Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮೋದಿ ಸರ್ಕಾರಕ್ಕೆ 12 ವರ್ಷ : ಚಿತ್ರದುರ್ಗದಲ್ಲಿ ಸ್ವಚ್ಚತಾ ಕಾರ್ಯಕ್ರಮ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ಜೂ. 04 : ನರೇಂದ್ರ ಮೋದಿಯವರ ಸರ್ಕಾರದ 12ನೇ ವರ್ಷದ ಯಶಸ್ವಿ ಹಾಗೂ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಚಿತ್ರದುರ್ಗ ಭಾರತೀಯ ಜನತಾ ಪಾರ್ಟಿಯ ನಗರ ಮಂಡಲದವತಿಯಿಂದ ಚಿತ್ರದುರ್ಗ ನಗರದ ಚಂದ್ರವಳ್ಳಿ ಪ್ರದೇಶದ ಸುತ್ತಮುತ್ತಲಿನ ಹಾಗೂ ಕ್ರೀಡಾಂಗಣದ ಪರಿಸರದ ” ಸ್ವಚ್ಚತಾ ಕಾರ್ಯಕ್ರಮವನ್ನು ಗುರುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಚಿತ್ರದುರ್ಗ ಜಿಲ್ಲಾ ಘಟಕದಉಪಾಧ್ಯಕ್ಷರಾದ ಡಾ. ಸಿದ್ಧಾರ್ಥ್ ಗುಂಡಾರ್ಪಿ ಮಾತನಾಡಿ, ಇಂದಿನ ದಿನಮಾನದಲ್ಲಿ ಕಸವನ್ನು ಎಲ್ಲಿ ಅಂದರೆ ಅಲ್ಲಿ ಹಾಕುತ್ತಿದ್ದಾರೆ. ಇಂದು ಮಳೆಗೆ ಕೊಳೆತು ವಾಸನೆ ಬರುತ್ತಿದೆ ಇದ್ದಲ್ಲದೆ ಇದರಲ್ಲಿ ಪ್ಲಾಸ್ಟಿಕ್ ಸೇರಿಕೊಂಡು ಕೊಳೆಯದೆ ಮಣ್ಣಿನಲ್ಲಿ ವಿಷಕಾರಿಯಾಗಿ ಬೆಳೆಯುತ್ತಿದೆ. ಜನತೆ ಕಸವನ್ನು ಎಲ್ಲಿ ಅಂದರೆ ಅಲ್ಲಿ ಹಾಕುವುದನ್ನು ಬಿಡಬೇಕು, ನಗರಸಭೆಯ ಕಸದ ವಾಹನಕ್ಕೆ ನೀಡುವುದರ ಮೂಲಕ ನಗರವನ್ನು ಸ್ವಚ್ಚ ನಗರವನ್ನಾಗಿ ಇಟ್ಟುಕೊಳ್ಳಬೇಕಿದೆ. ಪ್ರಸ್ತುತ ನಾವೆಲ್ಲ ಭವಿಷ್ಯದ ಪೀಳಿಗೆಯ ಬಗ್ಗೆ ಎಚ್ಚರ ವಹಿಸಬೇಕಿದೆ. ಮೊದಲು ನಾವು ಪರಿಸರವನ್ನು ಸಂರಕ್ಷಿಸಿದರೆ ಮುಂದಿನ ಪೀಳಿಗೆಯು ಸಹ ಪರಿಸರ ಸಂರಕ್ಷಿಸುವ ಪ್ರೀತಿಸುವ ಗುಣವನ್ನು ಬೆಳಸಿಕೊಳ್ಳುತ್ತದೆ. ಪರಿಸರ ಸಂರP್ಷÀಣೆ ಕೇವಲ ಸರಕಾರ, ಕಾನೂನು, ಸಂಘಸಂಸ್ಥೆಗಳಿಗೆ ಸೀಮಿತವಲ್ಲ, ಅದು ಪ್ರತಿಯೊಬ್ಬ ನಾಗರೀಕನ ಜೀವನದ ಅವಿಭಾಜ್ಯ ಜವಾಬ್ದಾರಿ ಅಗಿದೆ ಎಂದರು.

ಇಂದು ಪ್ರಕೃತಿಯಲ್ಲಿ ಭೂಮಿ, ನೀರು ವಾಯು, ಅಗ್ನಿ ಮತ್ತು ಅಕಾಶ ಇವು ಮಾನವನ ಅತಿಯಾದ ಬುದ್ಧಿವಂತಿಕೆಯಿಂದ ಕಲುಷಿತಗೊಂಡಿವೆ. ವಾಯುಮಾಲಿನ್ಯ, ಜಲಮಾಲಿನ್ಯ, ಭೂಮಾಲಿನ್ಯದಿಂದ ಹವಾಮಾನ ವೈಪರೀತ್ಯಗಳಿಂದಾಗಿ ಪ್ರಕೃತಿ ವಿಕೋಪಗಳಾಗುತ್ತಿವೆ. ದಿನದಿಂದ ದಿನಕ್ಕೆ ಮಾನವ ಅತೀಯಾದ ಸುಖದ ಬದುಕಿಗೆ ಪರಿಸರವನ್ನು ನಾಶಮಾಡಿ ಜಾಗತಿಕ ತಾಪಮಾನಕ್ಕೆ ಕಾರಣನಾಗಿz್ದÁನೆ. ನಾವು ವಿದ್ಯಾವಂತರಾಗಿ, ಪ್ರe್ಞÁವಂತರಾಗಿ ಪರಿಸರ ಸಂರಕ್ಷಿಸುವ ಕೆಲಸ ಮಾಡುತ್ತಿಲ್ಲ ಎಂದು ಸಿದ್ಧಾರ್ಥ ಗುಂಡಾರ್ಪಿ ವಿಷಾಧಿಸಿದರು.

ಈ ಸಮಯದಲ್ಲಿ ಚಂದ್ರವಳ್ಳಿ ಮೈದಾನದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ತಾಜ್ಯಗಳು, ವಿವಿಧ ರೀತಿಯ ಕಸವನ್ನು ಸಂಗ್ರಹ ಮಾಡುವುದರ ಮೂಲಕ ನಗರಸಭೆಯ ವಾಹನಕ್ಕೆ ಹಾಕಲಾಯಿತು.” ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಾರ್ಟಿಯ ಪದಾಧಿಕಾರಿಗಳ ಜೊತೆಗೆ ನಗರಸಭೆಯ ಪೌರ ಕಾರ್ಮಿಕರು ಸಹಾ ಜೊತೆಗೂಡುವುದರ ಮೂಲಕ ಸ್ವಚ್ಚತೆ ಸಹಕಾರ ನೀಡಿದರು.

ಈ ಸಂದರ್ಭದಲ್ಲಿ  ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ  ವೆಂಕಟೇಶ್‍ಯಾದವ್ ,ಮಾಧುರಿಗಿರೀಶ್ , ಮೋಹನ್ ಕುಮಾರ್ ಹಾಗೂ ಉಪಾದ್ಯಕ್ಷರಾದ ಜಿ.ಎನ್.ಲಿಂಗರಾಜು ,ನಗರಪ್ರಧಾನ ಕಾರ್ಯದರ್ಶಿಗಳಾದ ಎಸ್.ಬಸವೇಶ್ ,ಲೀಲಾ ಶಶಿಧರ್,ಸಾಮಾಜಿಕ ಜಾಲತಾಣ ಅಣ್ಣಪ್ಪ ,ಜಿಲ್ಲಾ ಕಾರ್ಯದರ್ಶಿ ರೇಖಾ , ನಗರ ಉಪಾಧ್ಯಕ್ಷರಾದ ಮಹಂತೇಶ್,ಪಲ್ಲವಿ ಪ್ರಸನ್ನ,ನಗರ ಕಾರ್ಯದರ್ಶಿ ನಾಗರಾಜ್ ,ವಿರೂಪಾಕ್ಷಿ ,ಸುಮ, ಮಾಧ್ಯಮ ವಕ್ತಾರರಾದ ನಾಗರಾಜ್‍ಬೇದ್ರೆ,ನಗರಾಧ್ಯಕ್ಷರಾದ ಹೆಚ್.ಎನ್.ಲೋಕೇಶ್ , ನಗರಮಂಡಲದ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು,ಯಾವ ಮೋರ್ಚಾ ಅಧ್ಯಕ್ಷರಾದ ,ಡಾ.ವಸಂತ್ ಆಚಾರ್,ಸಂಜಯ್ ಡಿ.ಸಿ , ಅರುಣ್, ಯಶು , ಪ್ರದೀಪ್, ನಾಗರಾಜಪ್ಪ ಹಾಗೂ ಇನ್ನಿತರ ಕಾರ್ಯಕರ್ತರು , ಮುಖಂಡರು ಸ್ವಚ್ಚತಾ ಕಾರ್ಯಕ್ರಮದಲ್ಲಿ  ಪಾಲ್ಗೊಂಡಿದ್ದರು .

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now