Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಧಾರವಾಡದಲ್ಲಿ ಲಂಚ ಪಡೆಯುವಾಗಲೆ ಲೋಕಾಯುಕ್ತ ಬಲೆಗೆ ಬಿದ್ದ ಡಿಸಿ..!

---Advertisement---

ಧಾರವಾಡ: ಬೆಂಗಳೂರು ಲೋಕಾಯುಕ್ತ ಅಧಿಕಾರಿಗಳು ಭರ್ಜರಿಯಾಗಿನೇ ಟ್ರ್ಯಾಪ್ ಮಾಡಿದ್ದಾರೆ. ಲಂಚ ಪಡೆಯುವಾಗಲೇ ಲೋಕಾಯುಕ್ತ ಬಲೆಗೆ ಕಮರ್ಷಿಯಲ್ ಟ್ಯಾಕ್ಸ್ ಡಿಸಿ ಬಿದ್ದಿದ್ದಾರೆ. ಭರತ್ ಹೆಗ್ಗಡೆ ಹೀಗೆ ಲೋಕಾಯುಕ್ತ ಅಧಿಕಾರಿಗಳ ಕೈಗೆ ತಗಲಾಕಿಕೊಂಡ ಕಮರ್ಷಿಯಲ್ ಟ್ಯಾಕ್ಸ್ ಡಿಸಿ.

ಸುಮಾರು 6 ಲಕ್ಷ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ಈ ಭರತ್ ವಿರುದ್ಧ ಒಂದಷ್ಟು ದೂರುಗಳು ಇದ್ದವು. ವಿಪರೀತ ಹಣದ ಆಸೆಗೆ ಬಿದ್ದಿದ್ದಾರೆ ಅನ್ನೋದು. ಆ ಸಂಬಂಧ ರೆಡ್ ಹ್ಯಾಂಡ್ ಆಗಿ ಹಿಡಿಯಲು ಸಾಕ್ಷಿಯನ್ನು ನೀಡುತ್ತೇವೆ ಎಂದು ಲೋಕಾಯುಕ್ತ ಅಧಿಕಾರಿಗಳಿಗೆ ವ್ಯಕ್ತಿಯೊಬ್ಬರು ದೂರನ್ನ ನೀಡಿದ್ದರು‌. ಆ ದೂರುದಾರನಿಗೆ ಈ ಕಮರ್ಷಿಯಲ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ಡಿಸಿ ಈ ಮೊದಲು 60 ಲಕ್ಷ ಹಣವನ್ನ ಕೇಳಿದ್ದರಂತೆ. ಆ ಸಂಬಂಧ ನೋಟೀಸ್ ಕೂಡ ನೀಡಿದ್ದರಂತೆ. ಈ ಸಂಬಂಧ 60 ಬೇಡ 6 ಲಕ್ಷ ಹಣವನ್ನ ನೀಡುವಂತೆ ಬೇಡಿಕೆ ಇಟ್ಟಿದ್ದರಂತೆ. ಅದರ ಪರಿಣಾಮ ಲೋಕಾಯುಕ್ತರ ಗಮನಕ್ಕೆ ತಂದಿದ್ದ ಆ ವ್ಯಕ್ತಿ ಲಂಚ ನೀಡಲು ಹೋಗಿದ್ದಾರೆ. ಇದೇ ವೇಳೆ ಡಿಸಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.

ಈ ಮೂಲಕ ದೊಡ್ಡ ಭ್ರಷ್ಟಾಚಾರವನ್ನ ಬೇಧಿಸುವಲ್ಲಿ ಲೋಕಾಯುಕ್ತ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಅಂಕೋಲ ಮೂಲದ ಉದ್ಯಮಿಗೆ ಲಂಚದ ಬೇಡಿಕೆಯನ್ನ ಇಟ್ಟಿದ್ದರಂತೆ. ಆ ಉದ್ಯಮಿ 8 ಟಿಪ್ಪರ್ ಗಳನ್ನ 2008 ರಲ್ಲಿ ಖರೀದಿ ಮಾಡಿದ್ದರಂತೆ. ಅದರ ಟ್ಯಾಕ್ಸ್ 60 ಲಕ್ಷ ಆಗಿರುತ್ತೆ‌. ಆ ಟ್ಯಾಕ್ಸ್ ನ ವಿಶೆರಷ ಯೋಜನೆಯಡಿ ವಾಪಾಸ್ ಪಡೆದಿರುತ್ತಾರೆ. ಇದು ಟ್ಯಾಕ್ಸ್ ಎಇಸಿ ಗಮನಕ್ಕೆ ಬಂದಿರುತ್ತೆ. ಸುಳ್ಳು ದಾಖಲೆಗಳನ್ನ ನೀಡಿ ಹಣ ಪಡೆದಿದ್ದೀರಿ ಎಂದು ನೋಟೀಸ್ ನೀಡಿರುತ್ತಾರೆ. ಸುಮಾರು ಬಾರಿ ಆ ಉದ್ಯಮಿ ವಿಚಾರಣೆಗೆ ಹಾಜರಾಗಿರುತ್ತಾರೆ. ಕೇಸ್ ವಾಪಾಸ್ ಪಡೆಯಲು ಆರು ಲಕ್ಷ ಲಂಚ ಕೊಡಿ ಎಂದು ಬೇಡಿಕೆ ಇಟ್ಟಿರುತ್ತಾರೆ. ಈ ಸಂಬಂಧ ಆ ಉದ್ಯಮಿ ಲೋಕಾಯುಕ್ತ ಪೊಲೀಸರ ಮೊರೆ ಹೋಗಿದ್ದು, ಈಗ ಡಿಸಿ ಲಾಕ್ ಆಗಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...