯಲ್ಲಿ 22 ನೇಯ ವರ್ಷದ ಅದ್ದೂರಿ ಗಣೇಶೋತ್ಸವ ಆಚರಣೆ

---Advertisement---

ವರದಿ ಮತ್ತು ಫೋಟೋ ಕೃಪೆ
ಕೋಡಿಹಳ್ಳಿ ಟಿ.ಶಿವಮೂರ್ತಿ, ಚಳ್ಳಕೆರೆ
ಮೊ : 97427 56304

ಸುದ್ದಿಒನ್, ಚಳ್ಳಕೆರೆ, ಸೆಪ್ಟೆಂಬರ್. 03 : ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಜೈ ಭೀಮ್ ಶ್ರೀ ಯುವ ವಿನಾಯಕ ಸಂಘ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಯುವಕ ಸಂಘ ಇವರ ಸಹಯೋಗದೊಂದಿಗೆ ಈ ಬಾರಿ ದಲಿತ ಸಮುದಾಯದ ಶಕ್ತಿ ದೇವತೆಯಾದ ಶ್ರೀ ಶ್ರೀ ದುರ್ಗಾಂಬಿಕ ದೇವಸ್ಥಾನದ ಆವರಣದಲ್ಲಿ ಶ್ರೀ ಗೌರಿ ಗಣೇಶನನ್ನು ಪ್ರತಿಷ್ಟಾಪಿಸಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.


‎ಪ್ರತಿ ದಿನ ಸಂಜೆ ಯುವಕ ಯುವತಿಯರು ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಡ್ಯಾನ್ಸರ್ ಮೈಕಲ್ ವೆಂಕಿ ನಡೆಸಿಕೊಡುತ್ತಿದ್ದರು, ಅಲ್ಲದೆ ಪ್ರತಿ ದಿನವೂ ವಿವಿಧ ಕುಟುಂಬಗಳಿಂದ ವಿಶೇಷ ಪೂಜೆ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮ ಇರುತಿತ್ತು.


‎ಕೊನೆಯ ದಿನವಾದ ನಿನ್ನೆ (ಸೆಪ್ಟೆಂಬರ್. 02) ಇಡೀ ಸಮುದಾಯದ ಎಲ್ಲ ಜನತೆಗೆ ತಿಪ್ಪಯ್ಯ ಕೆ.ಪಿ.ಟಿ.ಸಿ.ಎಲ್. ಶ್ರೀಮತಿ ಚನ್ನಬಸಮ್ಮ ಕುಟುಂಬ ವರ್ಗದವರಿಂದ ಅನ್ನ ಸಂತರ್ಪಣೆ ನಡೆಯಿತು, ಸುಮಾರು 13 ಅಡಿ ಛತ್ರಪತಿ ಶಿವಾಜಿ  ಇರುವ ಶ್ರೀ ಗಣೇಶ ಮೂರ್ತಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ವಿಸರ್ಜನೆಗೆ ಚಾಲನೆ ನೀಡಲಾಯಿತು.

‎ಗ್ರಾಮದ ಎಲ್ಲ ರಾಜ ಬೀದಿಗಳಲ್ಲಿ ಹೆಜ್ಜೆ ಹಾಕುತ್ತಾ ನೂರಾರು ಯುವಕ ಯುವತಿಯರು ಹಿರಿಯರು ಕುಣಿದು ಕುಪ್ಪಳಿಸಿದರು ಮೆರವಣಿಗೆಯು ಅತ್ಯಂತ ವಿಜೃಂಭಣೆಯಿಂದ ಕೂಡಿತ್ತು,ಗ್ರಾಮದ ಜನರು ಗಣಪನಿಗೆ ವಿಶೇಷ ಪೂಜೆಯನ್ನು ಮಾಡಿಸಿದರು, ಸಾವಿರಾರು ಭಕ್ತರು ಗಣೇಶನ ಕೃಪೆಗೆ ಪಾತ್ರರಾದರು.

‎ಯಾವುದೇ ಅಹಿತಕರ ಘಟನೆಗಳು ನಡೆಯದೆ ಸುರಕ್ಷಿತವಾಗಿ ಗಣಪತಿಯನ್ನು ಪೂಜಿಸಿ ಹೂವಿನ ಹಾರಜು ಪ್ರಕ್ರಿಯೆ ಮುಗಿಸಿ ನಮ್ಮ ಗ್ರಾಮದ ಕೆರೆಯಲ್ಲಿ ಅತ್ಯಂತ ಭಕ್ತಿಪೂರ್ವಕವಾಗಿ ವಿಸರ್ಜನೆ ಮಾಡಲಾಯಿತು.

‎ಈ ಗೌರಿ ಗಣೇಶೋತ್ಸವ ವಿಸರ್ಜನಾ ಮೆರವಣಿಗೆಯಲ್ಲಿ ಸಣ್ಣ ನಾಗಯ್ಯ, ಎಂ.ಏಚ್ ತಿಪ್ಪೇಸ್ವಾಮಿ, ಮಲ್ಲಯ್ಯ, ,ಹನುಮಂತಪ್ಪ, ಪುಟ್ಟಣ್ಣ, ತಿಪ್ಪೇಸ್ವಾಮಿ, ಓಬಣ್ಣ, ದುರುಗಣ್ಣ, ನಿಂಗಣ್ಣ, ಕೊಲ್ಲಾರಪ್ಪ , ಲಿಂಗರಾಜು.ಡಿ, ಮಲ್ಲಿಕಾರ್ಜುನಯ್ಯ.ಟಿ, ವಿನಯ್ ಕುಮಾರ್.ಬಿ.ಎಂ, ಮಂಜುನಾಥ್, ರುದ್ರಮುನಿ.ಏಚ್, ಮೋಹನ್ .ಡಿ ನಂದೀಶ್. ಓ ಶ್ರೀಧರ್.ಏಚ್ ,ನಿಂಗರಾಜು.ಟಿ,  ರಾಜು.ಡಿ , ವಿಜಯ್ ಕುಮಾರ್.ಡಿ, ತಿಪ್ಪೇಸ್ವಾಮಿ.ಯು, ರಮೇಶ್.ಎಂ, ಶಿವಮೂರ್ತಿ.ಟಿ , ಗುರುಮೂರ್ತಿ, ಚಿದಾನಂದ್, ಉಪೇಂದ್ರ, ರವೀಶ್, ಮಲ್ಲಿಕಾರ್ಜುನ್.ಜಿ, ಅರುಣ್ ಕುಮಾರ್.ಟಿ, ದಯಾನಂದ.ಟಿ, ಡ್ಯಾನ್ಸ್ ಮಾಸ್ಟರ್ ವೆಂಕಟೇಶ್, ತಿಪ್ಪೇಶ್ , ಮನೋಜ್ ಕುಮಾರ್.ಟಿ, ಜಯಂತ್, ನಾಗೇಶ್, ಮಂಜು, ಕಿರಣ್, ಸ್ವಾಮಿ.ಆರ್, ಕೋಟೆಶ್, ಗೋಪಿನಾಥ್, ಮೈಲಾರಿ, ದುರುಗೇಶ್, ಅಭಿಷೇಕ್, ವಿಜಯ್.ಎಸ್, ಮಾರಣ್ಣ, ಶಿವಪ್ಪ, ಪರಶುರಾಮ್, ಕಣುಮೇಶ್ , ಮಹೇಶ್, ಕೊಲ್ಲಾರಿ,ಗಣೇಶ್, ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು,ಮತ್ತು ಸಮುದಾಯದ ಎಲ್ಲ ಮುಖಂಡರು, ಯಜಮಾನರು ಸಮಸ್ತ ಯುವಕ ಯುವತಿಯರು, ಸರ್ವ ಸದಸ್ಯರ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...