ಸಾಮಾನ್ಯ ಜನರಿಗೂ ವಿಮಾನದ ಮೂಲಕ ಆಕಾಶದಲ್ಲಿ ಹಾರಾಡಬೇಕೆಂಬ ಆಸೆ ಇರುತ್ತದೆ. ಇದನ್ನು ತಿಳಿದ ವಿಮಾನಯಾನ ಸಂಸ್ಥೆಗಳು ವಿಶೇಷ ರಿಯಾಯಿತಿ ದರಗಳನ್ನು ಪ್ರಕಟಿಸುತ್ತಿವೆ.ಈಗ ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ಕೂಡ ಭರ್ಜರಿ ‘ಪೇ ಡೇ ಸೇಲ್’ (Pay Day Sale) ಪ್ರಕಟಿಸಿದೆ.
ವಿಮಾನ ಪ್ರಯಾಣಿಕರಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ಸಂತಸದ ಸಿಹಿ ಸುದ್ದಿ ನೀಡಿದ್ದು, ರೈಲು ಟಿಕೆಟ್ ದರದಲ್ಲೇ ವಿಮಾನ ಪ್ರಯಾಣ ಮಾಡುವ ಆಸೆ ಈಡೇರಲಿದೆ. ತನ್ನ ವಿಶೇಷ ‘ಪೇ ಡೇ ಸೇಲ್’ (Pay Day Sale) ಅಡಿಯಲ್ಲಿ ಕೇವಲ ₹1,450 ಆರಂಭಿಕ ದರದಲ್ಲಿ ದೇಶೀಯ ವಿಮಾನ ಟಿಕೆಟ್‌ಗಳನ್ನು ಘೋಷಿಸಿದೆ. ಮಾರ್ಚ್ 1ರ ಒಳಗೆ ಟಿಕೆಟ್ ಬುಕ್ ಮಾಡಬೇಕು.ಈಗ ಬುಕ್ ಮಾಡಿದ ಟಿಕೆಟ್ ಬಳಸಿ ಈ ವರ್ಷದ ಮಾರ್ಚ್ 3 ರಿಂದ ಅಕ್ಟೋಬರ್ 8 ರ ನಡುವೆ ಯಾವಾಗ ಬೇಕಾದರೂ ಪ್ರಯಾಣಿಸಬಹುದು.
ಎಕ್ಸ್‌ಪ್ರೆಸ್ ಲೈಟ್’ (Express Lite) ದರಗಳು ಕೇವಲ ₹1,450 ರಿಂದ ಪ್ರಾರಂಭವಾಗುತ್ತವೆ. ‘ಎಕ್ಸ್‌ಪ್ರೆಸ್ ವ್ಯಾಲ್ಯೂ’ ದರಗಳು ₹1,500 ರಿಂದ ಆರಂಭ.ವಿದೇಶಿ ಪ್ರಯಾಣದ ಟಿಕೆಟ್ ದರಗಳು ಕೇವಲ ₹6,655 ರಿಂದ ಪ್ರಾರಂಭವಾಗುತ್ತವೆ. ಈ ಆಫರ್ ಅಡಿಯಲ್ಲಿ ಸೀಟುಗಳು ಸೀಮಿತವಾಗಿವೆ. ಹಾಗಾಗಿ ಮೊದಲು ಬುಕ್ ಮಾಡಿದವರಿಗೆ ಮಾತ್ರ ಕಡಿಮೆ ದರದ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚು.
ಈ ವಿಶೇಷ ರಿಯಾಯಿತಿ ದರಗಳು ಕೇವಲ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಅಧಿಕೃತ ವೆಬ್‌ಸೈಟ್ (airindiaexpress.com) ಅಥವಾ ಅವರ ಮೊಬೈಲ್ ಆಪ್ ಮೂಲಕ ಬುಕ್ ಮಾಡಿದರೆ ಮಾತ್ರ ಲಭ್ಯವಿರುತ್ತವೆ. ಈ ಬುಕ್ಕಿಂಗ್‌ಗೆ ಯಾವುದೇ ಹೆಚ್ಚುವರಿ ‘ಕನ್ವೀನಿಯನ್ಸ್ ಫೀ’ (Convenience Fee) ವಿಧಿಸಲಾಗುವುದಿಲ್ಲ. ಈ ರಿಯಾಯಿತಿಯು ಆಯ್ದ ಮಾರ್ಗಗಳು ಮತ್ತು ಆಯ್ದ ದಿನಾಂಕಗಳಿಗೆ ಮಾತ್ರ ಅನ್ವಯವಾಗಬಹುದು.ದರಗಳಲ್ಲಿ ಬೇಸ್ ಫೇರ್, ತೆರಿಗೆಗಳು ಮತ್ತು ಏರ್‌ಪೋರ್ಟ್ ಶುಲ್ಕಗಳು ಸೇರಿವೆ. ಆದರೆ ಇತರ ಹೆಚ್ಚುವರಿ ಸೇವಾ ಶುಲ್ಕಗಳು ಇದರಲ್ಲಿ ಸೇರಿರುವುದಿಲ್ಲ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











