Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಂಬಾನಿ ಮಗನ ಮದುವೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಗೆ 2 ಕೋಟಿ ವಾಚ್ ಗಿಫ್ಟ್..!

---Advertisement---

ವಿಶ್ವದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಕಿರಿಯ ಮಗನ ಮದುವೆ ಅದ್ದೂರಿಯಾಗಿ ನಡೆದಿದೆ. ಕಳೆದ ಮೂರು ತಿಂಗಳಿನಿಂದಾನೂ ಮದುವೆಯ ಕಾರ್ಯಕ್ರಮಗಳು ನಡೆದಿವೆ. ಸ್ವರ್ಗವನ್ನೇ ಧರೆಗಿಳಿಸಿದ ಮದುವೆಗೆ ಇಂದು ತೆರೆ ಬೀಳಲಿದೆ. ಮದುವೆ ಬಾಲಿವುಡ್, ಟಾಲಿವುಡ್ ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ ಗಳ ಫ್ಯಾಮಿಲಿ ಕೂಡ ಹೋಗಿದ್ದರು. ಅದರಂತೆ ರಾಕಿಂಗ್ ಸ್ಟಾರ್ ಯಶ್ ಅವರಿಗೂ ಆಹ್ವಾನಿವಿತ್ತು. ಮುಖೇಶ್ ಅಂಬಾನಿಯ ಮಗನ ಮದುವೆಗೆ ಹೋಗಿದ್ದಂತ ರಾಕಿಬಾಯ್ ಅವರಿಗೆ ದುಬಾರಿ ಉಡುಗೊರೆಯನ್ನು ಅಂಬಾನಿ ಕುಟುಂಬಸ್ಥರು ನೀಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ವುಡ್ ನ ಸಿಂಡ್ರೆಲಾ ರಾಧಿಕಾ ಪಂಡಿತ್ ಮದುವೆ ಹಾಜರಾಘಿದ್ದರು. ಇದೇ ವೇಳೆ ಟಾಕ್ಸಿಕ್ ಸಿನಿಮಾದ ಹೇರ್ ಸ್ಟೈಲ್ ಕೂಡ ರಿವಿಲ್ ಆಗಿತ್ತು. ಇಬ್ಬರು ಮದುವೆಯನ್ನು ಅಟೆಂಡ್ ಮಾಡಿ ಬಂದಿದ್ದು, ಎರಡು ಕೋಟಿ ಬೆಲೆಯ ವಾಚ್ ಉಡುಗೊರೆಯಾಗಿ ಪಡೆದಿದ್ದಾರೆ. ಸ್ವೊಡ್ಜರ್ಲ್ಯಾಂಡ್ ನ ಆಡಿಮೆರಾಸ್ ಪಿಗೆಟ್ ಬ್ರ್ಯಾಂಡ್ ವಾಚ್ ಇದಾಗಿದೆ.

ಯಶ್ ಅವರಿಗೆ ಮಾತ್ರವಲ್ಲ ಶಾರುಖ್ ಖಾನ್, ಸಲ್ಮಾನ್ ಖಾನ್, ಅಮಿತಾಬ್ ಬಚ್ಚನ್ ಫ್ಯಾಮಿಲಿ, ರಾಮ್ ಚರಣ್ ಫ್ಯಾಮಿಲಿ, ಆಲಿಯಾ ಭಟ್, ರಣಬೀರ್ ಕಪೂರ್, ಪ್ರಿಯಾಂಕ ಚೋಪ್ರಾ, ಜಾಹ್ನವಿ ಕಪೂರ್ ಹೀಗೆ ಬಾಲಿವುಡ್ ಸೆಲೆಬ್ರೆಟಿಗಳ ದಂಡೇ ಅಲ್ಲಿ ನೆರೆದಿತ್ತು. ಎಲ್ಲರಿಗೂ ಈ ದುಬಾರಿ ವಾಚನ್ನು ಉಡುಗೊರೆಯಾಗಿ ನೀಡಲಾಗಿದೆ. ಇದರಲ್ಲಿ ಚಿನ್ನದ ಕೋಟ್ ಬಳಕೆ ಮಾಡಲಾಗಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಸುಮಾರು 5000 ಕೋಟಿ ಹಣ ಬಳಕೆ ಮಾಡಿ, ಮುಖೇಶ್ ಅಂಬಾನಿ ಕಿರಿಯ ಮಗನ ಮದುವೆ ಮಾಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...