Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳಿಗೆ ಶೇ.15ರ ಮೀಸಲಾತಿಯಲ್ಲಿ ಹಂಚಿಕೆ : 400 ರೋಸ್ಟರ್ ಬಿಂದು ಪಾಲನೆಗೆ ರಾಜ್ಯ ಸರ್ಕಾರ ಆದೇಶ

---Advertisement---

ಸುದ್ದಿಒನ್,ಬೆಂಗಳೂರು,ಮೇ.14: ರಾಜ್ಯದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳಿಗೆ ಲಭ್ಯವಿರುವ ಶೇ. 15ರಷ್ಟು ಮೀಸಲಾತಿಯಲ್ಲಿ ಒಳಮೀಸಲಾತಿಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ಹಂಚಿಕೆಗಾಗಿ 400 ರೋಸ್ಟರ್ ಬಿಂದುಗಳ (Roster Points) ವರ್ತುಲಗಳನ್ನು ಪಾಲಿಸುವಂತೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಸರ್ಕಾರದ ಹೊಸ ನಿಯಮದಂತೆ, ಒಟ್ಟು ಲಭ್ಯವಿರುವ 60 ಬಿಂದುಗಳನ್ನು (ಶೇ. 15ರ ಮೀಸಲಾತಿ) ವಿವಿಧ ಪ್ರವರ್ಗಗಳಿಗೆ ಈ ಕೆಳಗಿನಂತೆ ಹಂಚಿಕೆ ಮಾಡಲಾಗಿದೆ:

ಪರಿಶಿಷ್ಟ ಜಾತಿ ಪ್ರವರ್ಗ–ಎ: ಶೇ. 5.25ರಷ್ಟು ಮೀಸಲಾತಿ ನಿಗದಿಪಡಿಸಲಾಗಿದ್ದು, ಒಟ್ಟು 21 ಬಿಂದುಗಳು ಈ ವರ್ಗಕ್ಕೆ ಲಭ್ಯವಾಗಲಿವೆ.

ಪರಿಶಿಷ್ಟ ಜಾತಿ ಪ್ರವರ್ಗ–ಬಿ: ಶೇ. 5.25ರಷ್ಟು ಮೀಸಲಾತಿಯೊಂದಿಗೆ ಈ ವರ್ಗಕ್ಕೂ ಸಹ 21 ಬಿಂದುಗಳನ್ನು ನೀಡಲಾಗಿದೆ.

ಪರಿಶಿಷ್ಟ ಜಾತಿ ಪ್ರವರ್ಗ–ಸಿ: ಈ ವರ್ಗಕ್ಕೆ ಶೇ. 4.5ರಷ್ಟು ಮೀಸಲಾತಿ ನೀಡಲಾಗಿದ್ದು, ಒಟ್ಟು 18 ಬಿಂದುಗಳು ಸಿಗಲಿವೆ.

ಅತ್ಯಂತ ಹಿಂದುಳಿದ ಜಾತಿಗಳಿಗೆ ವಿಶೇಷ ಆದ್ಯತೆ:

ಪ್ರವರ್ಗ ‘ಸಿ’ ಅಡಿಯಲ್ಲಿ ಲಭ್ಯವಾಗುವ ಒಟ್ಟು ಹುದ್ದೆಗಳಲ್ಲಿ ಶೇ. 20ರಷ್ಟು ಹುದ್ದೆಗಳನ್ನು ಪಟ್ಟಿಯಲ್ಲಿರುವ 59 ಅತ್ಯಂತ ಹಿಂದುಳಿದ ಜಾತಿಗಳಿಗೆ ಮೀಸಲಿರಿಸಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ಮೀಸಲಾತಿಯ ಸೌಲಭ್ಯವು ಕಟ್ಟಕಡೆಯ ಜಾತಿಗಳಿಗೂ ತಲುಪುವಂತೆ ಖಚಿತಪಡಿಸಿಕೊಳ್ಳಲಾಗಿದೆ.

Join WhatsApp

Join Now

Join Telegram

Join Now