ಬೆಂಗಳೂರು: ಯುವ ರಾಜ್‍ಕುಮಾರ್ ಬಹಳ ನಿರೀಕ್ಷೆ ಇಟ್ಟುಕೊಂಡಿರುವಂತ ಸಿನಿಮಾ ಎಕ್ಕಾ ರಿಲೀಸ್ ಗೆ ರೆಡಿಯಾಗಿದೆ. ಕಳೆದ ಕೆಲವು ದಿನಗಳ ಹಿಂದಷ್ಟೇ ಸಿನಿಮಾ ಪ್ರಚಾರಕ್ಕಾಗಿ ತಂಡ ತುಮಕೂರಿಗೆ ಹೋಗಿತ್ತು. ಈ ವೇಳೆ ಅವಗಢ ಒಂದು ನಡೆದಿತ್ತು. ಮಹಿಳೆಗೆ ಪೆಟ್ಟಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಇದೀಗ ಯುವ ರಾಜ್‍ಕುಮಾರ್ ಕ್ಷಮೆ ಕೇಳಿದ್ದಾರೆ.
ಇಂದು ಎಕ್ಕಾ ಸಿನಿಮಾ ಕಾರ್ಯಕ್ರಮದ ಸಮಯದಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಸಿನಿಮಾ ಪ್ರಚಾರದ ವೇಳೆ ಎಕ್ಕಾ ಟೀಂ ಮಠಕ್ಕೆ ಭೇಟಿ ನೀಡಿತ್ತು. ಜನಸಂದಣಿ ಹೆಚ್ಚಾಗಿದ್ದ ಕಾರಣ ತಳ್ಳಾಟ ನೂಕಾಟವಾಗಿದೆ. ಈ ಘಟನೆಯಲ್ಲಿ ಮಹಿಳೆಯ ಕಾಲಿಗೆ ಪೆಟ್ಟು ಬಿದ್ದ ವಿಚಾರ ನನಗೆ ಗೊತ್ತಿರಲಿಲ್ಲ. ಬೆಂಗಳೂರಿಗೆ ವಾಪಾಸ್ ಆದಾಗ ನೋಡಿದೆ. ಆ ಬಳಿಕ ನಮ್ಮ ಅಭಿಮಾನಿ ಬಳಗದಿಂದ ಮಹಿಳೆಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ಮಾಡಿಕೊಡಲಾಗಿದೆ. ಬೌನ್ಸರ್ ತಳ್ಳಿದ್ದಾರೆ ಎಂಬ ವಿಚಾರ ಕೇಳಿದೆವು. ಅವರ ಪರವಾಗಿ ನಾವೂ ಕ್ಷಮೆ ಕೇಳುತ್ತೇವೆ ಎಂದಿದ್ದಾರೆ.
ಎಕ್ಕಾ ಸಿನಿಮಾದ ಪ್ರಚಾರಕ್ಕಾಗಿ ಇತ್ತೀಚೆಗಷ್ಟೇ ಸಿನಿಮಾ ತಂಡ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿತ್ತು. ಈ ವೇಳೆ ಬೌನ್ಸರ್ ಇದ್ದ ಕಾರು ಮಹಿಳೆಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಮಹಿಳೆ ಕಾಲಿಗೆ ಗಾಯವಾಗಿತ್ತು. ಆದರೆ ಸಿನಿಮಾ ತಂಡ ನೋಡದೆ ಹೋಗಿ ಬಿಟ್ಟಿತ್ತು ಎಂಬ ಆರೋಪವಿತ್ತು. ಅದರ ಬಗ್ಗೆ ತಮ್ಮ ಸಿನಿಮಾ ಪ್ರೆಸ್ ಮೀಟ್ ನಲ್ಲಿಯೇ ಕ್ಲಾರಿಟಿಯೊಂದನ್ನ ಯುವ ರಾಜ್‍ಕುಮಾರ್ ನೀಡಿದ್ದಾರೆ. ಸದ್ಯಕ್ಜೆ ಆ ಮಹಿಳೆ ಆರೋಗ್ಯ ಸುಧಾರಿಸಿದೆ. ಸಿನಿಮಾ ತಂಡವೇ ಚಿಕಿತ್ಸಾ ವೆಚ್ಚ ನೋಡಿಕೊಂಡಿದೆ ಎನ್ನಲಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















