Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಯುವಜನತೆ ಮೊಬೈಲ್‍ ಬಿಟ್ಟು ರಂಗಭೂಮಿಯೆಡೆಗೆ ಆಸಕ್ತಿ ವಹಿಸಬೇಕು : ಶ್ರೀ ಶಿವಲಿಗಾಂನದ ಸ್ವಾಮೀಜಿ

---Advertisement---

 

 

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 28 :
ನಾಟಕಗಳು ಮನುಷ್ಯನಲ್ಲಿ ಸೃಜನಶೀಲತೆಯನ್ನು ಹೆಚ್ಚಿಸಿ ಶಿಸ್ತು, ಕಲ್ಪನಾಶಕ್ತಿ, ವಿವೇಚನಾಶಕ್ತಿ, ತಾರ್ಕಿಕತೆ, ಗ್ರಹಿಕೆ, ಅನುಕರಣೆ, ಸಮಯ ಪಾಲನೆ, ಏಕಾಗ್ರತೆ ಹೆಚ್ಚುಸುವಲ್ಲಿ ಸಹಕಾರಿಯಾಗಿದೆ ಆದರಿಂದ ಯುವಜನತೆ ತಮ್ಮನು ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸದ್ಗುರು ಕಬೀರಾನಂದ ಆಶ್ರಮದ ಶ್ರೀ ಶಿವಲಿಗಾಂನದ ಸ್ವಾಮೀಜಿ ತಿಳಿಸಿದರು.

ನಗರದ ತರಾಸು ರಂಗಮಂದಿರದಲ್ಲಿ ಬುಧವಾರ ಬಾದರದಿನ್ನಿ ಆಟ್ರ್ಸ್ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಆಶ್ರಯದಲ್ಲಿ ಆಯೋಜಿಸಿದ್ದ ಬಾದರದಿನ್ನಿ ರಂಗೋತ್ಸವ 2024 ಎರಡು ದಿನಗಳ ನಾಟಕಗಳ ಪ್ರದರ್ಶನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಂಗಭೂಮಿ ಹರಿಯುವ ನದಿ ಇದಂತೆ. ನಾವು ಎಷ್ಟೇ ಆಧುನಿಕತೆ ಕಡೆ ನಡೆದರೂ ಇಂದಿಗೂ ಕೂಡ ರಂಗಭೂಮಿ ತನ್ನ ಅಸ್ತಿತ್ವ ಉಳಿಸಿಕೊಂಡು ಬಂದಿದೆ. ಇಲ್ಲಿ ನೂರಾರು ಕಲಾವಿದರು ತಮ್ಮ ಜೀವನವನ್ನು ಕಟ್ಟಿಕೊಂಡು ಸಾಧನೆ ಮಾಡಿದ ಉದಾಹರಣೆ ಇದೆ. ರಾಜ್ಯದಲ್ಲಿ ಹಲವಾರ ಸಂಘ ಸಂಸ್ಥೆಗಳು ಕಲಾವಿದರನ್ನು ಸಂಘಟಿಸಿ ನಾಟಕ ತಯಾರು ಮಾಡಿ ರಾಜ್ಯದ ನಾನಾ ಭಾಗಗಳಿಗೆ ಸಂಚರಿಸಿ ಪ್ರದರ್ಶನ ನೀಡಿವ ಮೂಲಕ ರಂಗಭೂಮಿಯನ್ನು ಬೆಳಸುವಲ್ಲಿ ಕೊಡುಗೆ ನೀಡಿದ್ದಾರೆ. ನಾಟಕಗಳಿಂದ ತಮ್ಮ ಪ್ರತಿಭೆಯನ್ನು ಸಾಬಿತು ಮಾಡಿ ಬಹಳಷ್ಟು ಕಲಾವಿದರು ದಾರವಾಹಿ ಹಾಗೂ ಸಿನಿಮಾ ರಂಗದಲ್ಲಿ ಸಾಧನೆ ಮಾಡಿದ್ದಾರೆ.

ಯುವಜನ ಮೊಬೈಲ್‍ದಿಂದ ದೂರವಾಗಿ ಇಂತಹ ಕಲೆಗಳಲ್ಲಿ ತಮ್ಮನು ತೊಡಗಿಸಿಕೊಂಡು ತಮ್ಮ ಜೀವನದಲ್ಲಿ ಶಿಸ್ತು, ಸಮಯ ಪಾಲನೆ, ಏಕಾಗ್ರತೆ ಹೆಚ್ಚಿಸಿಕೊಂಡು ಜೀವನದಲ್ಲಿ ಉತ್ತಮ ಸಾಧನೆ ಮಾಡಬಹುದು. ಬಾದರದಿನ್ನಿ ಆಟ್ರ್ಸ್ ಅಕಾಡೆಮಿಯು ಪ್ರತಿ ವರ್ಷ ನಾಟಕೋತ್ಸವ ಆಯೋಜಿಸುವ ಮೂಲಕ ನಗರದಲ್ಲಿ ಹೊಸ ಕಲಾವಿದರನ್ನು ಹುಟ್ಟುಹಾಕುತ್ತಿದ್ದಾರೆ ಎಂದು ತಿಳಿಸಿದರು.

ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಎಂ.ವೀರೇಶ್ ಮಾತನಾಡಿ, ಅಶೋಕ ಬಾದರದಿನ್ನಿ ಅವರು ರಂಗಭೂಮಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿ ಬಂದ ಪರಿಸರ, ಮೂಡನಂಭಿಕೆ, ಕಂದಾಚಾರ ಮುಂತಾದ ರೂಪಕಗಳು ಸಮಾಜದಲ್ಲಿ ಮೌಡ್ಯಗಳನ್ನು ಕಿತ್ತೋಗೆಯುವಂತೆ ಸಂದೇಶ ನೀಡಿದೆ. ರಂಗಭುಮಿಗೆ ಅನೇಕ ಕಲಾವಿದರನ್ನು ಹಾಗೂ ಕಲಾ ತಂಡಗಳನ್ನು ಹಟ್ಟುಹಾಕುವಲ್ಲಿ ಪ್ರಥಮರಾಗಿದ್ದಾರೆ. ಅವರಿಂದ ತರಬೇತಿಗೊಂಡ ಅನೇಕ ಕಲಾ ತಂಡಗಳು ಇಂದು ರಾಷ್ಟಮಟ್ಟದಲ್ಲಿ ದಾಖಲೆಗಳನ್ನು ಸೃಷ್ಠಿಸಿದ್ದಾವೆ. ರಂಗಭೂಮಿ ಒಂದು ಪ್ರಭಲವಾದ ಮಾಧ್ಯಮ ಅದಿರಂ ಸಮಾಜಕ್ಕೆ ಉತ್ತಮ ಸಂದೇಶ ನೀಡಬಹುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬಾದರದಿನ್ನಿ ಆಟ್ರ್ಸ್ ಅಕಾಡೆಮಿಯ ಕಲಾವಿದರು ಪ್ರಕಾಶ್ ಬಾದರದಿನ್ನಿ ನಿರ್ದೇಶನದ ನಾ.ಶ್ರೀನಿವಾಸ ಪಾಪು ರಚನೆಯ ಕನಸಿನವರು ನಾಟಕವನ್ನು ಪ್ರದರ್ಶಿಸಿದರು.

ಇಳಕಲ್‍ನ ರಂಗಕರ್ಮಿ ಮಹಂತೇಶ್ ಗಜೇಂದ್ರಗÀಡ, ಹಿರಿಯ ಸಂಶೋಧಕ ಡಾ.ಬಿ.ರಾಜಶೇಖರಪ್ಪ, ಸಾಹತಿ ಡಾ.ಯಶೋಧಾ ರಾಜಶೇಖರಪ್ಪ, ಬಾದರದಿನ್ನಿ ಆಟ್ರ್ಸ್ ಅಕಾಡೆಮಿಯ ಅಧ್ಯಕ್ಷೆ ಅನಸೂಯಾ ಬಾದರದಿನಿ, ರಂಗಕರ್ಮಿಗಳಾದ ಕೆ.ಪಿ.ಎಂ.ಗಣೇಶಯ್ಯ, ಎಂ.ಕೆ.ಹರೀಶ್, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಜಂಬುನಾಥ್‍ಮತ್ತಿತರರು ಇದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment