ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸದ್ಯ ಕಾಂತಾರ ಚಾಪ್ಟರ್ 1ರಲ್ಲಿ ಬ್ಯುಸಿಯಾಗಿದ್ದಾರೆ. ಕಾಂತಾರಾ ಚಾಪ್ಟರ್ 1 ನೋಡುವುದಕ್ಕಾಗಿಯೇ ಹಲವರು ಕಾಯುತ್ತಿದ್ದಾರೆ. ಇದರ ನಡುವೆ ರಿಷಬ್ ಶೆಟ್ಟಿ ಅವರಿಗೆ ದೈವ ಎಚ್ಚರಿಕೆಯೊಂದನ್ನ ನೀಡಿದೆ. ಅಕ್ಕ ಪಕ್ಕ ಇರುವ ಶತ್ರುಗಳ ಬಗ್ಗೆ ಎಚ್ಚರಿಕೆ ನೀಡಿದೆ. ಹರಕೆ ಹೊತ್ತುಕೊಳ್ಳುವಂತೆ ಸೂಚನೆ ನೀಡಿದೆ.

ಮಂಗಳೂರಿನಲ್ಲಿ ನಿನ್ನೆ ತಡರಾತ್ರಿ ಪಂಜುರ್ಲಿ ನೇಮಕ ನಡೆದಿದೆ. ಈ ನೇಮಕದಲ್ಲಿ ರಿಷಬ್ ಶೆಟ್ಟಿ ತಮ್ಮ ಪತ್ನಿಯೊಂದಿಗೆ ಭಾಗಿಯಾಗಿದ್ದರು. ರಾತ್ರಿ 11ರಿಂದ ಬೆಳಗಿನ ಜಾವ 4 ಗಂಟೆಯವರೆಗೂ ನಡೆದಿದೆ. ವಾರಾಹಿ ಪಂಜುರ್ಲಿ ದೈವದಲ್ಲಿ ರಿಷಬ್ ಶೆಟ್ಟಿ ಭಕ್ತಿ ಭಾವದಿಂದ ನಡೆದುಕೊಂಡಿದ್ದಾರೆ. ಈ ವೇಳೆ ರಿಷಬ್ ಶೆಟ್ಟಿ ದೈವದ ಬಳಿ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಇದೇ ವೇಳೆ ದೈವ ರಿಷಬ್ ಶೆಟ್ಟಿ ಅವರಿಗೆ ಒಂದಷ್ಟು ಸಲಹೆ ಸೂಚನೆಯನ್ನು ನೀಡಿದೆ.

ಜಗತ್ತಿನಲ್ಲೆಡೆ ನಿನಗೆ ದುಷ್ಮನ್ ಇದ್ದಾರೆ. ನಿನ್ನ ಸಂಸಾರವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ನಿನ್ನ ಕಾರ್ಯ ಫಲ ಯಶಸ್ವಿಯಾಗದಂತೆ ಹಾಳು ಮಾಡಲು ಭಾರೀ ಸಂಚು ನಡೆಯುತ್ತಿದೆ. ಈಗ ಗಂಡಾಂತರ ಬಂದಿತೆಂದು ಬಂದಿದ್ದೀಯಾ..? ನಿನ್ನ ನಂಬಿದ ದೈವ ಕೈ ಬಿಡಲ್ಲ. ಯಾರೋ ನಿನಗೆ ಕೇಡು ಬಗೆದಿದ್ದಾರೆ. ಅವರು ಯಾರೆಂದು ನಾನು ಹೇಳುವುದಿಲ್ಲ. ನಿನಗೆ ಕೇಡು ಆಗದಂತೆ ನಾನು ನೋಡಿಕೊಳ್ಳುತ್ತೇನೆ. ನನಗೆ ಸೇವೆ ನೀಡುವ ಹರಕೆ ಹೇಳಿಕೊ ಐದು ತಿಂಗಳಲ್ಲಿ ಒಳ್ಳೆಯದು ಮಾಡುತ್ತೇನೆ ಎಂದು ದೈವ ಭರವಸೆಯನ್ನು ನೀಡಿದೆ. ಬಳಿಕ ರಿಷಬ್ ಶೆಟ್ಟಿ ಕೂಡ ದೈವದ ಬಳಿ ಕೈಮುಗಿದು ಬೇಡಿಕೊಂಡು, ಹರಕೆ ಹೊತ್ತಿದ್ದಾರೆ.

