ಧಾರವಾಡ: ಇತ್ತೀಗಂತು ಹಾರ್ಟ್ ಅಟ್ಯಾಕ್ ಸುದ್ದಿ ಕೇಳಿ ಕೇಳಿನೆ ಜನ ಸುಸ್ತಾಗಿ ಹೋಗಿದ್ದಾರೆ. ಇಂದು ಧಾರವಾಡದಲ್ಲೂ ಹಾರ್ಟ್ ಅಟ್ಯಾಕ್ ಗೆ ಯುವತಿ ಬಲಿಯಾಗಿದ್ದಾಳೆ. ಸಾಕಷ್ಟು ಕನಸು ಕಂಡಿದ್ದ ಮಗಳು ಕಣ್ಣ ಮುಂದೆಯೇ ಸಾವನ್ನಪ್ಪಿದ್ರೆ ಆ ತಾಯಿ ಹೃದಯ ಹೇಗೆ ತಡೆದುಕೊಳ್ಳುತ್ತದೆ ಹೇಳಿ. ಮಗಳ ಸಾವಿನಿಂದ ತಾಯಿ ಹೃದಯವೇ ಒಡೆದು ಹೋಗಿದೆ. ಆ ನೋವಲ್ಲಿ ಮಗಳ ಬಗ್ಗೆ ಹೇಳಿದ್ದು ಹೀಗೆ,
ಮಗಳು ಇಲ್ಲಿಯೇ ಅಗ್ರಿ ಕಾಲೇಜಲ್ಲಿ ಎಂಎಸ್ಸಿ ಮಾಡಿದ್ಲು. ಆಮೇಲೆ ಜಿಕೆವಿಕೆಯಲ್ಲೂ ಓದಿದ್ಲು. ನೆಕ್ಸ್ಟ್ ನೇಟ್ ಕೋಚಿಂಗ್ ತೆಗೆದುಕೊಳ್ತಾ ಇದ್ಲು. ಕೆಎಎಸ್, ಐಎಎಸ್ ಮಾಡಬೇಕು ಅಂತ ಕೋಚಿಂಗ್ ತಗೊಂಡ್ಲು. ನೋಡುದ್ರೆ ಈಗ ಅವಳೆ ಇಲ್ಲ ಎಂದು ಕಣ್ಣೀರ ಹಾಕಿದ್ದಾರೆ. ಬೆಳೆದ ಮಕ್ಕಳು ಕಣ್ಣ ಮುಂದೆ ಸಾಯೋದು ಅಂದ್ರೆ ಹೆತ್ತ ಕರುಳಿಗೆ ಸಾಮಾನ್ಯವಾದ ನೋವೇನು ಅಲ್ಲ. ಅಷ್ಟಕ್ಕೂ ಆಗಿದ್ದೇನು ಅಂತ ಕೇಳಿದಾಗ ಆ ತಾಯಿ ಹೇಳಿದ್ದು ಹೀಗೆ,
ಸ್ವಲ್ಪ ಉಸಿರುಕಟ್ಟಿದೆ ಅಂತ ಹೇಳಿದ್ಲು. ನೋಡಿದ್ರೆ ತಕ್ಷಣ ಕುಸಿದು ಬಿದ್ದಳು. ನಮಗೂ ಗಾಬರಿ ಆಯ್ತು. ಆಸ್ಪತ್ರೆಗೂ ಸೇರಿಸಿದೆವು. ಆದರೆ ಆ ಸಮಯದಲ್ಲಿ ಡಾಕ್ಟರ್ ಏನು ಹೇಳಿರಲಿಲ್ಲ. ಬಹಳ ಜಾಣೆ ಇದ್ದಳು. ಬೆಳಗ್ಗೆ ಆರಾಮ ಎದ್ದಿದ್ದಳು. ಫ್ರೆಶ್ ಅಪ್ ಆಗೋದಕ್ಕೆ ಹೋದವಳು ವಾಪಾಸ್ ಬರ್ಲೆ ಇಲ್ಲ. ಸ್ಟಡಿ ಮಾಡ್ತಾ ಇದ್ದದ್ದೇ ಅವಳಿಗೆ ಟೆನ್ಶನ್. ಅದು ಓದಬೇಕು, ಇದು ಓದಬೇಕು ಅಂತ ತಲೆ ಕೆಡಿಸಿಕೊಂಡಿದ್ಲು. ಜಾಬ್ ಮಾಡಬೇಕು ಅನ್ನೋದು ಅವಳಿಗೆ ಬಹಳ ಆಸೆ ಇತ್ತು ಅಂತ ಮಗಳ ಸಾವಿನ ಬಗ್ಗೆ ನೋವು ಹಂಚಿಕೊಂಡಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















